ಸಿನಿಮಾ

ಟಗರು ಪುಟ್ಟಿ ಮಾನ್ವಿತಾಗೆ ಸಿಕ್ತು ಬರ್ತ್ ಡೇ ಗಿಫ್ಟ್

ಕೆಲವರಿಗೆ ಅದೃಷ್ಟ ಅನ್ನೋದೇ ಹಾಗೆ! ಕೆಲವೊಮ್ಮೆ ಸಾಕು ಸಾಕು ಅನ್ನೋವಷ್ಟು ಒದ್ದುಕೊಂಡು ಬರುತ್ತದೆ. ಯಾವುದನ್ನು ಒಪ್ಪೋದು ಯಾವುದನ್ನು ಬಿಡೋದು ಎಂದು ಗೊಂದಲ ಕಾಡುವ ಮಟ್ಟಕ್ಕೆ ಅವಕಾಶಗಳು ಬರುತ್ತವೆ. ಈಗ ಮಾನ್ವಿತಾ ಹರೀಶ್‌ಗೂ ಆಗಿರೋದು ಇದೇ.‘ಕೆಂಡಸಂಪಿಗೆ’ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರ ರಂಗಕ್ಕೆ ಎಂಟ್ರಿಕೊಟ್ಟು ಟಗರು ಚಿತ್ರದ ಮೂಲಕ ಸಿನಿರಸಿಕರ ಮನಸ್ಸನ್ನು ಗೆದ್ದಿರುವ ಮಾನ್ವಿತಾ ಅವರಿಗೆ ಆಫರ್ ಬರುತ್ತಿವೆ.

 

 

ನಟಿ ಮಾನ್ವಿತಾ ಹರೀಶ್ ಇಂದು ತಮ್ಮ ಹುಟ್ಟುಹಬ್ಬವನ್ನ ಸಂಭಮದಲ್ಲಿದ್ದಾರೆ. ಹುಟ್ಟುಹಬ್ಬದ ವಿಶೇಷವಾಗಿ ನಟಿ ಮಾನ್ವಿತಾ ಬಗ್ಗೆ ಸತ್ಯವೊಂದನ್ನ ರಿವಿಲ್ ಮಾಡಿದ್ದಾರೆ ನಿರ್ದೇಶಕ ನವೀನ್ ರೆಡ್ಡಿ. ಹೆಚ್ಚು ಯೋಚನೆ ಮಾಡಬೇಡಿ, ಯಾಕಂದ್ರೆ ನವೀನ್ ರೆಡ್ಡಿ ರಿವಿಲ್ ಮಾಡಿರುವುದು ಮಾನ್ವಿತಾ ಅಭಿನಯದ ರಿಲ್ಯಾಕ್ಸ್ ಸತ್ಯ ಸಿನಿಮಾ ಪೋಸ್ಟರ್ ಆಗಿದೆ ಎಂದು ತಿಳಿದು ಬಂದಿದೆ.

 

 

ಮಾನ್ವಿತಾ ಹುಟ್ಟು ಹಬ್ಬದಂದೇ ಚಿತ್ರತಂಡ ಚಿತ್ರದಲ್ಲಿರುವ ಮಾನ್ವಿತಾ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ ಎಂದು ತಿಳಿದು ಬಂದಿದೆ. ಅಕಿರಾ ಸಿನಿಮಾ ನಿದೇಶನ ಮಾಡಿದ್ದ ನಿರ್ದೆಶಕ ನವೀನ್ ರೆಡ್ಡಿ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರಭು ಮುಂಡ್ಕೂರ್ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top