ದೇವರು

ಭೂಮಿಯ ಅಯಸ್ಕಾಂತೀಯ ಕೇಂದ್ರ ಬಿಂದು ಈ ನಟರಾಜ ದೇವಸ್ಥಾನದಲ್ಲಿದ್ದು ,ಇದನ್ನ ಹೇಗೆ ಕಟ್ಟಿಸಿದ್ರು ಅಂತ ವಿಜ್ಞಾನಕ್ಕೆ ಈಗಲೂ ಸವಾಲಾಗಿದೆ

ಚಿದಂಬರಂ ದೇವಸ್ಥಾನ:

 

ಚಿದಂಬರಂ ದೇವಸ್ಥಾನ ಹಿಂದೂ ದೇವಾಲಯವಾಗಿದ್ದು, ಶಿವನಿಗೆ ಸಮರ್ಪಿತವಾದ ಈ ದೇವಸ್ಥಾನ ತಮಿಳು ನಾಡಿನ ಚಿದಂಬರಂ ಬಳಿ ಇದೆ.ಚಿದಂಬರಂ ಐದು ಪವಿತ್ರ ಶಿವ ದೇವಾಲಯಗಳಲ್ಲಿ ಒಂದಾಗಿದೆ,ಈ ಐದು ದೇವಾಲಯಗಳಲ್ಲಿ ಪ್ರತಿಯೊಂದೂ ದೇವಾಲಯ ಪಂಚಭೂತಗಳ ಅಂಶಗಳಲ್ಲಿ ಒಂದನ್ನು ಪ್ರತಿನಿಧಿಸುತ್ತದೆ; ಚಿದಂಬರಂ ಆಕಾಶವನ್ನು ಪ್ರತಿನಿಧಿಸುತ್ತದೆ ಹಾಗೆ ಇತರ ನಾಲ್ಕು ದೇವಾಲಯಗಳು: ತಿರುವನೈಕಾವಲ್ ಜಂಬುಕೇಶ್ವರ, ತಿರುಚಿ (ನೀರು), ಕಾಂಚಿ ಏಕಾಂಬರೇಶ್ವರ (ಭೂಮಿ) ಕಾಂಚೀಪುರಂ, ತಿರುವಣ್ಣಾಮಲೈ ಅರುಣಾಚಲೇಶ್ವರ (ಬೆಂಕಿ), ತಿರುವಣ್ಣಾ ಮಲೈ ಮತ್ತು ಕಾಳಹಸ್ತಿ ನಾಥರ್ (ಗಾಳಿ), ಕಾಳಹಸ್ತಿ.ಇನ್ನು ಉಳಿದ 4 ಪಂಚಭೂತಗಳನ್ನು ಪ್ರತಿನಿಧಿಸುತ್ತದೆ.

 

 

ದೇವಾಲಯದ ಸಂಕೀರ್ಣವು 50 ಎಕರೆಗಳಷ್ಟು ವಿಸ್ತಾರವಾಗಿದೆ. ಇದು ಶಿವ ನಟರಾಜ ಮತ್ತು ಗೋವಿಂದರಾಜ ದೇವರಿಗೆ ಸಮರ್ಪಿತವಾದ ಪುರಾತನ ಮತ್ತು ಐತಿಹಾಸಿಕ ದೇವಸ್ಥಾನವಾಗಿದ್ದು, ಶೈವ ಮತ್ತು ವೈಷ್ಣವ ದೇವತೆಗಳೆರಡೂ ಒಂದೇ ಸ್ಥಳದಲ್ಲಿ ನೆಲೆಗೊಂಡಿರುವ ಕೆಲವು ದೇವಾಲಯಗಳಲ್ಲಿ ಒಂದಾಗಿದೆ. ಶೈವ ಅನುಯಾಯಿಗಳಿಗೆ ಚಿದಂಬರಂ ಎಂದು ಕರೆಯುತ್ತಾರೆ , ಅದೇ ರೀತಿ, ವೈಷ್ಣವ ಧರ್ಮದ ಅನುಯಾಯಿಗಳು ಶ್ರೀರಂಗಂ ಎಂದು ಕರೆಯುತ್ತಾರೆ.

