ಮನೋರಂಜನೆ

ಒಂದು ವೇಳೆ ಯಶ್ ಮುಖ್ಯಮಂತ್ರಿಯಾದರೆ ಮಾಡೋ ಕೆಲಸ ಏನು ಗೊತ್ತಾ?

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ರಾಕಿಂಗ್ ಸ್ಟಾರ್ ಯಶ್ ಈ ವರೆಗೆ ಹಲವಾರು ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುತ್ತಾ ಸೈ ಅನ್ನಿಸಿಕೊಂಡಿದ್ದರೂ ಯಾವುದೇ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡವರಲ್ಲ. ಆದರೆ ಅವರು ಆಗ ರಾಜಕೀಯಕ್ಕೆ ಬರುತ್ತಾರಂತೆ, ಈಗ ಬರುತ್ತಾರಂತೆ. ಆ ಪಕ್ಷ ಸೇರ್ತಾರಂತೆ, ಈ ಪಕ್ಷ ಸೇರತಾರಂತೆ ಎಂಬಂತ ನಾನಾ ವಿಚಾರಗಳು ಸದಾ ಚರ್ಚೆಯಲ್ಲಿರುತ್ತವೆ. ಏನನ್ನೇ ಮಾಡಿದರೂ ಭಿನ್ನವಾಗಿ ಆಲೋಚಿಸುವ ಯಶ್ ರಾಜಕೀಯದ ವಿಚಾರದಲ್ಲೂ ಅಷ್ಟೇ ಭಿನ್ನತೆಯನ್ನು ಹೊಂದಿದ್ದಾರೆ ಎಂಬುದು ಅವರ ಮಾತುಗಳಲ್ಲೇ ಅವಾಗವಾಗ ಕೇಳಿಬರುತ್ತಿರುತ್ತದೆ. ಅದು ಈಗ ಮತ್ತೊಮ್ಮೆ ಸಾಬೀತಾಗಿದೆ.

 

 

ಇತ್ತೀಚಿಗೆ ತೆರೆಕಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಗುಳ್ಟು ಚಿತ್ರವನ್ನು ವೀಕ್ಷಿಸಲೆಂದು ಒರಿಯನ್ ಮಾಲಿಗೆ ಆಗಮಿಸಿದ ನಟ ಯಶ್ಅವರಿಗೆ ಅಲ್ಲಿ ಬಂದಿದ್ದ ಸುದ್ದಿಗಾರರು ಮತ್ತದೇ ರಾಜಕೀಯಕ್ಕೆ ಸಂಭಂದಿಸಿದ ಕೆಲವು ಪ್ರಶ್ನೆಗಳನ್ನು ಕೇಳಿದರು. ವಿಶೇಷ ಎಂದರೆ ಪ್ರತಿ ಭಾರಿ ನೀವು ರಾಜಕೀಯಕ್ಕೆ ಸೇರ್ತೀರಾ? ಚುನಾವಣೆಯಲ್ಲಿ ನಿಲ್ಲುತ್ತೀರಾ? ಎಂದು ಕೇಳುತ್ತಿದ್ದವರು, ಈ ಬಾರಿ “ಒಂದು ವೇಳೆ ನೀವು ಮುಖ್ಯಮಂತ್ರಿ ಆದ್ರೆ ಏನ್ ಮಾಡ್ತೀರಾ” ಅಂತ ಡೈರೆಕ್ಟ್ ಪ್ರಶ್ನೆಯನ್ನು ಸಿಡಿಸಿದ್ದಾರೆ. ಈ ಪ್ರಶ್ನೆಗೆ ರಾಕಿಂಗ್ ಸ್ಟಾರ್ ಯಶ್ ಅವ್ರು ಕೊಡ ಅಷ್ಟೇ ಬುದ್ದಿವಂತಿಕೆಯಂದ ಉತ್ತರ ನೀಡಿ ತಮ್ಮ ಜಾಣ್ಮೆಯನ್ನು ಪ್ರದರ್ಶಿಸಿದ್ದಾರೆ.

 

 

ಯಶ್ ಕೊಟ್ಟ ಉತ್ತರ ಹೀಗಿತ್ತು “ಒಂದು ವೇಳೆ ನಾನು ಮುಖ್ಯಮಂತ್ರಿ ಆದ್ರೆ ಏನು ಮಾಡಬೇಕು ಎಂಬುದರ ದೊಡ್ಡ ಪಟ್ಟಿಯೇ ನನ್ನ ಬಳಿ ಇದೆ.. ನಾನು ಹೀಗೆ ಮಾಡುತ್ತೇನೆ, ಹಾಗೆ ಮಾಡುತ್ತೇನೆ ಅಲ್ಲ ಅಂತ ಅದನ್ನೆಲ್ಲಾ ಹೇಳೋದು ಅಲ್ಲ. ಅವಕಾಶ ಸಿಕ್ಕಾಗ ಮಾಡಿ ತೋರಿಸಬೇಕು. ಪ್ರಮುಖವಾಗಿ ರಾಜ್ಯದಲ್ಲಿ ಯಾರು ಕೂಡ ಮೂಲಭೂತ ಅವಶ್ಯಕತೆಗಳಿಗೆ ಕಷ್ಟಪಡಬಾರದು, ಉದ್ಯೋಗ, ಬಡತನ ಸೇರಿದಂತೆ ಸಾಕಷ್ಟು ವಿಷಯ ಇವೆ” ಎಂದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top