ಸಮಾಚಾರ

8 ವರ್ಷದ ಬಾಲಕಿ ಮೇಲೆ 3 ದಿನಗಳ ಕಾಲ ಗ್ಯಾಂಗ್ ರೇಪ್ ಹಾಗು ಮರ್ಡರ್ ,ಸ್ಯಾಂಡಲ್ ವುಡ್ ,ಬಾಲಿವುಡ್ ,ಪುಟ್ಟ ಮಕ್ಕಳು ಸೇರಿದಂತೆ ದೇಶವ್ಯಾಪಿ ವೈರಲ್ ಆಯ್ತು #JusticeForAsifa

ಆಸೀಫಾ ಎಂಬ ಎಂಟು ವರ್ಷದ ಬಾಲಕಿ ಕುದುರೆ ಮೇಯಿಸಲು ಹೋಗಿರುತ್ತಾಳೆ ಆ ಸಂದರ್ಭದಲ್ಲಿ ಹಲ್ಲೆಕೋರರು ಆಕೆಯನ್ನು ಹಿಡಿದೆಳೆದು ಕೂಡಿ ಹಾಕುತ್ತಾರೆ ಆಕೆಗೆ ಮಾದಕ ವಸ್ತುಗಳನ್ನು ನೀಡಿ ಮೂರು ದಿನಗಳ ಕಾಲ ನಿರಂತರವಾಗಿ ರೇಪ್ ಮಾಡಲಾಗುತ್ತದೆ .

 

 

ಅತ್ಯಾಚಾರದ ತೀವ್ರತೆಗೆ ಆಕೆಯ ಖಾಸಗಿ ಅಂಗಾಂಗಗಳು ಬಹಳವಾಗಿ ಘಾಸಿ ಯಾಗಿದ್ದು ಆಕೆಯ ಕತ್ತನ್ನು ಹಿಸುಕಿ ಕೊಲೆ ಮಾಡಲಾಗುತ್ತದೆ ಆ ನಂತರ ಆಕೆಯ ಶವವನ್ನು ಎಸೆದು ಪರಾರಿಯಾಗುತ್ತಾರೆ ಹಲ್ಲೆಕೋರರು .

ಈ ಪ್ರಕರಣವನ್ನು ಮುಚ್ಚಿ ಹಾಕಲು ಆರೋಪಿಗಳು ಪೊಲೀಸರಿಗೆ ಲಂಚವನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ .

ಎಂಟು ವರ್ಷದ ಆ ಪುಟ್ಟ ಬಾಲಕಿಯನ್ನು ಬಂಧಿಸಿ ರೇಪ್ ಮಾಡಲಾಗಿದೆ ಈ ಘಟನೆ ಮಾನವೀಯತೆ ದೃಷ್ಟಿಯಿಂದ ಬಹಳ ದೂರ ಈ ಘಟನೆಯನ್ನು ಖಂಡಿಸದೆ ಇರುವವರು ಮನುಷ್ಯರೇ ಅಲ್ಲ ಎಂದು ಅನೇಕ ನಟ ನಟಿಯರು #JusticeForAsifa ಸಂದೇಶಯುಳ್ಳ ಫಲಕ ಹಿಡಿದು ಪುಟ್ಟ ಬಾಲಕಿಯ ಸಾವಿಗೆ ಕಂಬನಿ ಮಿಡಿದಿದ್ದಾರೆ.

 

 

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top