ಚಿದಂಬರಂ ಎಂಬ ಶಬ್ದ 2 ಪದಗಳಿದ ಆಗಿದೆ ಚಿದಂ ಅಂದರೆ ಜ್ಞಾನ ಅಂಬರ ಎಂದರೆ ಆಕಾಶ .ಆಕಾಶದಷ್ಟು ಜ್ಞಾನ ಎಂದು ಅರ್ಥ. ಎಲ್ಲಾ ವೇದಗಳು ಮತ್ತು ಗ್ರಂಥಗಳ ಪ್ರಕಾರ ಆಕಾಶದಷ್ಟು ಜ್ಞಾನ ಸಾಧಿಸಬೇಕಾದ ಅಂತಿಮ ಗುರಿಯಾಗಿದೆ.ಚಿದಂಬರಂ ಎಂಬ ಶಬ್ದಕ್ಕೆ ಇನ್ನೊಂದು ಅರ್ಥ ದೇವರು ನೃತ್ಯ ಮಾಡುವಂತ ಜಾಗ .

 

 

ವೈಶಿಷ್ಟ್ಯತೆಗಳು:

 

ಈ ದೇವಾಲಯದ ವಿಶಿಷ್ಟ ಲಕ್ಷಣವೆಂದರೆ ನಟರಾಜನದ ಚಿತ್ರ. ಇದು ಭಗವಾನ್ ಶಿವನನ್ನು ನೃತ್ಯ ಭರತನಾಟ್ಯದ ಪಿತಾಮಹನೆಂದು ಮತ್ತು ಶಿವನನ್ನು ಶ್ರೇಷ್ಠ ನೆಂದು ಚಿತ್ರಿಸುತ್ತದೆ . ಲಿಂಗದ ಬದಲಿಗೆ ಮಾನವಕುಲದ ಮೂರ್ತಿ ಪ್ರತಿಸ್ಥಾಪಿಸಿರುವುದು ಇಲ್ಲಿನ ವಿಶೇಷ . ನಟರಾಜನ ತಾಂಡವ ನೃತ್ಯವು ಬ್ರಹ್ಮಾಂಡದ ಚಲನೆ ಶಿವನಿಂದ ಉಂಟಾಗಿದೆ ಎಂಬುದನ್ನು ಸೂಚಿಸುತ್ತದೆ.

ದೇವಾಲಯದ ದಂತಕಥೆ:

 

 

ಚಿದಂಬರಂನ ಕಥೆಯು ಶಿವನ ದಂತಕಥೆಯೊಂದಿಗೆ ಪ್ರಾರಂಭವಾಗುತ್ತದೆ ಥಿಲೈ ವನಮ್ (ವನಮ್ ಎಂದರೆ ಅರಣ್ಯ ಮತ್ತು ಥಿಲೈ ಎಂದರೆ ಮರಗಳು),ಈ ದೇವಸ್ಥಾನದ ಶಿಲ್ಪಗಳು ಮತ್ತು ಥಿಲೈ ಮರಗಳು 2 ನೇ ಶತಮಾನಕ್ಕಿಂತಲೂ ಹಿಂದಿನದು).

ಥಿಲೈಕಾಡುಗಳಲ್ಲಿ ಮಾಯಾ ಪ್ರಾಬಲ್ಯವನ್ನು ನಂಬಿದ ಸಂತರು ಅಥವಾ ‘ಋಷಿಗಳು’ ವಾಸಿಸುತ್ತಿದ್ದರು .ಋಷಿಗಳು ಇಲ್ಲಿ ಜಪ ತಪಗಳನ್ನು ಮಾಡುತ್ತಿದ್ದರು ಮತ್ತು ಅವರು ಮಾಯಮಂತ್ರಗಳಲ್ಲಿ ಪರಿಣಿತಿ ಹೊಂದಿದ್ದರು .

 

 

