ದೇವರು

ಮನೆಯ ಹತ್ತಿರ ಸೊಂಪಾಗಿ ಬೆಳೆಸಿದ್ದ ತುಳಸಿ ಗಿಡ ಸಡನ್ ಆಗಿ ಒಣಗಿಹೋದರೆ ಅದು ಏನನ್ನು ಸೂಚಿಸುತ್ತದೆ.

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಮನೆಯ ಹತ್ತಿರ ಬೆಳೆಸಿದ ತುಳಸಿ ಗಿಡ ಒಣಗಿಹೋದರೆ ಅದು  ಏನನ್ನು ಸೂಚಿಸುತ್ತದೆ.

ತುಳಸಿಯ ಮತ್ತೊಂದು ಹೆಸರು ವೃಂದಾ. ಆದ್ದರಿಂದಲೇ ಎಲ್ಲಿ ಅಧಿಕವಾಗಿ ತುಳಸಿ ಗಿಡಗಳು ಬೆಳೆಯುತ್ತವೆಯೋ ಅಲ್ಲಿ ವೃಂದಾವನ ಎಂದು ಕರೆಯುವುದುಂಟು.

ಆಯುರ್ವೇದದಲ್ಲಿ ತುಳಸಿ ಗಿಡಕ್ಕೆ ತುಂಬ ವಿಶಿಷ್ಟ ಸ್ಥಾನವಿದೆ. ತುಳಸಿ ಗಿಡ ಇಲ್ಲದ ಮನೆ ಮನೆಯೇ ಅಲ್ಲ ಎಂದು ಶಾಸ್ತ್ರಗಳು ಹೇಳುತ್ತಿವೆ. ಈ ತುಳಸಿ ಗಿಡವನ್ನು  ಪವಿತ್ರವಾಗಿ ಪ್ರತಿದಿನ ಶ್ರದ್ದೆ, ಭಕ್ತಿಯಿಂದ  ಪೂಜೆಯನ್ನು ಮಾಡುತ್ತಾರೆ.

ಅಂತಹ ತುಳಸಿ ಗಿಡ ಕೆಲವು ಕಾರಣಗಳಿಂದ ಆಗಾಗ,ಅದರ ಸಹಜ ಬಣ್ಣವನ್ನು ಕಳೆದು ಕೊಳ್ಳುವುದು. ಇಲ್ಲವಾದರೆ ಹೆಚ್ಚಾಗಿ ಎಲೆಗಳು ಉದುರುವುದು ಹೀಗೆ ನಡೆಯುತ್ತಿರುತ್ತದೆ.

ತುಳಸಿ ಗಿಡದಲ್ಲಿ ಕಾಣುವ ಇಂತಹ ಬದಲಾವಣೆಯಿಂದ,ನಮ್ಮ ಮನೆಯ ಪರಿಸ್ಥಿತಿಯನ್ನು ನಾವು ಮೊದಲೇ ಊಹಿಸಬಹುದು.ಈಗ ಅದು ಏನು ಎನ್ನುವುದನ್ನು ತಿಳಿಯೋಣ.

ತುಳಸಿ ಗಿಡದ ಎಲೆಗಳಲ್ಲಿ  ಇದ್ದಕ್ಕಿದ್ದಂತೆ ಬಣ್ಣದಲ್ಲಿ ಬದಲಾವಣೆ  ಕಂಡರೆ, ಆ ಮನೆಯಲ್ಲಿ ಯಾರಿಗೋ ಒಬ್ಬರಿಗೆ ತಂತ್ರ, ಮಂತ್ರವನ್ನು ಪ್ರಯೋಗಿಸಿದ್ದಾರೆ ಎಂದು ಅರ್ಥ.

ನಾವು ಎಷ್ಟು ಜಾಗ್ರತೆಯಿಂದ ನೋಡಿಕೊಂಡರೂ ಸಹ ಇದ್ದಕ್ಕಿದ್ದಂತೆ ತುಳಸಿ ಗಿಡ ಒಣಗಿ ಹೋದರೆ,ಆ ಮನೆಯ ಯಜಮಾನನಿಗೆ ಆರೋಗ್ಯ ಸಮಸ್ಯೆ ಬರುವ ಸೂಚನೆ ನೀಡುತ್ತಿದೆ ಎಂದರ್ಥ.

ತುಳಸಿ ಗಿಡ ಚೆನ್ನಾಗಿ ಹಸಿರಾಗಿ ಇದ್ದರೆ ಅದು ಶುಭದಾಯಾಕ.ಆ ಮನೆಯಲ್ಲಿ ಎಲ್ಲರಿಗೂ ಒಳ್ಳೆಯದೇ ಆಗುತ್ತದೆ.ಸಿರಿ ಸಂಪತ್ತಿನಲ್ಲಿ ಯಾವ ಸಮಸ್ಯೆಗಳೂ ಬರುವುದಿಲ್ಲ.

ತುಳಸಿ  ಕಟ್ಟೆಯಲ್ಲಿ ಮತ್ತೊಂದು ತುಳಸಿಗಿಡ ಅದಾಗಿ ಅದೇ ಹುಟ್ಟಿ ಬೆಳೆದರೆ. ಆ ಮನೆಯಲ್ಲಿ ಯಾರಿಗೋ ಒಬ್ಬರಿಗೆ ವೃತ್ತಿಯ ವಿಷಯದಲ್ಲಿ ಒಳ್ಳೆಯದು ಆಗುತ್ತದೆ ಎನ್ನುವ ಸೂಚನೆ.

ಒಂದು ವೇಳೆ ತುಳಸಿಗಿಡ ಯಾವುದಾದರೂ  ಕಾರಣಗಳಿಂದ ಒಣಗಿ ಹೋದರೆ ಅದು ಮತ್ತೆ ಬೆಳೆದು,ಹಸಿರು ಬಣ್ಣ ಆಗುವವರೆಗೂ ಅದನ್ನು ನೋಡಿಕೊಳ್ಳಬೇಕು.

ಇವೆಲ್ಲಾ ಕಾರಣಗಳಿಂದ ತುಳಸಿ ಗಿಡವನ್ನು ಪ್ರತಿದಿನ ಭಕ್ತಿ,ಶ್ರದ್ಧೆಯಿಂದ ಬೆಳೆಸಿ ಚೆನ್ನಾಗಿ ನೋಡಿಕೊಳ್ಳಬೇಕು.ಅಂತಹ ಮನೆಯಲ್ಲಿ ಎಲ್ಲರೂ ಸುಖ,ಸಂತೋಷ ನೆಮ್ಮದಿ ಶಾಂತಿಯಿಂದ ಇರುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top