ಸಿನಿಮಾ

ಉದಯ ಕಾಮಿಡಿಗೆ ಒಂಭತ್ತರ ಸಂಭ್ರಮ

ವೀಕ್ಷಕರಲ್ಲಿದ್ದ ಟೆನ್ಶನ್ನನ್ನು ಕಡಿಮೆ ಮಾಡಲುನಾನ್ ಸ್ಟಾಪ್ ನಗುವನ್ನು ನೀಡಲು೨೦೦೯ ರಲ್ಲಿ ಬಂದ ಕರುನಾಡಿನ ಏಕೈಕ ಕಾಮಿಡಿ ಚಾನಲ್ ಉದಯಕಾಮಿಡಿ. ವಿಭಿನ್ನ ರೀತಿಯ ನಗುವಿನ ಕಾರ್ಯಕ್ರಮಗಳ ಸರಮಾಲೆಯನ್ನು ಅಲಂಕರಿಸಿಕೊಂಡು ಈಗ ಒಂಬತ್ತು ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ.

 

 

ರಾಜ್ಯದ ಏಕೈಕ ಹಾಸ್ಯ ವಾಹಿನಿ ಉದಯಕಾಮಿಡಿ ರಾಜ್ಯಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದೆ. ತನ್ನ ಕಾಮಿಡಿ ಕಮಾಲ್ ಮೂಲಕವೇ ಅತೀ ಹೆಚ್ಚು ಪ್ರೇಕ್ಷಕರನ್ನು ತಲುಪಿದ ಹಿರಿಮೆ ವಾಹಿನಿಯದು. ನಗರ ಪ್ರದೇಶದಲ್ಲಾಗಲಿ ಗ್ರಾಮಾಂತರ ಪ್ರದೇಶದಲ್ಲಾಗಲಿ ಉದಯ ಕಾಮಿಡಿಗೆ ತನ್ನದೇಯಾದ ಪ್ರೇಕ್ಷಕರಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಉದಯ ಕಾಮಿಡಿಗೆ ಅತಿ ಹೆಚ್ಚು ಪ್ರೇಕ್ಷಕರಿದ್ದು, ಪ್ರೇಕ್ಷಕರ ಪಟ್ಟಿಯಲ್ಲಿ ಉದಯ ಕಾಮಿಡಿ ಉನ್ನತ ಸ್ಥಾನದಲ್ಲಿದೆ.

ಕಳೆದ ಒಂಭತ್ತು ವರ್ಷದಿಂದ ವಿವಿಧ ಹಾಸ್ಯ ಕಾರ್ಯಕ್ರಮಗಳ ಮೂಲಕ ಕರ್ನಾಟಕದ ಜನತೆಯನ್ನು ನಗಿಸುತ್ತಾ ಸಂತೋಷವಾಗಿಡುತ್ತಿರುವ ಉದಯಕಾಮಿಡಿ ದಕ್ಷಿಣ ಭಾರತದ ನಂಬರ್ ಒನ್ ಕಾಮಿಡಿ ಚಾನಲ್ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಅಂಕಿ ಸಂಖ್ಯೆಯ ಅನುಗುಣವಾಗಿಯೂ ೨೦೧೫ರಲ್ಲಿ ೫೫ ಜಿ.ಆರ್.ಪಿ ಇಂದ ೨೦೧೮ರ ಹೊತ್ತಿಗೆ೧೨೦ ಜಿ.ಆರ್.ಪಿಯನ್ನು ಪಡೆದಿರುವುದನ್ನು ನೋಡಿದರೆ ಕಡಿಮೆ ಅವಧಿಯಲ್ಲಿ ಹೆಚ್ಚು ವೀಕ್ಷರಿಗೆ ಹತ್ತಿರವಾಗಿಸಿಕೊಂಡಿದೆ. ಇದಕ್ಕೆ ಕಾರಣ ಇದರಲಿ ಬಿತ್ತಾರವಾಗುತ್ತಿರುವ ವಿಭಿನ್ನ ಕಾರ್ಯಕ್ರಮಗಳು.

