ಸಿನಿಮಾ

ಕರುಣಾಜನಕ ಕಥೆ.

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬದುಕೇ ಹೀಗೆ… ಇಲ್ಲಿ ಯಾರು ಯಾವಾಗ ಏನು ಬೇಕಾದ್ರೂ ಆಗಬಹುದು!

ಶಿವಾಜಿರಾವ್ ಗಾಯಕವಾಡ್ ಅನ್ನೋ ವ್ಯಕ್ತಿ ಕಂಡಕ್ಟರಾಗಿ, ನಂತರ ಚಿತ್ರರಂಗದ ಸಂಪರ್ಕಕ್ಕೆ ಬಂದು ರಜನಿಕಾಂತ್ ಆಗಿ ಅವತಾರೆವತ್ತಿ. ಇವತ್ತಿಗೆ ಜಗತ್ತಿಗೇ ಚಿರಪರಿಚಿತವಾಗಿರುವ ವ್ಯಕ್ತಿ. ಕುಂತರೂ ನಿಂತರೂ ಸುದ್ದಿಯಲ್ಲಿರುವ ಸೂಪರ್ ಸ್ಟಾರ್.
ಇದು ಎಷ್ಟು ಜನಕ್ಕೆ ತಿಳಿದಿದೆಯೋ? ಇಲ್ಲವೋ? ಗೊತ್ತಿಲ್ಲ. ರಜನಿಕಾಂತ್ ಕಂಡಕ್ಟರ್ ವೃತ್ತಿ ಆರಂಭಿಸುವುದಕ್ಕೂ ಮುನ್ನ ಒಂದಷ್ಟು ದಿನ ಮಂಡಿಪೇಟೆಯಲ್ಲಿ ಲೆಕ್ಕ ಬರೆಯೋ ಕೆಲಸ ಕೂಡಾ ಮಾಡಿದ್ದರು. ಇದೆಲ್ಲ ಈಗ ನೆನಪು ಮಾಡಲೂ ಕಾರಣವಿದೆ.

 

 

ರಜನಿ ವಾಸವಿದ್ದ ಹನುಮಂತನಗರ ನಾಲ್ಕನೇ ಕ್ರಾಸ್‌ನ ಮೇನ್ ರೋಡಿನಲ್ಲೇ ಕ್ರೈಸ್ತ ಕುಟುಂಬವೊಂದು ವಾಸವಿತ್ತು. ಆ ಮನೆಯ ಯುವಕನೊಬ್ಬ ರಜನಿ ಅವರೊಟ್ಟಿಗೆ ಮಂಡಿಪೇಟೆಗೆ ಲೆಕ್ಕ ಬರೆಯೋ ಕೆಲಸಕ್ಕೆ ಹೋಗುತ್ತಿದ್ದ. ಬಹುತೇಕ ಇಬ್ಬರೂ ಒಟ್ಟಿಗೇ ಹೋಗಿ ಅಲ್ಲಿ ನೌಕರಿ ಮಾಡಿ ಬರುತ್ತಿದ್ದರು. ನಂತರ ದಿಕ್ಕು ಬದಲಾಗಿ, ರಜನಿ ಕಂಡಕ್ಟರ್ ಆಗಿದ್ದು, ಆ ಮೂಲಕ ರಾಜ್‌ಬಹದ್ದೂರ್ ಎಂಬ ಗೆಳೆಯ ಸಿಕ್ಕಿ, ರಜನಿಯನ್ನು ಚೆನ್ನೈಗೆ ಕಳಿಸಿದ್ದು ಈಗ ಇತಿಹಾಸ.

 

ರಜನಿ ಜೊತೆಗೆ ಮಂಡಿಪೇಟೆಗೆ ಕೆಲಸಕ್ಕೆ ಹೋಗಿ, ಈರುಳ್ಳಿ, ಮೆಣಸಿನಕಾಯಿ ಚೀಲಗಳನ್ನು ಎಣಿಸಿ ಲೆಕ್ಕ ಬರೆಯುತ್ತಿದ್ದ ಸಹಪಾಠಿಯ ಹೆಸರು ಮಾರ್ಟಿನ್ ಪೋರಸ್ ಎಂದು. ಈತ ಎಪಿಎಸ್ ಕಾಲೇಜಿನಲ್ಲಿ ಕೂಡಾ ರಜನಿಗೆ ಸಹಪಾಠಿ. ಹನುಮಂತನಗರದ ರಾಮಾಂಜನೇಯ ಗುಡ್ಡದ ತಪ್ಪಲಿಗೇ ಇದ್ದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನು ತೀರಾ ಕಡಿಮೆ ಬೆಲೆಗೆ ಮಾರಾಟ ಮಾಡಿ ಏರಿಯಾ ಬಿಟ್ಟಿದ್ದ ಆ ವ್ಯಕ್ತಿ ಮತ್ತೆ ಕಾಣಿಸಿಕೊಂಡಿದ್ದು ಶವವಾಗಿ…
ಹೌದು!

