ತಿಂಡಿ ತೀರ್ಥ

ಬಾಯಲ್ಲಿ ನೀರೂರಿಸುವ ಕೊಬ್ಬರಿ ಬರ್ಫಿ ಮಾಡುವ ವಿಧಾನ

ಕೊಬ್ಬರಿ ಬರ್ಫಿ ಮಾಡುವ ವಿಧಾನ

ಬೇಕಾಗಿರುವ ಪದಾರ್ಥ :

ತೆಂಗಿನ ತುರಿ 1 ಕಪ್
ಸಕ್ಕರೆ 1/2 ಕಪ್
ತುಪ್ಪ 2 ಟೇಬಲ್ ಸ್ಪೂನ್
ಒಂದು ಚಿಟಿಕೆ ಏಲಕ್ಕಿ ಪುಡಿ ಅಥವಾ ಲವಂಗದ ಪುಡಿ

ಕೊಬ್ಬರಿ ಬರ್ಫಿ ತಯಾರು ಮಾಡುವ ವಿಧಾನ :

ತೆಂಗಿನಕಾಯಿಯ ಬಿಳಿಭಾಗ ಮಾತ್ರ ತುರಿದುಕೊಳ್ಳಿ.
ನೀರು ಹಾಕದೇ ಮಿಕ್ಸಿಯಲ್ಲಿ ನುಣ್ಣನೆ ಪುಡಿ ಮಾಡಿಕೊಳ್ಳಿ.
ಒಂದು ಬಾಣಲೆಗೆ ಸಕ್ಕರೆ ಮತ್ತು ಸ್ವಲ್ಪ ನೀರು ಹಾಕಿ (೧ ಕಪ್ ಸಕ್ಕರೆಗೆ ೧/೪ ಕಪ್ ನೀರು ಸಾಕು)
ಪಾಕ ಬರುವ ಹಾಗೆ ಮಾಡಿಕೊಳ್ಳಿ
ನಂತರ ಪುಡಿ ಮಾಡಿದ ತೆಂಗಿನತುರಿ ಸೇರಿಸಿ.
ಮಿಶ್ರಣವನ್ನು ಕಲಸುತ್ತಾ ಬನ್ನಿ ಎರಡು ಸೇರಿ ಮೆತ್ತಗಿನ ಉಂಡೆಯಂತಾದರೆ ಸಾಕು
ಏಲಕ್ಕಿ ಅಥವಾ ಲವಂಗ ಹಾಕಿ ಮತ್ತೆ ಕಲಸಿ.
ತುಪ್ಪವನ್ನು ಸೇರಿಸಿ ಸರಿಯಾಗಿ ಮಿಶ್ರಣ ಮಾಡಿ.
ಕಾಯಿ ಮತ್ತು ಸಕ್ಕರೆಯ ಮಿಶ್ರಣ ಮುದ್ದೆಯಾಗಿ, ಸ್ವಲ್ಪ ಬಿಳಿ ಬಣ್ಣಕ್ಕೆ ತಿರುಗುತ್ತದೆ
ಆಗ ತುಪ್ಪ ಸವರಿದ ಟ್ರೇ ಅಥವಾ ತಟ್ಟೆ ಗೆ ಸುರಿಯಿರಿ .
ತುಪ್ಪ ಸವರಿದ ಚಮಚದ ಹಿಂಭಾಗ ಉಪಯೋಗಿಸಿ ಹರಡಿ , ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ ಅಷ್ಟೇ
ತಣ್ಣಗಾದ ಮೇಲೆ ಕೊಬ್ಬರಿ ಬರ್ಫಿ ಸಿದ್ದ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top