 

 

ಬ್ರೇಕ್ ಇಲ್ಲ್ಲದೆ ೩೦ ನಿಮಿಷದ ನಾನ್ ಸ್ಟಾಪ್ ನಗು ಶೋ ಬಹು ಯಶಸ್ವಿಯ ಕಾರ್ಯಕ್ರಮವಾಗಿದೆ. ಟಾಪ್ ೧೦ @ ೯, ಬ್ಲಾಕ್ ಬಸ್ಟರ್ ಮಿಡ್‌ಡೇಟಾಕೀಸ್, ನಗಲೇಬೇಕು, ಸಿಕ್ಕಾಪಟ್ಟೆ ನಕ್ಕುಬಿಡಿ, ಕಿರಿಕ್‌ಗ್ಯಾಂಗ್, ಸೂಪರ್ ಸುಬ್ಬಲಕ್ಷ್ಮೀ, ಸೆಲ್ಫಿ ಸೀನ್ ನಂತಹ ಹಾಸ್ಯಕಾರ್ಯಕ್ರಮಗಳು ಈಗ ಉದಯಕಾಮಿಡಿಯಲ್ಲಿ ಪ್ರಸಾರವಾಗುತ್ತಿವೆ.

ಉದಯಕಾಮಿಡಿ ಯಶಸ್ವಿ ಕಾರ್ಯಕ್ರಮಗಳಲ್ಲಿ ಹಳ್ಳಿಹಬ್ಬ ಸಹ ಒಂದು. ಹಳ್ಳಿಯ ಸೊಗಡು ಹಾಗೂ ಅಲ್ಲಿನ ಸಂಸ್ಕೃತಿಯನ್ನು ಬಿಂಬಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಳೆದ ಒಂದು ವರ್ಷದಿಂದ ಅದ್ಧೂರಿಯಾಗಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮ ಗ್ರಾಮೀಣ ಸೊಗಡನ್ನು ಬಿಂಬಿಸುವುದರ ಜೊತೆಗೆ ಅಲ್ಲಿನ ಜನರನ್ನು ಮೋಜು ಮಸ್ತಿನಲ್ಲಿ ತೊಡಗಿಸಿ ನಕ್ಕು ನಲಿಸುವಲ್ಲೂ ಯಶಸ್ವಿಯಾಗಿದೆ. ಅಲ್ಲದೆ ಪ್ರತಿ ಭಾನುವಾರ ಬೆಳಗ್ಗೆ ೮ ಗಂಟೆಗೆ ಪ್ರಸಾರವಾಗುವ ಈ ಕಾರ್ಯಕ್ರಮವು ಜನಪ್ರಿಯ ಕಾರ್ಯಕ್ರಮವಾಗಿ ರಾಜ್ಯದ ಜನರ ಜನಮಾನಸದಲ್ಲೂ ಸ್ಥಾನಪಡೆದಿದೆ.

 

 

ಹಳ್ಳಿಹಬ್ಬ ಕಾರ್ಯಕ್ರಮ ಈವರೆಗೆ ಹಾಸನ, ತುಮಕೂರು, ಬೆಳಗಾವಿ, ಮಂಡ್ಯ, ಮೈಸೂರು, ಶಿವಮೊಗ್ಗ, ಚಿತ್ರದುರ್ಗ, ರಾಮನಗರ, ಚಿಕ್ಕಮಗಳೂರು ಜಿಲ್ಲೆಗಳ ಹಳ್ಳಿಗಳಲ್ಲಿ ನಡೆಸಿ ಯಶಸ್ವಿಯಾಗಿದೆ. ಈ ಹಳ್ಳಿ ಸೊಗಡಿನಕಾರ್ಯಕ್ರಮಕ್ಕೆ ಉದಯ ಟಿವಿ ಕಣ್ಮಣಿ, ಬ್ರಹ್ಮಾಸ್ತ್ರ, ಧಾರಾವಾಹಿ ತಂಡದವರೂ ಸಹ ಭಾಗವಹಿಸಿ ಜನರನ್ನು ರಂಜಿಸಿದ್ದಾರೆ.

