ಸಮಾಚಾರ

ಹರ್ಷಿಕಾ ಪ್ರಕಾರ ಹುಡುಗರು ಹೇಂಗೆಲ್ಲ ಇರಬಾರ್ದು ಗೊತ್ತಾ?: ಮಜಾ ಚಾಟ್ ವಿಥ್ ಹರ್ಷಿಕಾ ಪೂಣಚ್ಚ.

* ನಿಮ್ಮ ಲೈಫಲ್ಲಿ ನಿಮಗೆ ಸಿಕ್ಕ ಮೊಟ್ಟ ಮೊದಲ ವಂಡರ್ ಗಿಫ್ಟ್ ಏನು?
ಹರ್ಷಿಕಾ : ನನ್ನ ಆಕ್ಟಿಂಗ್ ಕೆರಿಯರ್ ಸಂಪಾದನೆಯಲ್ಲಿ ನಾನು ಪರ್ಚೇಸ್ ಮಾಡಿದ ರೆಮೋಡಸ್ಟರ್ ಕಾರ್. ಅದು ನನಗೆ ನಾನು ಕೊಟ್ಟುಕೊಂಡ ವಂಡರ್ ಗಿಫ್ಟ್.
* ಮೊಟ್ಟ ಮೊದಲು ನಿಮಗೆ ಲವ್ ಪ್ರೊಪೋಸ್ ಯಾರು ಮಾಡಿದ್ದು?
ಹರ್ಷಿಕಾ : ನಾನವಾಗ ಯುಕೆಜಿಯಲ್ಲಿದ್ದೆ, ನನ್ನ ಕ್ಲಾಸ್‌ಮೇಟ್ ಒಬ್ಬ ಹುಡುಗ ನನಗೆ ಹೊಸಪೆನ್ಸಿಲ್ ಕೊಟ್ಟು ’ಐ ಲವ್ ಯೂ’ ಅಂದಿದ್ದ, ಆಗ ಲವ್ ಯೂ ಅನ್ನೋದ್ರ ಅರ್ಥ ಏನು ಅಂಥನೂ ಗೊತ್ತಿರಲಿಲ್ಲ.. ಅವನೇ ನನಗೆ ಮೊದಲು ಪ್ರೊಪೋಸ್ ಮಾಡಿದ್ದು.
* ಇತ್ತೀಚೆಗೆ ನಿಮಗೆ ಬಿದ್ದ ಅತೀ ಕೆಟ್ಟ ಕನಸು ಯಾವುದು?
ಹರ್ಷಿಕಾ : ಅಯ್ಯೋ ಅದನ್ನ ಮಾತ್ರ ಕೇಳಬೇಡಿ, ನಾನು ಇದ್ದಕ್ಕಿದ್ದಂತೆ ದೇಶದ ಪ್ರೈಮ್ ಮಿನಿಸ್ಟರ್ ಆಗಿರೋ ಥರ ಕನಸು ಬಿದ್ದಿತ್ತು. ನನ್ನ ಸುತ್ತ ಮುತ್ತ ಜನವೋ ಜನ, ಆ ಪ್ರಾಬ್ಲಂ ಈ ಪ್ರಾಬ್ಲಂ ಏನ್ ಮಾಡೋದು ಮೇಡಂ ಅಂತ ಎಲ್ರೂ ಪ್ರಶ್ನೆ ಕೇಳ್ತ ಇದ್ರು.. ಶಾಕ್ ಆಗೋಗಿತ್ತು ನನಗೆ.

 

 

