ಭವಿಷ್ಯ

ಏಪ್ರಿಲ್ 14ನೇ ತಾರೀಖಿನಿಂದ ಧನಸ್ಸು ರಾಶಿಯಲ್ಲಿ ಶನಿ ವಕ್ರನಾಗುತ್ತಿದ್ದಾನೆ, ಇದರಿಂದ ಯಾವೆಲ್ಲಾ ಪ್ರಭಾವಗಳು ರಾಶಿಯ ಮೇಲೆ ಬೀಳುತ್ತವೆ ತಿಳಿಯೋಣ

ಏಪ್ರಿಲ್ ಹದಿನಾಲ್ಕನೇ  ತಾರೀಖಿನಿಂದ ಧನಸ್ಸು ರಾಶಿಯಲ್ಲಿ ಶನಿ ವಕ್ರನಾಗುತ್ತಿದ್ದಾನೆ. ಇದರಿಂದ ಯಾವೆಲ್ಲಾ ಪ್ರಭಾವಗಳು ರಾಶಿಯ ಮೇಲೆ ಬೀಳುತ್ತವೆ ?

 

ಯಾವ ಕ್ಷೇತ್ರದವರಿಗೆ ಲಾಭ ? ಯಾವ ಕ್ಷೇತ್ರದವರಿಗೆ ನಷ್ಟ ಕಷ್ಟಗಳು ಎದುರಾಗುತ್ತವೆ ? ಶನಿ ವಕ್ರದಿಂದ ಆಗುವಂತಹ ಪ್ರಭಾವಗಳಿಂದ ವೈಯಕ್ತಿಕವಾಗಿ ಎಲ್ಲಾ ಹನ್ನೆರಡು ರಾಶಿಯವರಿಗೆ ಯಾವ ರೀತಿಯ ಫಲ ದೊರೆಯಲಿದೆ .

 

 

ಶನಿ ವಕ್ರನಾಗುವುದರಿಂದ ಹದಿನಾಲ್ಕನೇ ತಾರೀಖಿನಿಂದ ಹೆಚ್ಚಿನದಾಗಿ ಕ್ಷೇತ್ರಗಳ ಮೇಲೆ ವಕ್ರದೃಷ್ಟಿ ಬೀಳುತ್ತದೆ. ಯಾರು ಕಟ್ಟಡ ಕೆಲಸಗಳು, ಕಾಮಗಾರಿ ಮಾಡುತ್ತಿರುತ್ತಾರೋ, ಕಬ್ಬಿಣಕ್ಕೆ ಸಂಬಂಧಪಟ್ಟಂತಹ ವಸ್ತುಗಳು ,ಮರಳು ,ಇವುಗಳ ಬೆಲೆ ಹೆಚ್ಚಾಗಲಿದೆ. ಕೂಲಿಗಳು ಜಾಸ್ತಿಯಾಗುವುದು. ಕೂಲಿ ಕೆಲಸ ಅಂದರೆ ಕಟ್ಟಡ ಕಟ್ಟುವ ಕೆಲಸ ಯಾರು ಮಾಡುತ್ತಿರುತ್ತಾರೋ, ಅವರಿಗೆ ತುಂಬಾನೇ ಅನುಕೂಲವಾಗುವುದು. ತುಂಬಾ ಕಠಿಣ ಕೆಲಸವನ್ನು ಯಾರು ಮಾಡುತ್ತಿರುತ್ತಾರೋ ? ಅವರಿಗೆ ಅನುಕೂಲವಾಗುವುದು. ಸೇವಾ ವೃತ್ತಿ  ಕೆಲಸಗಳಲ್ಲಿ ಇರುವವರಿಗೆ ಸಂಬಳ ಹೆಚ್ಚಾಗಲಿದೆ. ಇದರ ಜೊತೆಗೆ ವೈಯಕ್ತಿಕವಾಗಿ ರಾಶಿಗಳ ಮೇಲೆ ಕೂಡ ಪರಿಣಾಮ ಬೀರಲಿದೆ .