ಉದಯಕಾಮಿಡಿಒಂಬತ್ತು ವರ್ಷವನ್ನು ಮುಗಿಸಿ ಹತ್ತನೇ ವರ್ಷಕ್ಕೆಕಾಲಿಟ್ಟಿದೆ. ಚಿತ್ರ ಪ್ರೇಕ್ಷಕರು ಕಾಮಿಡಿಯನ್ನು ಎಷ್ಟು ಇಷ್ಟ ಪಡುತ್ತಾರೆ ಇದರಿಂದ ತಿಳಿಯುತ್ತದೆ ಎಂದು ಕರ್ನಾಟಕದ ಕುಳ್ಳ ಎಂತಲೇ ಪ್ರಸಿದ್ಧಿಯಾದ ನಟ, ನಿರ್ದೇಶಕ ದ್ವಾರಕೀಶ್ ಹೇಳಿದ್ದಾರೆ.

 

 

ಕರ್ನಾಟಕದಲ್ಲಿ ಇರೋ ಒಂದೇ ಕಾಮಿಡಿ ಚಾನೆಲ್ ಅದು ಉದಯ ಕಾಮಿಡಿ, ನಾನು ಅದರ ಅಭಿಮಾನಿ ಎಂದು ನವರಸ ನಾಯಕ ಜಗ್ಗೇಶ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಹಾಸ್ಯ ನಟ, ಸಂಗೀತ ನಿರ್ದೇಶಕ ಕೋಕಿಲ ಸಾಧು ಮಾತನಾಡಿ ನಾನು ಯಾವದೇ ಊರಿಗೆ ಹೋಗ್ಲಿ, ಪ್ರತಿಯೊಬ್ಬ ಅಭಿಮಾನಿ ಹೇಳೋದು ಒಂದೇ ಮಾತು, ನಾವು ಮಲಗುವ ಮುಂಚೆ ಉದಯ ಕಾಮಿಡಿಯಲ್ಲಿ ನಿಮ್ಮ ಕಾಮಿಡಿ ನೋಡೇ ಮಲಗೋದು ಎಂದಿದ್ದಾರೆ.

 

 

ಕೆಲಸಕ್ಕೆ ಹೋಗಿ ಬೇಜಾರಾಗಿ ಬಂದಾಗ, ಯಾವುದೇ ಖರ್ಚಿಲ್ಲದೆ ಮನೋರಂಜನೆ ಕೊಡೋದು ಉದಯ ಕಾಮಿಡಿ ಒಂದೇ ಎಂದು ಹೇಳಿದ್ದು ರಾಕ್‌ಲೈನ್ ವೆಂಕಟೇಶ್.
ಚಿಂತೆ ಮರೆಯೋಕೆ ಒಂದೇ ಒಂದು ಸಾಧನೆ ಅದು ಉದಯ ಕಾಮಿಡಿ ಇದು ದೊಡ್ಡಣ್ಣಅವರ ಅನಿಸಿಕೆ. ಆರೋಗ್ಯಕರವಾದ ಕಾರ್ಯಕ್ರಮ ನೀಡುತ್ತಿರೋ ಉದಯ ಕಾಮಿಡಿಗೆ ಕರ್ನಾಟಕದ ಎಲ್ಲಾಜನತೆಯ ಪರವಾಗಿ ನನ್ನ ಅಭಿನಂದನೆಗಳು ಎಂದು ಮುಖ್ಯಮಂತ್ರಿಚಂದ್ರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಹಾಗೆ ಹಿರಿಯ ನಟಿಲಕ್ಷ್ಮೀದೇವಿ, ಉಮೇಶ್, ಡಿಂಗ್ರಿ ನಾಗರಾಜ, ಟೆನ್ನಿಸ್ ಕೃಷ್ಣ, ರೇಖಾದಾಸ್, ಚಿಕ್ಕಣ್ಣ,ಬಿರಾದರ್, ಬ್ಯಾಂಕ್‌ಜನಾರ್ದನ್, ಸೃಜನ್ ಲೋಕೇಶ್, ಮಂಡ್ಯರಮೇಶ್, ಕುರಿ ಪ್ರತಾಪ್ ಉದಯಕಾಮಿಡಿಗೆ ಶುಭ ಹಾರೈಸಿದ್ದಾರೆ.
ಇನ್ನು ಈ ವಾಹಿನಿಯಲ್ಲಿ ನಿರೂಪಕರಾಗಿದ್ದವರು ಈಗ ಚಲನಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರುಗಳ ಸಾಲಿನಲ್ಲಿ ಹಾಸ್ಯ ನಟ ಚಿಕ್ಕಣ್ಣ, ಕುರಿ ಪ್ರತಾಪ್ ಮುಂಚುಣಿಯಲ್ಲಿದ್ದವರು. ಇನ್ನು ಕೆಂಪೇಗೌಡ ೭೦ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಹರೀಷ್ ೪೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇದು ಉದಯಕಾಮಿಡಿಯ ಹೆಮ್ಮೆ ಎಂದು ಹೇಳಬಹುದು.