 

 

ಕೆಲ ತಿಂಗಳ ಹಿಂದೆ ಬಿಡದಿ ಬಳಿಯ ಉರಗಳ್ಳಿ ಅನ್ನೋ ಗ್ರಾಮದಲ್ಲಿರುವ ಉಮಾಮಹೇಶ್ವರಿ ಸ್ಟೋನ್ ಕ್ರಶರ್ ಅನ್ನೋ ಮರಳು ಉತ್ಪಾದನಾ ಘಟಕದ ಒಳಗೆ ರಾತ್ರಿ ಪಾಳಿಯಲ್ಲಿ ಸೆಕ್ಯೂರಿಟಿ ಕೆಲಸ ನಿರ್ವಹಿಸುತ್ತಿದ್ದ ಮಾರ್ಟಿನ್ ಮೇಲೆ ಅದೇ ಕಂಪೆನಿಗೆ ಸೇರಿದ ಲಾರಿಯೊಂದು ಡಿಕ್ಕಿ ಹೊಡೆದು, ಲಾರಿಯ ಮುಂಬದಿ ಚಕ್ರ ಆತನ ತಲೆ, ಕೈಕಾಲುಗಳಮೇಲೆ ಹರಿದುಬಿಟ್ಟಿದೆ. ಪರಿಣಾಮ ಮಾರ್ಟಿನ್‌ರ ದೇಹದ ಬಹುಪಾಲು ನಜ್ಜುಗುಜ್ಜಾಗಿದೆ. ರಾತ್ರಿ ಕೆಲಸಕ್ಕೆಂದು ಹೋದ ಪತಿಗೆ ಅಪಘಾತವಾಗಿದೆ ಎಂದು ಕರೆ ಬಂದಿದೆ. ಮಾರ್ಟಿನ ಪೋರಸ್‌ನ ಪತ್ನಿ ಪುಷ್ಪಾ ಮತ್ತಾಕೆಯ ಇಬ್ಬರು ಹೆಣ್ಣುಮಕ್ಕಳು ನೋಡಹೋದಾಗ ಅವರ ಕಣ್ಣಿಗೆ ಕಂಡಿದ್ದು ರಾಜರಾಜೇಶ್ವರಿ ಆಸ್ಪತ್ರೆಯ ಶವಾಗಾರದಲ್ಲಿದ್ದ ಅರೆಬರೆ ದೇಹ ಮಾತ್ರ.

 

ತಮ್ಮ ಕ್ರಶರ್ ವ್ಯಾಪ್ತಿಯಲ್ಲಿ ಸಾವು ಸಂಭವಿಸಿದ್ದಕ್ಕಾಗಿ ಆ ಮರಳು ಫ್ಯಾಕ್ಟರಿಯ ಮಾಲೀಕ ನರೇಂದ್ರ ರೆಡ್ಡಿ ಎಂಬಾತ ಮಾನವೀಯ ದೃಷ್ಟಿಯಿಂದ ಒಂದಿಷ್ಟು ಸಹಾಯ ಮಾಡಿರೋದು ಬಿಟ್ಟರೆ ಆ ಕುಟುಂಬಕ್ಕೆ ಯಾರ ಆಸರೆಯೂ ಇಲ್ಲ. ಇನ್ನು ದೂರದಲ್ಲಿರೋ ರಜನಿಕಾಂತ್‌ಗೆ ಅವರ ಪುರಾತನ ಗೆಳೆಯನೊಬ್ಬನ ಪರಿಚಯ ಹೇಳಿ ಅವರ ದುರಂತ ಸಾವನ್ನು ವಿವರಿಸಿ, ನೊಂದ ಕುಟುಂಬಕ್ಕೆ ಸಹಾಯ ಕೊಡಿಸೋರಾದರೂ ಯಾರು? ಇವೆಲ್ಲಾ ವಿವರವನ್ನು ಓದಿದ ನಿಮಗೇನಾದರೂ ಸಹಾಯ ಮಾಡುವ ಮನಸ್ಸಾದರೆ ಇನ್ ಬಾಕ್ಸ್ ಗೆ text ಮಾಡಿ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top