ಸಮಾಚಾರ

ಕಾಮಾಂಧರ ಕಾಮಚೇಷ್ಟೆಗೆ ಬಲಿಯಾದ ಆಸಿಫಾಳ ಕೊನೆ ನಗುವಿನ ಮನಕಲಕುವ ವಿಡಿಯೋ!

ಜಮ್ಮು ಕಾಶ್ಮೀರದಲ್ಲಿ ದೇವಸ್ಥಾನದೊಳಗೇ ಏಳು ವರ್ಷದ ಪುಟ್ಟ ಹೆಣ್ಣು ಮಗುವಿನ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಿದ ಘಟನೆ ಪ್ರಪಂಚದ ಮುಂದೆ ಭಾರತ ದೇಶ ತಲೆ ತಗ್ಗಿಸಿ ನಿಲ್ಲುವಂತೆ ಮಾಡಿದೆ. ಮಕ್ಕಳನ್ನು ದೇವರೆನ್ನುತ್ತಾರಲ್ಲಾ? ಅದೇ ದೇವರನ್ನು ದೇವಸ್ಥಾನದೊಳಗೇ ಕೂಡಿ ಹಾಕಿ ಚಿತ್ರ ಹಿಂಸೆ ನೀಡಿ, ಗ್ಯಾಂಗ್ ರೇಪ್ ಮಾಡಿ ಕೊಂದ ದುಷ್ಟತನ ಮನುಷ್ಯತ್ವ ಇರುವ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ನಂಬಿಕೆ ಮತ್ತು ಶ್ರದ್ಧಾ ಭಕ್ತಿಯ ಕೇಂದ್ರವಾದ ದೇವಸ್ಥಾನದೊಳಗೆ ಇಂಥಾದ್ದೊಂದು ಭೀಭತ್ಸ ಘಟನೆ ನಡೆದಿರೋದು ಆಘಾತಕಾರಿ ವಿಚಾರ .

 

 

ಈಗತಾನೇ ಕಣ್ಣರಳಿಸಿ ಜಗತ್ತನ್ನು ನೋಡಬೇಕಿದ್ದ ಆಸಿಫಾ ಎಂಬ ಏಳು ವರ್ಷದ ಪುಟ್ಟ ಹುಡುಗಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ಕಲ್ಲಿನಿಂದ ತಲೆ ಜಜ್ಜಿ ಕೊಂದ ಪಾಪಿಗಳಿಗೆ ನಿಜಕ್ಕೂ ಅತಿಘೋರ ಶಿಕ್ಷೆಯಾಗಬೇಕಿದೆ. ದೇವರು ಧರ್ಮಗಳ ಹೆಸರಲ್ಲಿ ಇಂಥಾ ಪಾತಕ ಕೆಲಸ ಮಾಡುವವರು ಅದ್ಯಾವ ಧರ್ಮಕ್ಕೆ ಸೇರಿದವರೇ ಆಗಿದ್ದರೂ ಸಾರ್ವಜನಿಕವಾಗಿಯೇ ಭೀಕರವಾಗಿ ಕೊಲ್ಲುವಂಥಾ ಶಿಕ್ಷೆ ವಿಧಿಸಿದರೂ ಕಡಿಮೆಯೇ. ಧರ್ಮಾಧಾರಿತ ರಾಜಕಾರಣ ಮಾಡುತ್ತಾ ಮಹಾನ್ ಸಾಚಾಗಳಂತೆ ಪೋಸು ಕೊಡುವ ನರಸತ್ತ ಆಳುವ ಮಂದಿ ಇಂತಹ ಕಾಮಾಂಧ ಅತ್ಯಾಚಾರಿಗಳ ಸಪೋರ್ಟಿಗೆ ನಿಂತಿರೋದು ನಿಜಕ್ಕೂ ಪ್ರಜಾಪ್ರಭುತ್ವಕ್ಕೆ ಮಾಡಿರುವ ಘೋರ ಅನ್ಯಾಯ!

 

 

ಅತ್ಯಾಚಾರವೇ ಒಂದು ಹೀನ ಕೃತ್ಯ ಅದರಲ್ಲೂ ಇಂತಹ ಮುದ್ದು ಕಂದಮ್ಮಗಳ ಮೇಲೆ ಸಾಮೂಹಿಕವಾಗಿ ದೌರ್ಜನ್ಯ ನಡೆಸೋ ರಣಹೇಡಿಗಳು ಅದ್ಯಾವ ಪುರುಷಾರ್ಥಕ್ಕಾಗಿ ಈ ಕೃತ್ಯವನ್ನು ಎಸಗಿದರೋ. ಇದರ ಹಿಂದೆ ಅವರ ಹಿಡನ್ ಅಜೇಂಡಾಗಳು ಏನೇನು ಇವೆಯೋ ಗೊತ್ತಿಲ್ಲ? ಬಹುಷಃ ಹೊಟ್ಟೆಗೆ ಅನ್ನವನ್ನೇ ತಿನ್ನುವಂತ ಮನುಷ್ಯರುಗಳ್ಯಾರು ಈ ಬೀಭತ್ಸ ಕೃತ್ಯವನ್ನು ಸಮರ್ಥಿಸಿಕೊಳ್ಳೋದಿಲ್ಲ ಅನಿಸುತ್ತದೆ. ಆದರೂ ಇದನ್ನು ಸಮರ್ಥಿಸಿಕೊಂಡು ಅವರಿಗೆ ರಕ್ಷಣೆ ನೀಡಿ ಎಂದು ಆಗ್ರಹಿಸಿ ಪ್ರತಿಭಟನೆ ಮಾಡಿರುವ ಕೆಲವು ಸಂಘಟನೆಗಳ ರಾಕ್ಷಸರು ಕೂಡ ನಮ್ಮ ನಡುವೆಯೇ ಇದ್ದಾರೆ ಎನ್ನುವುದು ವಿಪರ್ಯಾಸ.

ಇದೀಗ ಈ ಹೆಣ್ಣುಮಗಳ ಮನಕಲಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಆಕೆ ಬದುಕಿದ್ದಾಗ ತನ್ನ ತಂದೆಯ ಜೊತೆ ಬೈಕಿನಲ್ಲಿ ಹೋಗುವಾಗ ನಗುನಗುತ್ತಾ ಮುಗುಳ್ನಗೆ ಬೀರುತ್ತಾಳೆ. ಇದನ್ನು ನೋಡಿದವರು ಮನಸ್ಸು ಎಷ್ಟೇ ಕಲ್ಲಾಗಿದ್ದರೂ ಒಂದು ಕ್ಷಣ ಕಣ್ಣೀರು ತರಿಸುವುದಂತೂ ಸುಳ್ಳಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top