 

 

ಈ ೯ ವರ್ಷ ಯಶಸ್ವಿಯನ್ನು ಕಾಣಲು ಕಾರಣರಾದ ಎಲ್ಲ ತಂಡದವರಿಗೆ, ನಟ ನಟಿಯರಿಗೆ, ನಿರ್ಮಾಪಕ, ನಿರ್ದೇಶಕರಿಗೆ, ಮಾದ್ಯಮದ ಮಿತ್ರರಿಗೆ, ಸಹೋದ್ಯೋಗಿಗಳಿಗೆ ಉದಯಕಾಮಿಡಿ ತಂಡ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಜನ ಎಷ್ಟೇ ಟೆನ್ಷನ್ ಹಾಗೂ ಗಡಿಬಿಡಿಯಲ್ಲಿ ಮನೆಗೆ ಬಂದಿದ್ದರೂ ಅವರಿಗೆ ನಿರಾಸೆ ಮೂಡಿಸದೆ ಮನಸ್ಸಿಗೆ ಮಂದಹಾಸ ಮೂಡಿಸುವುದು ಉದಯಕಾಮಿಡಿಯ ಉದ್ದೇಶ. ಸತತವಾಗಿ ಜನರನ್ನು ರಂಜಿಸುವಲ್ಲಿ ಯಶಸ್ವಿಯಾದ ಉದಯಕಾಮಿಡಿಈಗ ೯ನೇ ವರ್ಷದಕಡೆಗೆ ಹೆಜ್ಜೆ ಹಾಕಿದ್ದು ಬಹಳ ಸಂತೋಷವಾಗಿದೆ. ಈಗ ಹೊಸ ಹುರುಪಿನೊಂದಿಗೆ ಮತ್ತಷ್ಟು ಹೊಸ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನರನ್ನು ರಂಜಿಸಲು ಈಗ ಮುಂದಾಗಿದೆ. ಈ ವರ್ಷದಲ್ಲಿ ಮತ್ತಷ್ಟು ಹೊಸ ಕಾರ್ಯಕ್ರಮಗಳ ಮೂಲಕ ಜನರನ್ನು ಮತ್ತಷ್ಟು ನಗೆಗಡಲಲ್ಲಿ ತೇಲಿಸಲು ಸನ್ನದ್ಧವಾಗಿದ್ದೇವೆ ಎಂದು ವಾಹಿನಿಯ ಮೂಖ್ಯಸ್ಥರು ಹೆಳಿದ್ದಾರೆ

೯ವರ್ಷ ಪೂರ್ಣಗೋಳಿಸಿದ ಉದಯಕಾಮಿಡಿ ಇನ್ನಷ್ಟು ಮನರಂಜನೆಯನ್ನು ನೀಡಿ ಕರುನಾಡ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಲಿ ಎಂದು ಹಾರೈಸೋಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top