ಸಿನಿಮಾ

ನಮ್ಮ ಕುಟುಂಬದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳಿದ್ದಾರೆ, ಬಿಜೆಪಿಗರಿಗೆ ಪ್ರವೇಶವಿಲ್ಲ

ಜಮ್ಮುವಿನಲ್ಲಿ ಕ್ರೂರ ಹಾಗು ಅಮಾನವೀಯ ಘಟನೆ ನಡೆದಿದ್ದು, ಕುದುರೆ ಮೇಯಿಸಲೆಂದು ಹೊರಟ ಬಾಲಕಿ ಆಸೀಫಾ ಎಂಬುವವಳನು ಸ್ಥಳೀಯ ದೇವಸ್ಥಾನವೊಂದರಲ್ಲಿ ಕೂಡಿ ಹಾಕಿ ಮಾದಕ ದ್ರವ್ಯ ನೀಡಿ ನಿರಂತರ ಮೂರು ದಿನಗಳ ಕಾಲ ಅತ್ಯಾಚಾರ ಮಾಡಿದ್ದಾರೆ. ಬಳಿಕ ಬಾಲಕಿಯನ್ನು ಕೊಂದು ಕಾಡಿನಲ್ಲಿ ಎಸೆದು ಹೋಗಿದ್ದಾರೆ. ಇದೀಗ ಈ ಪ್ರಕರಣದ ಕುರಿತಾದಂತೆ ಕೇರಳದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಮನೆಗಳ ಮುಂದೆ “ಈ ಮನೆಯಲ್ಲಿ ಪುಟ್ಟ ಹೆಣ್ಣುಮಕ್ಕಳಿದ್ದಾರೆ,ವೋಟು ಕೇಳಲೆಂದು ಬಿಜೆಪಿಗರು ದಯವಿಟ್ಟು ನಮ್ಮ ಮನೆಗೆ ಬರಬಾರದು. ಕರಪತ್ರಗಳಿದ್ದರೆ ಗೇಟಿನ ಹೊರಗಡೆ ಇಟ್ಟು ಹೋಗಿ ಎಂದೂ ಬರೆಯಲಾಗಿದೆ.

 

 

ಈ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಟ್ವಿಟರ್‌ನಲ್ಲಿ ಪ್ರಕಟಿಸಿರುವ ಫೋಟೋಗಳಲ್ಲಿ ಕಾಣುವ ಪತ್ರಗಳಲ್ಲಿ ಮಲಯಾಳಂ ಅಕ್ಷರ ಇವೆ. ಇದನ್ನು ಕೆಲವರು ತರ್ಜುಮೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮರು ಹಂಚಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

 

ಕೇರಳದ ರಾಜ್ಯದ ರಾಜಧಾನಿ ತಿರುವನಂತಪುರಂನ ಸಮೀಪ ಕಳಮಚ್ಚಲ್ ಎಂಬ ಗ್ರಾಮದಲ್ಲಿ ಈ ಪ್ರತಿಭಟನೆಯು ಪ್ರಾರಂಭವಾಗಿದೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top