ಸಿನಿಮಾ

8 ವರ್ಷದ ಬಾಲಕಿ ಮೇಲೆ 3 ದಿನ ಗ್ಯಾಂಗ್ ರೇಪ್ ಹಾಗು ಮರ್ಡರ್, ‘ನನ್ನ ಮಗಳಿಗೂ ಅಷ್ಟೇ ವಯಸ್ಸು’ ಎಂದ ಪಾಚು ಶಾಲಿನಿ ವಿಡಿಯೋ ನೋಡಿ

ಆಸೀಫಾ ಎಂಬ ಎಂಟು ವರ್ಷದ ಬಾಲಕಿ ಕುದುರೆ ಮೇಯಿಸಲು ಹೋಗಿರುತ್ತಾಳೆ ಆ ಸಂದರ್ಭದಲ್ಲಿ ಹಲ್ಲೆಕೋರರು ಆಕೆಯನ್ನು ಹಿಡಿದೆಳೆದು ಕೂಡಿ ಹಾಕುತ್ತಾರೆ ಆಕೆಗೆ ಮಾದಕ ವಸ್ತುಗಳನ್ನು ನೀಡಿ ಮೂರು ದಿನಗಳ ಕಾಲ ನಿರಂತರವಾಗಿ ರೇಪ್ ಮಾಡಲಾಗುತ್ತದೆ .

 

 

ಅತ್ಯಾಚಾರದ ತೀವ್ರತೆಗೆ ಆಕೆಯ ಖಾಸಗಿ ಅಂಗಾಂಗಗಳು ಬಹಳವಾಗಿ ಘಾಸಿ ಯಾಗಿದ್ದು ಆಕೆಯ ಕತ್ತನ್ನು ಹಿಸುಕಿ ಕೊಲೆ ಮಾಡಲಾಗುತ್ತದೆ ಆ ನಂತರ ಆಕೆಯ ಶವವನ್ನು ಎಸೆದು ಪರಾರಿಯಾಗುತ್ತಾರೆ ಹಲ್ಲೆಕೋರರು .

ಈ ಪ್ರಕರಣವನ್ನು ಮುಚ್ಚಿ ಹಾಕಲು ಆರೋಪಿಗಳು ಪೊಲೀಸರಿಗೆ ಲಂಚವನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ .

ಎಂಟು ವರ್ಷದ ಆ ಪುಟ್ಟ ಬಾಲಕಿಯನ್ನು ಬಂಧಿಸಿ ರೇಪ್ ಮಾಡಲಾಗಿದೆ ಈ ಘಟನೆ ಮಾನವೀಯತೆ ದೃಷ್ಟಿಯಿಂದ ಬಹಳ ದೂರ ಈ ಘಟನೆಯನ್ನು ಖಂಡಿಸದೆ ಇರುವವರು ಮನುಷ್ಯರೇ ಅಲ್ಲ ಎಂದು ಅನೇಕ ನಟ ನಟಿಯರು #JusticeForAsifa ಸಂದೇಶಯುಳ್ಳ ಫಲಕ ಹಿಡಿದು ಪುಟ್ಟ ಬಾಲಕಿಯ ಸಾವಿಗೆ ಕಂಬನಿ ಮಿಡಿದಿದ್ದಾರೆ.

 

 

ಪಾಪ ಪಾಂಡು ಖ್ಯಾತಿಯ ಶಾಲಿನೀ ಆಸಿಫಾಗೆ ಆದ ಅನ್ಯಾಯದ ಕುರಿತು ಮುಮ್ಮಲ ಮರುಗಿದ್ದಾರೆ

ಅವರು ಅಪ್ಲೋಡ್ ಮಾಡಿರುವ ಮನಮಿಡಿಯುವ ವಿಡಿಯೋ ತುಣುಕು ಹೀಗಿದೆ

ನನ್ನ ಮಗಳು ಡಿಮ್ಪುಗು 8 ವರ್ಷ ,ಆಸಿಫಾಗು 8 ವರ್ಷ ಅವಳಿಗೂ ಕುದುರೆ ಅಂದ್ರೆ ತುಂಬಾ ಇಷ್ಟ ಆಸಿಫಾ ಕೂಡ ದಿನಾ ಕುದುರೆ ನೋಡ್ಕೊತಿದ್ಲು , ಆಸಿಫಾ ಅವರ ತಾಯಿ ಕಣ್ಣೆದುರೇ ಕಣ್ಮರೆ ಆದ್ಲು ಡಿಮ್ಪು ಒಂದು ನಿಮಿಷ ಕಾನ್ಸಿಲ್ಲ ಅಂದ್ರೆ ನನ್ನ ಕಣ್ಣು ಅವಳನ್ನ ಹುಡುಕುತ್ತೆ , ಡಿಮ್ಪು ಗೆ ಭಯ ಆದ್ರೆ ಓಡೋಗ್ತಾಳೆ ಆಸಿಫಾ ಕೂಡ ಓಡೋಕೆ ಪ್ರಯತ್ನ ಪಟ್ಲು , ಆದ್ರೆ ಅವರು ಅವಳನ್ನ ಹಿಡ್ಕೊಂಡ್ಬಿಟ್ರು , ಡಿಮ್ಪು ಗೆ ದೇವಸ್ಥಾನ ಅಂದ್ರೆ ಇಷ್ಟ ಆಸಿಫಾ ದೇವಸ್ಥಾನದ ಒಳಗೆ ಓಡೋದಳು ಆದ್ರೆ ಅಲ್ಲಿ ಏನಾಯ್ತು , ಡಿಮ್ಪುಗೆ ಒಳ್ಳೆ ಟಚ್ ಯಾವ್ದು ಕೆಟ್ಟದ್ದು ಯಾವ್ದು ಎಲ್ಲ ಹೇಳ್ಕೊಟ್ಟಿದ್ದೀನಿ , ಪಾಪ ಆಸಿಫಾಗೆ ಈ ಎಲ್ಲ ಕೆಟ್ಟ ಅನುಭವ ಆಯ್ತು .

 

I am HINDUSTAN I am ASHAMED #justiceforourchild #justiceforasifa

A post shared by Shalini (@shalini_official) on

ನಾನು ಹಿಂದುಸ್ತಾನ್ , ನನಗೆ ಈ ಘಟನೆ ನಾಚಿಕೆ ಆಗ್ತಿದೆ , ನಮ್ಮ ಮಕ್ಕಳಿಗೆ ನ್ಯಾಯ ಸಿಗಲಿ , ಆಸಿಫಾಗೆ ನ್ಯಾಯ ಸಿಗಲಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top