* ನೀವು ನೋಡಿದ ಮೊಟ್ಟ ಮೊದಲ ಫಿಲ್ಮ್ ಯಾವುದು ?
ಹರ್ಷಿಕಾ : ಟೈಟಾನಿಕ್. ಅಪ್ಪ ಅಮ್ಮ ನನ್ನನ್ನ ಥಿಯೇಟರ್‌ಗೆ ಕರ‍್ಕೊಂಡು ಹೋಗಿ ತೋರಿಸಿದ ಮೊದಲ ಫಿಲ್ಮ್. ಅದು ಯಾವ ಫಿಲ್ಮ್ ಕಥೆ ಏನು ಅಂತ ಚೂರೂ ಅರ್ಥ ಆಗಿರಲಿಲ್ಲ ನಂಗೆ ಆಗ.
* ನೀವು ತುಂಬ ಬ್ಯೂಟಿ ಅಂತ ನಿಮಗೆ ಗೊತ್ತಾಗಿದ್ದು ಯಾವಾಗ?
ಹರ್ಷಿಕಾ : ನನಗೆ ಚಿಕ್ಕಂದಿನಿಂದ ಒಂದು ಸ್ಟುಪ್ಪಿಡ್ ನೇಚರ್ ಇದೆ. ಯಾವಾಗ್ಲೂ ಕನ್ನಡೀಲಿ ನನ್ನ ಮುಖ ನೋಡಿಕೊಳ್ಳೋದು, ಮೇಕಪ್ ಮಾಡ್ಕೊಳೋಕೆ ಟ್ರೈ ಮಾಡ್ಕೊಳೋದು ಮಾಡ್ತಿದ್ದೆ, ಅವಾಗ್ಲೇ ಅನ್ನಿಸ್ತಿತ್ತಪ್ಪ ನಾನು ಬ್ಯೂಟಿ ಇದೀನಿ ಅಲ್ವ ಅಂತ. ಯಾವಾಗ ಆ ಯುಕೆಜಿ ಹುಡುಗ ಪ್ರೊಪೋಸ್ ಮಾಡಿದ್ನೋ ಕನ್‌ಫರ್ಮ್ ಆಗೋಯ್ತು ನಾನು ಬ್ಯೂಟಿನೇ ಅಂತ. ಆಮೇಲೆ ಕನ್ನಡಿ ಎದುರು ನಿಂತ್ಕೊಂಡು ನನಗೆ ನಾನೆ ಕಿಸ್ ಕೊಟ್ಕೋತಾ ಇದ್ದೆ.

 

 

* ಒಬ್ಬರೇ ಇದ್ದಾಗ ಯಾವ ಹಾಡು ಗುನುಗ್ತಾ ಇರ್ತೀರಿ?
ಹರ್ಷಿಕಾ : ಸದ್ಯಕ್ಕೆ ಆಶಿಕಿ ೨ ಹಾಡುಗಳು, ಮತ್ತೆ ಕಾಕ್‌ಟೈಲ್ ಫಿಲ್ಮ್‌ಲಿ ಒಂದು ಹಾಡಿದೆಯಲ್ಲ ’ತುಮ್ಹೀ ಹೋ ಬಂಧು’ ಅಂತ ಅವೆರಡು ನನ್ನ ಸದ್ಯದ ಫೇವರಿಟ್ ಹಾಡು, ಜೊತೆಗೆ ಮುರಳಿ ಮೀಟ್ಸ್ ಮೀರಾದು ’ನೀನಾದೆನಾ’ ಹಾಡನ್ನ ಯಾವಾಗ್ಲೂ ಗುನುಗ್ತಾ ಇರ್ತೇನೆ.
* ಅಪ್ಪ ಅಮ್ಮನ ಕೈಲಿ ಮೊದಲ ಏಟು ತಿಂದದ್ದು ನೆನಪಿದೆಯೇ?
ಹರ್ಷಿಕಾ : ಅದೇ ಹೇಳಿದ್ನಲ್ಲ ಯುಕೆಜಿ ಪ್ರೊಪೋಸಲ್.. ಅದನ್ನ ಬಂದು ಅಮ್ಮಂಗೆ ಹೇಳ್ದೆ.. ಹಿಂಗೆ ನಂಗೊಬ್ಬ ಬಾಯ್‌ಫ್ರೆಂಡ್ ಐಲವ್ ಯೂ ಹೇಳ್ದ ಅಂತ. ಅವಾಗ ಕಡ್ಡಿ ತಗೊಂಡು ಎರಡೇಟು ಕೊಟ್ಟಿದ್ರು. ಯಾರೇ ಬಂದು ಹಾಗೆಲ್ಲ ಮಾತಾಡಿದ್ರೂ ಅದನ್ನ ಎಂಟರ್‌ಟೈನ್ ಮಾಡಬಾರದು, ಗೋಬ್ಯಾಕ್ ಅನ್ನಬೇಕು ಅಂತ ಗದರಿಸಿ ಹೇಳಿದ್ರು.
* ಇಷ್ಟಪಡೋ ಡ್ರೆಸ್ ಯಾವುದು, ಯಾಕಾಗಿ?
ಹರ್ಷಿಕಾ : ಶಾರ್ಟ್ ಫ್ರಾಕ್ಸ್ ನನಗೆ ತುಂಬ ಇಷ್ಟ. ಯಾಕಂದ್ರೆ ಆ ಡ್ರೆಸ್ ಹಾಕಿದಾಗಲೇ ನನಗೆ ’ಗೊಂಬೆ ಥರ ಕಾಣ್ತಿದೀಯ ಕಣೇ’ ಅನ್ನೋ ಕಾಂಪ್ಲಿಮೆಂಟ್ಸ್ ಸಿಗುತ್ತೆ. ಜೊತೆಗೆ ಅದು ತುಂಬ ಕಂಫರ್ಟಬಲ್ ಅನ್ಸುತ್ತೆ.

