ಅರೋಗ್ಯ

ಉಪ್ಪು,ಮೆಣಸು ಮತ್ತು ನಿಂಬೆ ಇಂದ ಮಾಡೋ ಈ ಮೆಡಿಸನ್ ಇದ್ರೆ ಡಾಕ್ಟರ್ ಹತ್ರ ಹೋಗೋ ಅರ್ಧ ಕಷ್ಟ ತಪ್ಪುತ್ತೆ

ಉಪ್ಪು,ಮೆಣಸು ಮತ್ತು ನಿಂಬೆ ಯಾವುದೇ ಮೆಡಿಸಿನ್ಗಳಿಗಿಂತ ವೇಗವಾಗಿ ಈ ಸಮಸ್ಯೆಗಳನ್ನು ಪರಿಹರಿಸುತ್ತದೆ.

ನಿಮ್ಮ ದೈನಂದಿನ ಜೀವನದಲ್ಲಿ ನೀವು ಬಹುಶಃ ಬಳಸುವ ಈ ಸರಳ ಪದಾರ್ಥಗಳು ಸಮಸ್ಯೆಗಳನ್ನು ಗುಣಪಡಿಸುತ್ತವೆ ಎಂದು ನಿಮಗೆ ಖಂಡಿತವಾಗಿ ತಿಳಿದಿರುವುದಿಲ್ಲ.

ನೀವು ಮನೆಯಲ್ಲಿ ಮೆಣಸು,ನಿಂಬೆ ಮತ್ತು ಉಪ್ಪನ್ನು ಬಳಸಿ ಸಮಸ್ಯೆಗಳನ್ನು ಸರಿಪಡಿಸಬಹುದು.

1. ಗಂಟಲು ಕೆರತ/ ಗಂಟಲು ನೋವು:

1 ಚಮಚ ತಾಜಾ ನಿಂಬೆ , 1 ಚಮಚ ಉಪ್ಪು ಮತ್ತು ಸ್ವಲ್ಪ ಮೆಣಸು ಅರ್ಧ ಲೋಟ ಬೆಚ್ಚಗಿನ ನೀರಿನಲ್ಲಿ ಸೇರಿಸಿ ಸೇವಿಸಿ. ನೋಯುತ್ತಿರುವ ಗಂಟಲನ್ನು ನಿವಾರಿಸಲು ಮತ್ತು ಕೆಮ್ಮನ್ನು ತಡೆಗಟ್ಟಲು ಇದು ರಾಮ ಬಾಣ.

2. ಪಿತ್ತಗಲ್ಲು 

ಪಿತ್ತಕೋಶದಲ್ಲಿ ಪಿತ್ತಗಲ್ಲು ರಚಿಸುವ ಜೀರ್ಣಕಾರಿ ದ್ರವ ಗಟ್ಟಿಯಾಗಿ ಕಲ್ಲಿನ ರೂಪ ಪಡೆದುಕೊಳ್ಳುತ್ತದೆ ಅದು ಬಹಳ ನೋವುಂಟು ಮಾಡುತ್ತದೆ, ಮತ್ತು ಸಂಪೂರ್ಣ ಜೀರ್ಣಾಂಗ ವ್ಯವಸ್ಥೆಯನ್ನು ಹಾಳು ಮಾಡುತ್ತದೆ . ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ಮಾಡಿ ಪಿತ್ತಗಲ್ಲನ್ನು ತೆಗೆದು ಹಾಕುತ್ತಾರೆ ಆದರೆ, ಈ ಸಮಸ್ಯೆಯನ್ನು ಬಗೆಹರಿಸಲು ನಿಮಗೆ ಸಹಾಯ ಮಾಡುವ ಒಂದು ಮಾರ್ಗವಿದೆ ಅರ್ಧ ಲೋಟ ನೀರು ಸ್ವಲ್ಪ ನಿಂಬೆ ಮತ್ತು ಸ್ವಲ್ಪ ಕರಿಮೆಣಸು ಮತ್ತು ಆಲಿವ್ ತೈಲವನ್ನು ಬಳಸಿ ಪಿತ್ತಗಲ್ಲನ್ನು ಶಸ್ತ್ರಚಿಕಿತ್ಸೆ ಇಲ್ಲದೆ ಕರಗಿಸಬಹುದು.

3. ತೂಕ ಇಳಿಕೆ

ನಿಮ್ಮ ಚಯಾಪಚಯ(ಮೆಟಬೋಲಿಸಂ) ಕ್ರಿಯೆಯ ವೇಗವನ್ನು ಹೆಚ್ಚಿಸುವ ಸಲುವಾಗಿ, 2 ಚಮಚ ನಿಂಬೆ ರಸ, 1 ಚಮಚ ಜೇನುತುಪ್ಪ ಮತ್ತು ಬೆಳ್ಳುಳ್ಳಿ ¼ ಚಮಚ ಕರಿಮೆಣಸನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಸೇವಿಸಿ,ನಿಂಬೆ ಪಾಲಿಫೀನಾಲ್ಗಳನ್ನು ಹೊಂದಿರುತ್ತದೆ, ಇದು ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಕೊಬ್ಬನ್ನು ಕರಗಿಸಲು ನಿಮಗೆ ಸಹಾಯ ಮಾಡುತ್ತದೆ, ಮತ್ತು ತೂಕವನ್ನು ಕಡಿಮೆಮಾಡುತ್ತದೆ.

4. ವಾಕರಿಕೆ

ಒಂದು ಲೋಟ ಬೆಚ್ಚಗಿನ ನೀರಿನಲ್ಲಿ 1 ಚಮಚ ಕಪ್ಪು ಮೆಣಸು ಮತ್ತು 1 ಚಮಚ ತಾಜಾ ನಿಂಬೆ ರಸ ಮಿಶ್ರಣ ಮಾಡಿ ಕುಡಿಯಿರಿ. ನಿಂಬೆ ಪರಿಮಳವು ವಾಕರಿಕೆ ನಿಲ್ಲಿಸಲು ಸಹಾಯ ಮಾಡುತ್ತದೆ ಮತ್ತು ಕಪ್ಪು ಮೆಣಸು ನಿಮ್ಮ ಹೊಟ್ಟೆಯನ್ನು ಶಮನಗೊಳಿಸುತ್ತದೆ.

5. ಆಸ್ತಮಾ :

ಒಂದು ಲೋಟ ಕುದಿಯುವ ನೀರಿನಲ್ಲಿ, 15 ತುಳಸಿ ಎಲೆಗಳು, 2 ಲವಂಗ ಮತ್ತು 2 ಮೆಣಸು ಸೇರಿಸಿ ಹಾಲಿನೊಂದಿಗೆ ಸೇವಿಸಿ.

6. ಹಲ್ಲುನೋವು

ಅರ್ಧ ಚಮಚ ಲವಂಗ ಎಣ್ಣೆ ಮತ್ತು ಮೆಣಸು ಅರ್ಧ ಚಮಚ ಮಿಶ್ರಣ ಮಾಡಿ ನಂತರ ನೋವಿರುವ ಹಲ್ಲಿನ ಮೇಲೆ ಮಿಶ್ರಣವನ್ನು ಲೇಪಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top