ಒಂದು ದಿನ ಋಷಿಗಳು ತಪಸ್ಸು ಮಾಡುವ ಸಮಯದಲ್ಲಿ ವಿಷ್ಣು ಮೋಹಿನಿ ಎಂಬ ಸುಂದರ ಹೆಣ್ಣಿನ ವೇಷ ಹಾಕಿಕೊಂಡು ಬರುತ್ತಾನೆ,ಮೋಹಿನಿ ವೇಷಧಾರಿಯಾದ ವಿಷ್ಣು ತನ್ನ ಮಾದಕತೆಯಿಂದ ಋಷಿಗಳ ತಪಸ್ಸನ್ನು ಭಂಗ ಮಾಡುತ್ತಾನೆ,ಇದರಿಂದ ಕೋಪಗೊಂಡ ಋಷಿಗಳು ತಮ್ಮ ಮಾಯ ಶಕ್ತಿಯಿಂದ ಕಾಡಿನ ಹುಲಿಗಳನ್ನು ಮೋಹಿನಿಯ ಮೇಲೆ ಬಿಡುತ್ತಾರೆ ಅದು ಫಲಕಾರಿಯಾಗದೆ ಹೋದಾಗ ಮಾಯ ಶಕ್ತಿಯಿಂದ ಒಂದು ರಾಕ್ಷಸನನ್ನ ಸೃಷ್ಠಿ ಮಾಡುತ್ತಾರೆ ಅದು ಏನು ಫಲಕಾರಿಯಾಗುವುದಿಲ್ಲ ಆಗ ನಟರಾಜ ದೇವರು ಬಂದು ರಾಕ್ಷಸನ ಬೆನ್ನ ನೆಲೆ ಕುಳಿತು ತಾಂಡವ ನೃತ್ಯ ಮಾಡಿ ,ಋಷಿಗಳಿಗೆ ಕಲಿತ ವಿದ್ಯೆಯನ್ನು ಕೆಟ್ಟ ಕೆಲಸಗಳಿಗೆ ಯಾವತ್ತು ಉಪಯೋಗಿಸಬಾರದು ಎಂದು ಬುದ್ದಿ ಹೇಳುತ್ತಾರೆ .ಋಷಿಗಳಿಗೆ ಈ ಮೂಲಕ ಅವರ ತಪ್ಪು ಗೊತ್ತಾಗುತ್ತದೆ ಎನ್ನುವ ಇತಿಹಾಸ ಇದ್ದು .

ನಂತ್ರ ನಾಟ್ಯ ರಾಜ ನಟರಾಜ ಇಲ್ಲಿ ನೆಲೆಗೊಂಡ ಎಂಬ ನಂಬಿಕೆ ಇದೆ.

ವಿಜ್ಞಾನಕ್ಕೆ ಸವಾಲಾದ ಚಿದಂಬರಂ ನಟರಾಜ ದೇವಾಲಯ

 

ನೃತ್ಯ ಭಂಗಿಯಲ್ಲಿರುವ ನಟರಾಜ ಭೂಮಿಯ ಅಯಸ್ಕಾಂತೀಯ ಸಮಭಾಜಕ ಕೇಂದ್ರ ಎಂದು ಹೇಳಲಾಗುತ್ತದೆ. ಅಯಸ್ಕಾಂತೀಯ ಸಮಭಾಜಕ ಕೇಂದ್ರದ ಮಧ್ಯ ಬಿಂದು ನಿಖರವಾಗಿ ಶಿವನ ಪಾದದಲ್ಲಿದೆ ಎಂದು ಹೇಳಲಾಗಿದೆ.

ವಿಷ್ಣುವಿನ ನಾಭಿ ಗ್ಯಾಲಕ್ಸಿಯ ಬಿಂದು ಎಂದು ಕರೆಯಲಾಗುತ್ತದೆ , ಚಿದಂಬರಂ ಭೂಮಿಯ / ಬ್ರಹ್ಮಾಂಡದ ಕಾಂತಕ್ಷೇತ್ರವೆಂಬ ಬಿಂದು ಎಂದು ಕರೆಯಲಾಗುತ್ತದೆ .

ಪೊನ್ನಂಬಲಂನ 64 ಛಾವಣಿಗಳು 64 ಕಲಾಕೃತಿಗಳನ್ನು ಪ್ರತಿನಿಧಿಸುತ್ತವೆ , ಇತರೆ ನಡು ಛಾವಣಿಗಳು ರಕ್ತ ನಾಳಗಳನ್ನು ಪ್ರತಿನಿಧಿಸುತ್ತವೆ .

 

 

21,600 ಚಿನ್ನದ ಛಾವಣಿಯ ಮೇಲೆ ಇರಿಸಲಾದ ಅಂಚುಗಳ ಮೇಲೆ ಶಿವಾಯನಮಃ ಎಂದು ಬರೆಲಾಗಿದೆ ಇದು 21,600 ಶ್ವಾಸ ಗಳನ್ನು ಪ್ರತಿನಿಧಿಸುತ್ತದೆ. ಇದು 24 ಗಂಟೆಗಳ ಅವಧಿಯಲ್ಲಿ ಉಸಿರಾಟದ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ.

72,000 ಮೊಳೆಗಳನ್ನು ಬಳಸಿ ಚಿನ್ನದ ಅಂಚುಗಳನ್ನು ಇರಿಸಲಾಗಿದೆ , ಇವು ನಾಡಿಗಳ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ .

9 ಪವಿತ್ರ ಮಡಕೆಗಳು 9 ರೀತಿಯ ಶಕ್ತಿಯನ್ನು ಪ್ರತಿನಿಧಿಸುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top