 

ಮೇಷ (Mesha)

 

 

ಮೇಷ ರಾಶಿಯವರಿಗೆ ಪೂರ್ವಾರ್ಜಿತವಾದ ಸ್ವತ್ತು ಅಭಿವೃದ್ಧಿಯಾಗಲಿದೆ. ಅಂದರೆ ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟ ಸಮಸ್ಯೆಗಳು ಬಗೆಹರಿಯುತ್ತವೆ .ತಂದೆಯ ಆರೋಗ್ಯ ಹದಗೆಡಲಿದೆ. ಜೊತೆಗೆ ಅನಗತ್ಯವಾಗಿ ಪ್ರಯಾಣಗಳು ಹೆಚ್ಚಾಗುತ್ತವೆ. ಅಧಿಕವಾದ ಪ್ರಯಾಣದಿಂದ ಖರ್ಚುಗಳು ಹೆಚ್ಚಾಗುತ್ತವೆ. ಯಾವುದೋ ಒಂದು ಸ್ತ್ರೀಯ ಮೂಲಕ ಆರ್ಥಿಕವಾಗಿ ನಿಮಗೆ ಸಹಾಯವಾಗಲಿದೆ. ಯಾವುದೋ ಒಂದು ರೀತಿಯಲ್ಲಿ ಸ್ತ್ರೀಯರಿಂದ ಲಾಭವಾಗಲಿದೆ.

 

ವೃಷಭ (Vrushabha)

 

 

ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಯಾಕೆಂದರೆ ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚಾಗಲಿವೆ. ಸ್ತ್ರೀಯರಿಗೆ  ಗರ್ಭಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಅಥವಾ ಗರ್ಭಕ್ಕೆ ಸಂಬಂಧಪಟ್ಟ ಶಸ್ತ್ರಚಿಕಿತ್ಸೆಗಳು ಆಗುವ ಸಾಧ್ಯತೆ ಇದೆ. ಸ್ವಲ್ಪ ಆರೋಗ್ಯದಲ್ಲಿ ವ್ಯತ್ಯಾಸಗಳು ಹಾರ್ಮೋನುಗಳ ಸರಿಯಾದ  ಪ್ರಮಾಣದಲ್ಲಿ ಇರುವುದಿಲ್ಲ. ಇದರಿಂದ ದಪ್ಪ ಆಗಬಹುದು. ಕಾಲಿಗೆ ಪೆಟ್ಟಾಗುವುದು. ಉದ್ಯೋಗಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳು ಸೃಷ್ಟಿಯಾಗುವ ಸಾಧ್ಯತೆಗಳು ಹೆಚ್ಚಾಗಲಿವೆ.ಆದ್ದರಿಂದ ಸ್ವಲ್ಪ ಎಚ್ಚರವಾಗಿರುವುದು ಬಹಳ ಒಳ್ಳೆಯದು .

 

ಮಿಥುನ (Mithuna)

 

ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸಗಳಾಗುತ್ತವೆ. ಯಾವುದೋ ಬೇರೆ ರೀತಿಯ ಕಾರಣದಿಂದ ಅದನ್ನು ನೇರವಾಗಿ ಹೇಳುವುದು ಕಷ್ಟ ಆದರೆ  ನಿಮ್ಮ ದಾಂಪತ್ಯದಲ್ಲಿ ಬಿಡಿಸಲಾಗದಂತೆ ಬಿರುಕುಗಳು ಹೆಚ್ಚಾಗಿ ಕಾಣಿಸುತ್ತವೆ. ಸ್ವಲ್ಪ ಎಚ್ಚರವಾಗಿದ್ದು  ಪಾಲುದಾರಿಕೆಯಲ್ಲಿ ಸ್ವಲ್ಪ ಸಮಸ್ಯೆಗಳು ಹೆಚ್ಚಾಗುತ್ತವೆ. ಇದರ ಜತೆಯಲ್ಲಿ ತಂದೆಯಿಂದ ಅನುಕೂಲವಾಗುತ್ತದೆ. ಆಕಸ್ಮಿಕವಾಗಿ ಕೆಲವು ವಿಚಾರಗಳಿಗೆ ಸಂಬಂಧಪಟ್ಟಂತೆ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ

 

ಕರ್ಕ (Karka)

ಶತ್ರು ನಾಶ, ಸ್ಥಿರಾಸ್ತಿ ಯೋಗ ಕೂಡಿ ಬರಲಿದೆ, ಅದು ಹೇಗೆ ಬರುತ್ತದೆ ಎಂದು ಗೊತ್ತಿಲ್ಲ. ಆದರೆ ಸ್ಥಿರಾಸ್ತಿ ಯೋಗ ಕೂಡಿ ಬರುತ್ತದೆ. ಸ್ತ್ರೀಯರಿಂದ ನಿಮಗೆ ಆರ್ಥಿಕವಾಗಿ ಲಾಭ ಪ್ರಾಪ್ತಿಯಾಗಲಿದೆ .

