ವಿಶೇಷ

ಸತ್ತ ಮೇಲೆ ಶವ ಪೆಟ್ಟಿಗೆಯಲ್ಲೇ ಮಗುವಿಗೆ ಜನ್ಮ ಕೊಟ್ಟ ತಾಯಿ ಏನಿದು ವಿಚಿತ್ರ ಘಟನೆ ಮುಂದೆ ಓದಿ

ಮಧ್ಯಕಾಲೀನ ಅನೇಕ ದುರಂತಗಳಲ್ಲಿ ಇದು ಸಹ ಒಂದು ಆಗಿನ ಘೋರ ಪರಿಸ್ಥಿತಿಯನ್ನು ಈ ಒಂದು ಘಟನೆ ಮತ್ತೆ ಮತ್ತೆ ಸಾರುತ್ತದೆ ಇಟಲಿಯ ಪುರಾತತ್ವ ಇಲಾಖೆಯಲ್ಲಿ ಮಹಿಳೆಗೆ ಸಂಬಂಧಪಟ್ಟ ಅವಶೇಷಗಳು ದೊರೆತಿದ್ದು ಆಗಿನ ಕಾಲದ ಸಮಾಧಿಯಲ್ಲಿ ಇರಿಸಲಾಗಿದ್ದ ಗರ್ಭಿಣಿ ಹೆಂಗಸಿನ ಶವದ ಕಾಲಿನ ಕೆಳಗೆ ಮಗುವಿನ ಅವಶೇಷಗಳು ಸಹ ದೊರೆತಿದೆ .

 

ಪುರಾತತ್ವ ಇಲಾಖೆ ಈ ಘಟನೆಯ ಬಗ್ಗೆ ಹೆಚ್ಚಿನ ಸಂಶೋಧನೆಯನ್ನು ನಡೆಸಿ ಗರ್ಭಿಣಿ ಮಹಿಳೆ ಸತ್ತ ನಂತರ ಆಕೆಯ ಜನನಾಂಗದ ಮೂಲಕ ಮಗು ಹೊರಗೆ ಬಂದಿದೆ ಎಂದು ಹೇಳಲಾಗುತ್ತಿದೆ ಹಾಗೆಯೇ ಅವಶೇಷಗಳ ನೆಲ್ಲ ಜೋಡಿಸಿ ಅದು ಮಗುವಿನ ಮೂಳೆಗಳೇ ಎಂದು ದೃಢಪಡಿಸಿದ್ದಾರೆ.

 

 

2010 ರಲ್ಲಿ7ನೇ ಹಾಗೂ 8ನೇ ಶತಮಾನದ ಇಟಲಿಯ ಇಮಾಲಾದಲ್ಲಿ ಮುಚ್ಚಿಹೋಗಿದ್ದ ಕೆಲವು ಸಮಾಧಿಗಳನ್ನು ತೆರೆದು ಸಂಶೋಧನೆ ನಡೆಸುತ್ತಿತ್ತು ಪುರಾತತ್ವ ಇಲಾಖೆ

 

 

ಈ ಸಮಯದಲ್ಲಿ ಕಲ್ಲಿನಿಂದ ಮುಚ್ಚಿದ್ದ ಹೆಂಗಸಿನ ಸಮಾಧಿಯನ್ನು ಹೊರತೆಗೆಯಲಾಗಿತ್ತು ಆಕೆಯ ಆಸ್ತಿ ಪಂಜರ ಅಂಗಾತವಾಗಿ ಮಲಗಿತ್ತು ,ಮಹಿಳೆಯ ಅಸ್ತಿಪಂಜರದ ಸೊಂಟದ ಭಾಗದ ಕೆಳಗೆ ಸಣ್ಣ ಮಗುವಿನ ಆಸ್ತಿ ಪಂಜರವು ಇತ್ತು ಇಲ್ಲಿ ಒಂದು ವಿಚಿತ್ರವನ್ನು ಗಮನಿಸಿದರೂ ವಿಜ್ಞಾನಿಗಳು ಅದೇನೆಂದರೆ ಮಹಿಳೆಯ ತಲೆಬುರುಡೆ ಮೇಲೆ ಒಂದು ಸಣ್ಣ ರಂಧ್ರವನ್ನು ಸಹ ಕಾಣಬಹುದು .

 

 

ಈ ಪ್ರಕ್ರಿಯೆಗೆ ‘ಶವ ಪಟ್ಟಿಗೆ ಜನನ’ ಅಥವಾ ‘ಪೋಸ್ಟ್ ಮಾರ್ಟಮ್ ಪಿಟಸ್ ಎಕ್ಸ್ ಟ್ಯೂಷನ್ ‘ ಎಂದು ವೈಜ್ಞಾನಿಕವಾಗಿ ಕರೆಯುತ್ತಾರೆ , ಶವ ಕೊಳೆಯುವ ಸಂದರ್ಭದಲ್ಲಿ ಗರ್ಭಿಣಿ ಹೆಂಗಸಿನ ಹೊಟ್ಟೆಯ ಒಳಗೆ ಗಾಳಿಯೂ ಹೆಚ್ಚಾಗಿತ್ತು ಅದರ ಒತ್ತಡಕ್ಕೆ ಭ್ರೂಣವು ಹೆಂಗಸಿನ ಜನನಾಂಗದಿಂದ ಹೊರಗಡೆ ನೂಕಲ್ಪಟ್ಟಿದೆ ಎಂದು ಹೇಳಲಾಗುತ್ತದೆ .

ತಾಯಿ ಸತ್ತಾಗಲೇ ಮಗು ಸಹ ಸತ್ತಿರುತ್ತದೆ ಆದರೆ ಅದರ ಶವ ಮಾತ್ರ ಕೊಳೆಯುವ ಸಂದರ್ಭದಲ್ಲಿ ಹೊರಗೆ ಬಂದಿದೆ ಎಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top