 

 

* ನಿಮ್ಮ ಬಗ್ಗೆ ಯಾರಿಗೂ ಗೊತ್ತಿಲ್ಲದೆ ಇರೋ ಒಂದು ಗುಟ್ಟು?
ಹರ್ಷಿಕಾ : ನಂಗೆ ಅಡ್ವೆಂಚರಸ್ ಸ್ಪೋರ್ಟ್ಸ್ ಅಂದ್ರೆ ತುಂಬ ಇಷ್ಟ. ಟ್ರೆಕ್ಕಿಂಗ್, ಸುತ್ತಾಡೋದು, ಬಂಗೀಜಂಪ್ ಮಾಡೋದು, ಪ್ಯಾರಾ ಸೈಲಿಂಗ್, ಸ್ಕೈ ಡೈವಿಂಗ್ ಅಂದ್ರೆ ಪ್ರಾಣ. ಆಗಾಗ್ಗೆ ಇವನ್ನ ಮಾಡ್ತಿರ್ತೀನಿ. ಬೇರೆಯವರು ಮುಟ್ಟೋಕು ಹೆಸರೋದನ್ನ ಅಚೀವ್ ಮಾಡಿ ತೋರಿಸಬೇಕು ಅನ್ನೋದು ನನ್ನ ಆಟಿಟ್ಯೂಡ್.
* ಇಷ್ಟ ಆಗೋ ಪ್ರಾಣಿ, ಕಷ್ಟ ಆಗೋ ಪ್ರಾಣಿ?
ಹರ್ಷಿಕಾ : ಇಷ್ಟದ ಪ್ರಾಣಿ ಲ್ಯಾಬ್ರೆಡಾರ್ ಜಾತಿಯ ನಾಯಿ, ಕಷ್ಟ ಅಂದ್ರೆ ಜಿರಲೆ, ಹಲ್ಲಿ, ಇಲಿ, ಇವು ಯಾವೊಂದು ಇರೋ ಮನೇಗೂ ಹೋಗೋಕೂ ಭಯ ಆಗತ್ತೆ.

* ೨ ಕೋಟಿ ಸಂಭಾವನೆಗೆ ಅತ್ತೆಸೊಸೆ ಟಿವಿ ಸೀರಿಯಲ್ ನಾಯಕಿಯಾಗೋ ಆಫರ್ ಬಂದ್ರೆ?
ಹರ್ಷಿಕಾ : ಎರಡಲ್ಲ, ೨೦ ಕೋಟಿ ಕೊಟ್ರೂ ಮಾಡಲ್ಲ.. ನಾನೇ ನಿಜವಾಗ್ಲೂ ಸೊಸೆಯಾದಾಗಷ್ಟೇ ಆ ಕಥೆ.
* ಯಾವ ನಟರ ಎದುರು ನಟಿಸೋಕೆ ಕೈಕಾಲೂ ನಡುಕ ಶುರುವಾಗಿತ್ತು?
ಹರ್ಷಿಕಾ : ತಮಸ್ಸು ಚಿತ್ರದ ಶೂಟಿಂಗಲ್ಲಿ ಬಹುಬಾಷಾ ನಟ ನಾಜರ್ ಜೊತೆ ಅವರ ಮಗಳಾಗಿ ನಟಿಸೋ ಸಂದರ್ಭದಲ್ಲಿ ಅಂತಹ ಅದ್ಭುತ ನಟನ ಎದುರು ನಾನು ಆಕ್ಟ್ ಮಾಡ್ತೀನ ಅಂತ ಭಯ ಶುರುವಾಗಿತ್ತು.