 

ಸಿಂಹ (Simha)

 

ಅವಮಾನಗಳು ಬರುತ್ತವೆ. ಆದ್ದರಿಂದ ಸ್ವಲ್ಪ ಎಚ್ಚರವಾಗಿರುವುದು ಉತ್ತಮ. ಆರೋಗ್ಯ ಹದಗೆಡಲಿದೆ, ಮಕ್ಕಳಿಂದ ತೊಂದರೆಗಳಾಗುವ ಸಾಧ್ಯತೆಗಳಿವೆ, ಆದರೆ ಮಕ್ಕಳಿಗೆ ಅನುಕೂಲವಾಗುತ್ತದೆ, ಮಕ್ಕಳ ದಾರಿ ಸುಗಮವಾಗಲಿದೆ, ಉದ್ಯೋಗದಲ್ಲಿ ಪ್ರಗತಿ ಕಾಣಲಿದ್ದೀರಿ ಅಥವಾ ಉದ್ಯೋಗದಲ್ಲಿ ಬದಲಾವಣೆ ಯಾಗಲಿದೆ.

 

ಕನ್ಯಾರಾಶಿ (Kanya)

 

ಸ್ಥಿರಾಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಗೊಂದಲಗಳು ಉಂಟಾಗುತ್ತವೆ.  ಗೃಹ ನಿರ್ಮಾಣ ಮಾಡಬೇಕು, ಮನೆ ಕಟ್ಟಬೇಕು ಪಿತ್ರಾರ್ಜಿತ ಆಸ್ತಿ ಬರಬೇಕು, ಇದೆಲ್ಲದಕ್ಕೂ ಅನುಕೂಲಕರ ವಾತಾವರಣ ಸೃಷ್ಟಿಯಾಗಲಿದೆ. ಈಗ ಮಾರ್ಗಗಳು ಕೂಡ ಗೋಚರಿಸಲಿದೆ.

 

ತುಲಾ (Tula)

 

ಉದ್ಯೋಗ ಬದಲಾವಣೆ, ಸ್ವಲ್ಪ ಅಕ್ಕ ಪಕ್ಕದವರೊಂದಿಗೆ ಪದೇ ಪದೇ ಕಿರಿಕಿರಿಗಳು ಇನ್ನೂ ಮೂರುವರೆ ತಿಂಗಳವರೆಗೆ ಇರುತ್ತದೆ. ಆರೋಗ್ಯಕ್ಕೆ ಸಂಬಂಧಪಟ್ಟಂತೆ ಅನಾನುಕೂಲತೆಗಳು ಕಾಣಿಸುತ್ತವೆ. ಹಣ ಬರಬೇಕು ಎಂದರೆ ಹಣ ಬರುವುದು ಕೂಡ  ನಿಂತು ಹೋಗುತ್ತದೆ. ಹಣಕ್ಕೆ ಸಂಬಂಧಪಟ್ಟಂತ ವಿಚಾರಗಳಲ್ಲಿ ಸ್ವಲ್ಪ ಎಚ್ಚರವಾಗಿರಿ .

 

ವೃಶ್ಚಿಕ (Vrushchika)

 

 

ಸ್ವಲ್ಪ ಕುಟುಂಬದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ. ಮಾತಿನಿಂದಲೇ ಕಲಹಗಳಿಗೆ ಮತ್ತು ನಷ್ಟಗಳು ಜಾಸ್ತಿಯಾಗುತ್ತವೆ. ಸಂಗಾತಿಯಿಂದ ಸಮಸ್ಯೆಗಳು ಬರುತ್ತವೆ, ಯಾವುದೇ ಅನಗತ್ಯ ವಿಚಾರಗಳಿಗೆ ಸಂಬಂಧಪಟ್ಟಂತೆ ಖರ್ಚುಗಳು ಜಾಸ್ತಿಯಾಗುತ್ತಲೇ ಇರುತ್ತವೆ. ದಾರಿ ತಪ್ಪುವ ವಾತಾವರಣಗಳು  ಸೃಷ್ಟಿಯಾಗುತ್ತದೆ.

