ತಿಂಡಿ ತೀರ್ಥ

ಎಲ್ಲಾ ವಯಸ್ಸಿನವರಿಗೂರೂ ಬಾಯಿ ಚಪ್ಪರಿಸಿಕೊಂಡು ತಿನ್ನುವ ಗೋಬಿ ಮಂಚೂರಿ ಮಾಡುವ ವಿಧಾನ! ಮನೇಲೆ ಮಾಡ್ಕೊಂಡು ತಿನ್ನಿ.

ಗೋಬಿ ಮಂಚೂರಿ ಮಾಡುವ ವಿಧಾನ 

ಮಾಡಲು ಬೇಕಾಗುವ ಸಾಮಗ್ರಿಗಳು:

ಹೂಕೋಸು 1
ಕತ್ತರಿಸಿದ ಈರುಳ್ಳಿ 2
ಕತ್ತರಿಸಿದ ದುಂಡು ಮೆಣಸು 2
ಈರುಳ್ಳಿ ಹೂವು  6-7
ಕಡಲೆ ಹಿಟ್ಟು 1/4 ಕಪ್
ಕಾರ್ನ್ ಫ್ಲೋರ್  1/2 ಕಪ್
ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಕತ್ತರಿಸಿದ ಹಸಿಮೆಣಸು 8
ಕೊತ್ತಂಬರಿ ಸೊಪ್ಪು
ಬೆಳ್ಳುಳ್ಳಿ ಎಸಳು 6
ಕರಿಮೆಣಸು 2 ಚಮಚ
ಸೋಯಾ ಸಾಸ್ 2 ಚಮಚ
ಅಜಿನೊಮೊಟೊ 1 ಚಿಟುಕು
ಎಣ್ಣೆ ಬಾಣಲೆಯಲ್ಲಿ ಅರ್ಧ
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

1. ಕತ್ತರಿಸಿದ ಹೂಕೋಸನ್ನು ಉಪ್ಪು ಹಾಕಿ ಬೇಯಿಸಬೇಕು.

2. ನೀರನ್ನು ಬಸಿದು ಹೂಕೋಸನ್ನು ಅಗಲವಾದ ಪಾತ್ರೆಯಲ್ಲಿ ಆರಲು ಇಡಬೇಕು.

3. ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಕಟಲೆಹಿಟ್ಟು, ಜೋಳದ ಹಿಟ್ಟು, ಕತ್ತರಿಸಿದ ಮೆಣಸಿನಲ್ಲಿ ಅರ್ಧ, ಕರಿಮೆಣಸು, ಶುಂಠಿ ಮತ್ತು ಬೆಳ್ಳುಳ್ಳಿಯ ಪೇಸ್ಟ್ , ನೀರು ಹಾಕಿ ಗಟ್ಟಿಯಾಗಿ ಕಲಿಸಬೇಕು.

4. ನಂತರ ಅರ್ಧ ಬಾಣಲೆಯಲ್ಲಿ ಎಣ್ಣೆ ಹಾಕಿ ಅದು ಕುದಿಯುವಾಗ ಅದರಲ್ಲಿ ಹೂಕೋಸನ್ನು ಹಿಟ್ಟಿನೊಂದಿಗೆ ಬೆರೆಸಿ ಹಾಕಬೇಕು. ನಂತರ ಉರಿಯನ್ನು ಕಡಿಮೆಮಾಡಿ ಅದನ್ನು ಎಣ್ಣೆಯಲ್ಲಿ ಮತ್ತಷ್ಟು ಹುರಿಯುವಂತೆ ಮಾಡಬೇಕು .

5. ಹುರಿದ ಹೂಕೋಸನ್ನು ತೆಗೆದು ಪೇಪರಿನಲ್ಲಿ ಇಡಬೇಕು ಇದರಿಂದಾಗಿ ಅಧಿಕ ಎಣ್ಣೆಯನ್ನು ಪೇಪರ್ ಹೀರಿಕೊಳ್ಳುವುದು.

6. ನಂತರ ಮತ್ತೊಂದು ಬಾಣಲೆಯನ್ನು ತೆಗೆದು ಅದಕ್ಕೆ ಸ್ಲ್ಪ ಎಣ್ಣೆ ಹಾಕಿ ಅದು ಬಿಸಿಯಾದಗ ಕತ್ತರಿಸಿದ ಈರುಳ್ಳಿಯನ್ನು ಹಾಕಬೇಕು. ಅದು ಕಂದು ಬಣ್ಣಕ್ಕೆ ತಿರುವಾಗ ಬೆಳ್ಳುಳ್ಳಿ ಮತ್ತು ಕರಿಮೆಣಸು ಹಾಕಿ ಬಿಸಿ ಮಾಡಬೇಕು.

7. ಹೀಗೆ ಹುರಿಯತ್ತಾ ವಸಂತದ ಈರುಳ್ಳಿ ಬೆರೆಸಿ ಮತ್ತೂ 2 ನಿಮಿಷ ಹುರಿಯಬೇಕು.

8. ಅದಕ್ಕೆ ಟೊಮೆಟೊ ಹಾಕಿ, ಕತ್ತರಿಸಿದ ಉಳಿದ ಮೆಣಸು ಮತ್ತು ದುಂಡು ಮೆಣಸು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು.

9. 3-4 ನಿಮಿಷ ಬೇಯಿಸಿದ ನಂತರ ಅಜಿನೊಮಿಟೊ ಮತ್ತು ಸೋಯಾ ಸಾಸ್ ಹಾಕಿ ಮಿಕ್ಸ್ ಮಾಡಿ, ಅದಕ್ಕೆ 3/4 ನೀರು ಹಾಕಿ ಕುದಿಸಬೇಕು.

10. ಗ್ರೇವಿ ಬಿಸಿಯಾಗಿ ಗುಳ್ಳೆಗಳು ಬರಲಾರಭಿಸಿದಾಗ ಹುರಿದ ಮಂಚೂರಿ ಹಾಕಿ 5 ನಿಮಿಷ ಕಾಯಿಸಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top