 

 

* ಇಮ್ಮಿಡಿಯೆಟ್ಟಾಗಿ ನೀವೇ ದೇವರಾಗಿಬಿಟ್ರೆ ನಿಮ್ಮ ಮೊದಲ ಕೆಲಸ?
ಹರ್ಷಿಕಾ : ಪರ್ಮನೆಂಟಾಗಿ ನಾನೇ ದೇವರಾಗಬೇಕು ಅಂತ ನಂಗೆ ನಾನೇ ವರ ಕೊಟ್ಕೋತೀನಿ, ಆರಾಮಾಗಿ ಎಲ್ರಿಗೂ ಆಶೀರ್ವಾದ ಮಾಡ್ಕೊಂಡು ಖುಷ್ ಖುಷಿಯಾಗಿ ಇರಬಹುದಲ್ವಾ ಹ್ಹ ಹ್ಹ ಹ್ಹ ಹ್ಹ
* ನಿಮ್ಮ ಅಡ್ಡ ಹೆಸರು, ಮನೆಲಿ ಕರೆಯೋ ಮುದ್ದು ಹೆಸರು?
ಹರ್ಷಿಕಾ : ಮನೇಲಿ ನಂಗೆ ಹೆಸರಿಡಿದು ಕರೆಯೋದಿಲ್ಲ. ಚುಪ್ಪಿ, ಚುಮ್ಮ, ವಜ್ರ ಅಂತ ಕರೀತಾರೆ..

* ಯಾರಿಗಾದ್ರೂ ಯಾವತ್ತಾದ್ರೂ ಕಪಾಳಕ್ ಹೊಡೆದಿದ್ದು ಉಂಟ?
ಹರ್ಷಿಕಾ : ಇಲ್ಲೀತನಕ ಅಂಥ ಸಂದರ್ಭ ಬಂದಿಲ್ಲ, ಯಾರೇ ಆದ್ರೂ ನನಗೆ ಇಷ್ಟ ಆದ್ರೆ ಮಾತಾಡ್ತೀನಿ, ಇಲ್ಲ ಅಂದ್ರೆ ಅವರ ಹತ್ರಕ್ಕೂ ನಾನು ಸುಳಿಯೋದಿಲ್ಲ. ಹಾಗಾಗಿ ಯಾರಿಗೀ ಕಪಾಳಕ್ಕೆ ಹೊಡೆಯೋ ಸಂದರ್ಭ ಯಾವತ್ತೂ ಬಂದಿಲ್ಲ.
* ಸೈಕಲ್ – ಸ್ಕೂಟರ್ ಕಲಿಯೋ ಟೈಮಲ್ಲಿ ಆದ ತಮಾಷೆಗಳು?
ಹರ್ಷಿಕಾ : ಅಯ್ಯೋ ಅದನ್ನೇನ್ ಕೇಳ್ತೀರ.. ದೊಡ್ಡಕಥೆ.. ಮೊದಲು ಸೈಕಲ್ ತಂದಾಗ ನಮ್ಮನೆ ರಸ್ತೇಲಿ ಚರಂಡಿಗೆ ಅಂತ ಹಳ್ಳ ಅಗೆದು ಹೊಸದಾಗಿ ಚರಂಡಿಗಳನ್ನ ಮಾಡ್ತ ಇದ್ರು. ಸೈಕಲ್ ಕಲಿಯೋಕೆ ಅಂತ ಹೋಗಿ ಅಲ್ಲಿರೋ ಅಷ್ಟೂ ಚರಂಡೀಗೆ ಸೈಕಲ್ ಸಮೇತ ಬೀಳ್ತಿದ್ದೆ. ಇವತ್ತು ಈ ಚರಂಡಿ ಅಂದ್ರೆ ನಾಳೆ ಇನ್ನೊಂದ್ ಚರಂಡಿ, ಯಾವ ಚರಂಡೀಲಿ ಬಿದ್ದಿಲ್ಲ ಅಂತ ಕೇಳಿ. ಸ್ಕೂಟಿ ಕಲಿಯೋವಾಗ ಅಪ್ಪ ಹಿಂದೆ ಹಿಡ್ಕೊಂಡಿರೋರು.. ಹಿಡ್ಕೊಂಡಿದೀನಿ ಓಡ್ಸು ಓಡ್ಸು ಅನ್ನೋರು.. ಕೈ ಬಿಟ್ಟಿರೋರು. ಇವ್ರು ಇದಾರ ಇಲ್ವಾ ಅಂತ ತಿರುಗಿ ನೋಡಿದ್ರೆ ಅಪ್ಪ ನಾಪತ್ತೆ. ನಾನು ಧೊಭ್ ಅಂತ ಎತ್ತಾಕ್ಕೊಂಡು ಬೀಳ್ತಿದ್ದೆ. ಮಜ ಇತ್ತು ಆ ಟೈಮು.