 

ಧನು ರಾಶಿ (Dhanu)

 

ಆರೋಗ್ಯ ಹದಗೆಡುವ ಸಂಭವ ಇದೆ, ಆರೋಗ್ಯಕ್ಕೆ ಸಂಬಂಧಪಟ್ಟಂತೆ ಬಹಳ ಎಚ್ಚರಿಕೆಯಿಂದ ಇರುವುದು ಒಳ್ಳೆಯದು, ಸ್ವಂತ ಕೆಲಸ, ಕಾರ್ಯ , ಉದ್ಯಮ, ವ್ಯಾಪಾರಗಳನ್ನು ಮಾಡುತ್ತಿರುವವರಿಗೆ  ಕೂಡ ಸ್ವಲ್ಪ ಸಮಸ್ಯೆಗಳು ಎದುರಾಗುತ್ತವೆ. ಪೂರ್ವಿಕರಿಂದ ಮಾಡಿರುವ ಸ್ವತ್ತುಗಳು ನಿಮಗೆ ಒಲಿದು ಬರುತ್ತವೆ ಅಥವಾ ಪೂರ್ವಿಕರಿಂದ ನಿಮಗೆ ಅನುಕೂಲವಾಗುವುದು ತಾಯಿಯ ಕಡೆಯಿಂದ ಯೋಗ, ಸೊಸೆ ಅಥವಾ ಹೆಣ್ಣು ಮಕ್ಕಳಿಂದ ಅನುಕೂಲವಾಗುತ್ತದೆ.

 

ಮಕರ (Makara)

 

ಸ್ವಂತ ಉದ್ಯೋಗಗಳಿಗೆ ನಷ್ಟಕ್ಕೆ ದಾರಿಯಾಗುತ್ತದೆ, ಪ್ರೀತಿ,  ಪ್ರೇಮದ ವಿಷಯಗಳಲ್ಲಿ  ಕೂಡ ಸಮಸ್ಯೆಗಳು ಉತ್ಪತ್ತಿಯಾಗುತ್ತವೆ, ರಾತ್ರಿಯ ಸಮಯದಲ್ಲಿ ನಿದ್ರೆ ಬರುವುದಿಲ್ಲ, ಕೆಟ್ಟ ಕೆಟ್ಟ ಕನಸುಗಳು ಬೀಳುತ್ತವೆ ,ಅದರ ಜತೆ ಆರೋಗ್ಯ ಹದಗೆಡಲಿದೆ.

 

ಕುಂಭರಾಶಿ (Kumbha)

 

ಲಾಭದ ಪ್ರಮಾಣ ಹೆಚ್ಚಾಗಲಿದೆ. ಸ್ಥಿರಾಸ್ತಿಯಿಂದಲೂ ಕೂಡ ಲಾಭವಾಗುತ್ತದೆ, ನೀವು ಮಾಡುವ ಪ್ರಯತ್ನಗಳಲ್ಲಿ ಸ್ವಲ್ಪ ಅಡೆತಡೆ ಉಂಟಾಗುತ್ತದೆ, ಇನ್ನು ಮೂರುವರೆ ತಿಂಗಳವರೆಗೆ ಯಾವುದೇ ಕಾರ್ಯಗಳನ್ನು ಮಾಡದೇ ಇರುವುದು ಒಳ್ಳೆಯದು, ಯಾಕೆಂದರೆ ಸ್ವಲ್ಪ ತೊಂದರೆಗಳು ಆಗುವ ಸಾಧ್ಯತೆ ಜಾಸ್ತಿ ಇದೆ.

 

ಮೀನರಾಶಿ (Meena)

 

 ಬಹಳ ಎಚ್ಚರಿಕೆ ಇರಲಿ, ಉದ್ಯೋಗದಲ್ಲಿ ತೊಂದರೆ, ಸಣ್ಣಪುಟ್ಟ ಸಮಸ್ಯೆಗಳಾಗುತ್ತವೆ ಅಥವಾ ಉದ್ಯೋಗ ಬದಲಾವಣೆಯಾಗಬಹುದು. ಸ್ಪಷ್ಟವಾಗಿ ಉದ್ಯೋಗಕ್ಕೆ ಸಂಬಂಧಪಟ್ಟಂತಹ ಕ್ಷೇತ್ರದಲ್ಲಿ ಮಾತ್ರ ಯಾವುದೋ ಒಂದು  ರೀತಿಯಲ್ಲಿ ಸಮಸ್ಯೆಗಳು ಕಾಡುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top