ಸಮಾಚಾರ

ಇಂದು ದುನಿಯಾ ವಿಜಯ್ ಗೆಳೆಯನ ಮಸಲ್ 360 ಉದ್ಘಾಟನೆ!ರಕ್ಷಿತ್ ಶೆಟ್ಟಿ, ಧನಂಜಯ್, ಅನಿಶ್, ಸೂರಿ ಎಲ್ಲರೂ ಬರ್ತಾರೆ!

ಸ್ಯಾಂಡಲ್ ವುಡ್‌ನಲ್ಲಿ ಫಿಟ್ನೆಸ್ ಬಗ್ಗೆ ತಲೆ ಕೆಡಿಸಿಕೊಂಡು ಬೆವರು ಹರಿಸೋ ಕೆಲವೇ ಕೆಲ ನಟರ ಸಾಲಿನಲ್ಲಿ ಮುಂಚೂಣಿಯಲ್ಲಿರುವವರು ದುನಿಯಾ ವಿಜಯ್. ಎಂಥವರೂ ಬೆರಗಾಗುವಂತೆ ಬಾಡಿ ಫಿಟ್ನೆಸ್ ಕಾಯ್ದುಕೊಂಡಿರೋ ವಿಜಯ್ ಅವರ ಖಾಸಾ ಸ್ನೇಹಿತ ಶ್ರೀನಿ ಇದೀಗ ಜಿಮ್ ಸೆಂಟರ್ ಒಂದನ್ನು ತೆರೆಯಲು ರೆಡಿಯಾಗಿದ್ದಾರೆ. ಅದು ನಾಳೆ ಉದ್ಘಾಟನೆಗೊಳ್ಳಲಿದೆ.

 

ಬನಶಂಕರಿ ಎರಡನೇ ಹಂತದಲ್ಲಿ ಸುಸಜ್ಜಿತವಾಗಿ ತಲೆ ಎತ್ತಿರೋ ಈ ಪಿಟ್ನೆಸ್ ಸೆಂಟರಿಗೆ ಮಸಲ್ 360 ಎಂಬ ಆಕರ್ಷಕ ಹೆಸರನ್ನು ನಾಮಕರಣ ಮಾಡಲಾಗಿದೆ. ಇದರ ಉದ್ಘಾಟನಾ ಕಾರ್ಯಕ್ರಮ ನಾಳೆ ಸಂಜೆ ಆರು ಘಂಟೆಗೆ ನೆರವೇರಲಿದೆ. ಈ ಕಾರ್ಯಕ್ರಮದಲ್ಲಿ ದುನಿಯಾ ವಿಜಯ್, ರಕ್ಷಿತ್ ಶೆಟ್ಟಿ, ಧನಂಜಯ್, ದುನಿಯಾ ಸೂರಿ, ಅನೀಶ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಅಂದ ಹಾಗೆ ಈ ಅತಿಥಿಗಳೆಲ್ಲರೂ ಬಾಡಿ ಫಿಟ್ನೆಸ್ ಕ್ರೇಜ್ ಹೊಂದಿರುವವರೇ ಎಂಬುದು ವಿಶೇಷ. ಮಜಲ್ ೩೬೦ ೧೯ನೇ ಮುಖ್ಯರಸ್ತೆ, ೧೩ನೇ ಕ್ರಾಸ್, ಬನಶಂಕರಿ ೨ನೇ ಹಂತದ ರಾಯಲ್ ಎನ್‌ಫೀಲ್ಡ್ ಶೋರೂಮ್ ಹತ್ತಿರ ಕಾರ್ಯನಿರ್ವಹಿಸಲಿದೆ.

 

 

Muscle360gym

Address :-
19th Main Road, 3796, 13th Cross Rd, Above Royal Enfield Show Room, Banashankari Stage II, Bengaluru, Karnataka 560070

9731838383 Sreeni

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top