fbpx
ರಾಜಕೀಯ

12 ಹೊಸ ಮುಖಗಳಿಗೆ ಕಾಂಗ್ರೆಸ್ ಟಿಕೆಟ್, ಇಲ್ಲಿದೆ ಮಾಹಿತಿ

ನಿನ್ನೆ ರಾತ್ರಿ ಅಳೆದು ತೂಗಿ ಕೊನೆಗೂ ಕಾಂಗ್ರೆಸ್ ಕೊನೆಗೂ ವಿಧಾನಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆ ಮಾಡಿದೆ. ನಿನ್ನೆ ಬಿಡುಗಡೆ ಆದ ಪಟ್ಟಿಯಲ್ಲಿ 224 ವಿಧಾನಸಭೆ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯಲ್ಲಿ 5 ಕ್ಷೇತ್ರಗಳನ್ನು ಬಿಟ್ಟು ಉಳಿದೆಲ್ಲಾ ಕಡೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೆಸರು ಬಿಡುಗಡೆ ಆಗಿದೆ. 12 ಮತಕ್ಷೇತ್ರಗಳಲ್ಲಿ ಹೊಸ ಮುಖಗಳನ್ನು ಪರಿಚಯಿಸುವ ಮೂಲಕ ಎದುರಾಳಿ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ.

 

ಕಲಬುರಗಿ ಗ್ರಾಮೀಣ, ಕಲಬುರಗಿ ಉತ್ತರ, ಖಾನಾಪುರ, ಕೆಜಿಎಫ್ ಹಾಗು ಚಿಂತಾಮಣಿ, ಜಗಳೂರು, ಬೇಲೂರು, ಬೆಂಗಳೂರಿನ ಮಹಾಲಕ್ಷ್ಮಿಲೇಔಟ್, ರಾಜಾಜಿನಗರ, ಸಿ.ವಿ.ರಾಮನ್‍ನಗರ, ಬೊಮ್ಮನಹಳ್ಳಿ, ಜಯನಗರ ಕ್ಷೇತ್ರಗಳಿಂದ ಹೊಸ ಅಭ್ಯರ್ಥಿಗಳು ಸ್ಪರ್ಧೆಗೆ ಇಳಿದು ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ.

ಹೊಸ ಮುಖಗಳು:

* ಗುಲ್ಬರ್ಗಾ ಗ್ರಾಮೀಣ – ವಿಜಯಕುಮಾರ್
* ಗುಲ್ಬರ್ಗಾ ಉತ್ತರ – ಫಾತೀಮ, ಖಮರುಲ್ಲಾ ಇಸ್ಲಾಂ ಪತ್ನಿ
* ಬೇಲೂರು – ಕೀರ್ತನಾ, ರುದ್ರೇಶ್‍ಗೌಡ ಪತ್ನಿ
* ಮಹಾಲಕ್ಷ್ಮಿಲೇಔಟ್ – ಎನ್.ಎಸ್.ಯು.ಐ ಮಂಜುನಾಥ್ ಗೌಡ
* ರಾಜಾಜಿನಗರ – ಪದ್ಮಾವತಿ, ಮಾಜಿ ಮೇಯರ್

* ಸಿ.ವಿ ರಾಮನ್‍ನಗರ – ಸಂಪತ್‍ರಾಜ್, ಮೇಯರ್
* ಬೊಮ್ಮನಹಳ್ಳಿ – ಸುಷ್ಮಾರಾಜ್ ಗೋಪಾಲರೆಡ್ಡಿ
* ಜಗಳೂರು – ಪುಷ್ಪಾ

*ವಿನೋದ್ ಅಸೂಟಿ – ನವಲಗುಂದ

 

* ಖಾನಾಪುರ – ಶ್ರೀ. ಅಂಜಲಿ ನಿಂಬಾಳ್ಕರ್

 

 

* ಜಯನಗರ – ಸೌಮ್ಯ ರೆಡ್ಡಿ
* ಬೊಮ್ಮನಹಳ್ಳಿ – ಸುಷ್ಮಾರಾಜಗೋಪಾಲರೆಡ್ಡಿ
* ಬೇಲೂರು – ಕೀರ್ತನಾ
* ಕೆಜಿಎಫ್ – ರೂಪಾ ಶಶಿಧರ್
* ಚಿಂತಾಮಣಿ – ವಾಣಿ ಕೃಷ್ಣಾರೆಡ್ಡಿ

 

 

ಎನ್.ಎಸ್.ಯು.ಐ ರಾಜ್ಯ ಅಧ್ಯಕ್ಷರಾಗಿರುವ ಮಂಜುನಾಥ್ ಗೌಡ ಅವರು ಕಿರಿಯ ವಯಸ್ಸಿನವರಾಗಿದ್ದು ಇವರ ಸ್ಪರ್ಧೆ ಕುತೂಹಲ ಮೂಡಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top