ತಿಂಡಿ ತೀರ್ಥ

ರುಚಿ ರುಚಿಯಾದ ಮಂಗಳೂರು ಬನ್ಸ್ ಈಗ ಮನೇಲೆ ಮಾಡ್ಕೊಳ್ಳಿ

ಬೇಕಾಗುವ ಸಾಮಗ್ರಿಗಳು

ಬಾಳೆಹಣ್ಣು – 1
ಮೈದಾ ಹಿಟ್ಟು – 1.5 ಕಪ್
ಮೊಸರು – ½ ಕಪ್
ಸೋಡಾ ಪುಡಿ – ½ ಚಮಚ
ಜೀರಿಗೆ – ½ ಚಮಚ
ಸಕ್ಕರೆ – 4-5 ಚಮಚ
ಉಪ್ಪು – ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ

ಬಾಳೆಹಣ್ಣಿನ ಸಿಪ್ಪೆ ತೆಗೆದು, ಅದನ್ನು ಚೆನ್ನಾಗಿ ಕೈಯಿಂದ ಹಿಚುಕಬೇಕು. ನಂತರ ಮೇಲಿನ ಎಲ್ಲ ಸಾಮಗ್ರಿಗಳನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ 5-6 ಗಂಟೆ ಮುಚ್ಚಿ ಇಡಬೇಕು.

ನಿಂಬೆ ಹಣ್ಣಿನ ಗಾತ್ರದ ಹಿಟ್ಟು ತೆಗೆದುಕೊಂಡು, ಪೂರಿಯ ರೀತಿಯಲ್ಲಿ ಲಟ್ಟಿಸಬೇಕು. ಇದನ್ನು ಮಾಡುವಾಗ ಕಡಿಮೆ ಪ್ರಮಾಣದಲ್ಲಿ ಹಿಟ್ಟು ಅಥವಾ ಕೈಗೆ ಸ್ವಲ್ಪಎಣ್ಣೆ ಹಾಕಿಕೊಂಡರೆ ಒಳ್ಳೆಯದು.

ಕಾದ ಎಣ್ಣೆಯಲ್ಲಿ ಬದಿ ಕೆಂಬಣ್ಣ ಬರುವ ವರೆಗೆ ಕರಿಯಬೇಕು.

ಇಷ್ಟು ಮಾಡಿದರೆ ಮಂಗಳೂರು ಬನ್ಸ್ ಸವಿಯಲು ಸಿದ್ಧ.

ಇದನ್ನು ಚಟ್ನಿ, ಸಾಂಬಾರ್ ಜೊತೆಗೆ ಅಥವಾ ಹಾಗೆಯೇ ತಿನ್ನಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top