 

 

* ನಿಮಗಿರೋ ಹುಚ್ಚು ಅಭಿಮಾನಿಗಳ ಬಗ್ಗೆ ಹೇಳಿ?
ಹರ್ಷಿಕಾ : ಫೇಸ್‌ಬುಕ್ಕಲ್ಲಿ ನನ್ನ ಹೆಸರಲ್ಲಿ ಫ್ಯಾನ್ಸ್‌ಕ್ಲಬ್ ಮಾಡ್ಕೊಂಡಿದಾರೆ ತುಂಬ ಜನ, ಅದೆಷ್ಟು ಇದಾವೆ ಅಂತ ನನಗೆ ಸರಿಯಾಗಿ ಗೊತ್ತಿಲ್ಲ. ಬೆಸುಗೆ ಟೀಂ, ಗಂಧದಗುಡಿ ಗ್ರೂಪ್ ಹೀಗೆ ತುಂಬ ಕಡೆ ನನಗೇ ಸಿಕ್ಕಿರದ ನನ್ನ ಫೋಟೋಸ್ ಅಪ್‌ಲೋಡ್ ಮಾಡಿರ್ತಾರೆ. ಖುಷಿ ಆಗತ್ತೆ. ಅವರ ಪ್ರೀತಿಗೆ ನಾನು ಯಾವತ್ತಿಗೂ ಚಿರಋಣಿ.
* ನಿಮ್ಮ ಪ್ರಕಾರ ಹುಡುಗರು ಹೇಂಗೆಲ್ಲ ಇರಬಾರ್ದು?
ಹರ್ಷಿಕಾ : ಬೀಡಿಸಿಗರೇಟು-ಕುಡುಕರಾದ್ರೂ ಪರವಾಗಿಲ್ಲ.. ಅವರನ್ನ ಸರಿ ಮಾಡಬಹುದು, ಆದ್ರೆ ಜವಾಬ್ದಾರಿ ಇಲ್ಲದೆ ಇರ್ರೆಸ್ಪಾನ್ಸಿಬಲ್ ಥರ ಇರ್ತಾರಲ್ಲ.. ಹಾಗಂತೂ ಇರಬಾರದು ಹುಡುಗರು. ಯಂಗ್‌ಏಜ್ ಅನ್ನೋದು ಬದುಕಿನಲ್ಲಿ ಅಚೀವ್ ಮಾಡೋಕೆ ನಮಗೆ ಸಿಗೋ ಅಮೂಲ್ಯವಾದ ಟೈಮು. ಅದನ್ನ ರೆಸ್ಪಾನ್ಸಿಬಲಿಟಿಯಿಂದ ಹ್ಯಾಂಡಲ್ ಮಾಡೋ ಹುಡುಗರು ಇಷ್ಟ ಆಗ್ತಾರೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top