ಸಮಾಚಾರ

“ಬೆಳಿಗ್ಗೆಯೆಲ್ಲಾ ಅಮ್ಮ ಅಂತಾರೆ, ರಾತ್ರಿ ಆದ್ರೆ ಮಂಚಕ್ಕೆ ಕರೀತಾರೆ” ಮತ್ತೊಬ್ಬ ನಟಿಯ ಗಂಭೀರ ಆರೋಪ

ಬಾಲಿವುಡ್ ನಟಿ ಶ್ರಿ ರೆಡ್ಡಿ ಕಾಸ್ಟಿಂಗ್ ಕೌಚ್ ವಿರುದ್ಧ ಸಮರ ಸಾರಿ ದಿನಗಳ ಹಿಂದೆ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದೇಟಿಗೆ ತೆಲುಗು ಚಿತ್ರರಂಗದೊಳಗೆ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಹೇಳಿ ಕೇಳಿ ತೆಲುಗು ಚಿತ್ರರಂಗದಲ್ಲಿ ಪುರುಷರದ್ದೇ ಪಾರುಪಥ್ಯ. ಇದರ ಬಲದ ಮೂಲಕವೇ ಶ್ರೀ ರೆಡ್ಡಿಯ ಬಾಯಿ ಮುಚ್ಚಿಸುವ ಪ್ರಯತ್ನಗಳೂ ಅವ್ಯಾಹತವಾಗಿ ನಡೆದಿವೆ. ಇದೆಲ್ಲದರ ನಡುವೆಯೂ ಶ್ರೀ ರೆಡ್ಡಿ ತಳೆದಿರುವ ಕಠಿಣ ನಿರ್ಧಾರ ಮತ್ತು ಎಸೆದೊಂದು ಭಯಾನಕ ಬಾಂಬು ಕಂಡು ಟಾಲಿವುಡ್ ತುಂಬಾ ನಡುಕ ಅರಂಭವಾಗಿದೆ!

 

 

ಯಾವಾಗ ನಡು ಬೀದಿಯಲ್ಲಿ ಅರೆ ಬೆತ್ತಲೆಯಾಗಿ ನಿಂತು ಬಾಯಿ ಬಡಕೊಂಡರೂ ನ್ಯಾಯವೆಂಬುದು ಮರೀಚಿಕೆಯಾಯ್ತೋ… ಆಗ ಶ್ರೀ ರೆಡ್ಡಿ ರೊಚ್ಚಿಗೆದ್ದಿದ್ದಾಳೆ. ತನ್ನನ್ನು ಬಲವಂತವಾಗಿ, ಅವಕಾಶ ಕೊಡಿಸುವ ಆಮಿಷವೊಡ್ಡಿ ಕೆಡವಿಕೊಂಡವರ ಪೋಟೋ ಬಿಡುಗಡೆ ಮಾಡುವ ತೀರ್ಮಾನಕ್ಕೆ ಬಂದಿರೋ ಶ್ರೀ ರೆಡ್ಡಿ ಆರಂಭಿಕವಾಗಿ ಬಾಹುಬಲಿ ಖ್ಯಾತಿಯ ನಟ ರಾಣಾ ದಗ್ಗುಬಾಟಿಯ ಸಹೋದರ ಸೇರಿದಂತೆ ಕೆಲವು ನಿರ್ಮಾಪಕರ ಜೊತೆಗಿನ ವಾಟ್ಸ್ ಆಪ್ ಚಾಟ್ ಗಳನ್ನೂ ಹಂಚಿಕೊಳ್ಳುವುದರ ಮೂಲಕ ಅವರವರ ಅಸಲೀಯತ್ತನ್ನು ಹೊರ ಹಾಕಿದ್ದಾಳೆ.

 

 

ಇದೀಗ ಚಿತ್ರರಂಗದ ವಿರುದ್ಧ ಶ್ರೀ ರೆಡ್ಡಿ ಮಾಡಿರುವ ಆರೋಪಕ್ಕೆ ಹಲವು ಕಿರಿಯ ಕಲಾವಿದರು ಧ್ವನಿಗೂಡಿಸಿದ್ದು, ಬೆಳಿಗ್ಗೆ ಚಿತ್ರೀಕರಣದ ಸಮಯದಲ್ಲಿ ಅಮ್ಮ ಎಂದು ಕರೆಯುವ ನಿರ್ಮಾಪಕ,ನಿರ್ದೇಶಕರು ರಾತ್ರಿ ಆದ್ರೆ ಸೆಕ್ಸ್’ಗೆ ಒತ್ತಾಯಿಸುತ್ತಾರೆ.. ಶೂಟಿಂಗ್ ಮುಗಿಸಿ ಮನೆಗೆ ಬಂದ ಮೇಲೂ ವಾಟ್ಸಾಪ್ ಮೂಲಕ ವಲ್ಗರ್ ಆಗಿ ಸಂದೇಶ ಕಳುಹಿಸುತ್ತಾರೆ” ಎಂದು ಹತ್ತು ವರ್ಷಗಳಿಂದಲೂ ಚಿತ್ರರಂಗದಲ್ಲಿರುವ ತೆಲುಗು ನಟಿ ಸಂಧ್ಯಾ ರೆಡ್ಡಿ ಅವರು ಗಂಭೀರ ಆರೋಪ ಮಾಡಿದ್ದಾರೆ.

“ನಾವೆಲ್ಲಾ ಚಿತ್ರರಂಗದಲ್ಲಿರುವ ಕಾಮುಕರ ಕೈಗೊಂಬೆಯಾಗಿರುವ ಪ್ಯಾದೆಗಳು. ಅವರ ಕಾಮದ ದಾಹವನ್ನು ತೀರಿಸಿಕೊಳ್ಳಲು ನಮ್ಮನ್ನು ಅವರಿಗಿಷ್ಟ ಬಂದಂತೆ ಬಳಸಿಕೊಳ್ಳುತ್ತಾರೆ ನಾವು ಇದಕ್ಕೆ ಒಪ್ಪದಿದ್ದರೆ ನಮ್ಮನ್ನು ನಟನೆಯಿಂದ ತಿರಸ್ಕರಿಸುತ್ತಾರೆ. .” ಇಂದು ನಟಿ ಶ್ರೀ ರೆಡ್ಡಿ ನೇತೃತ್ವದಲ್ಲಿ ನಡೆಸಿದ ಸುದ್ದಿಗೋಷ್ಠಿ ಮಾತನಾಡಿದ್ದ ಸುಮಾರು ಹದಿನೈದು ಮಂದಿ ನಟಿಯರು ಕಾಸ್ಟಿಂಗ್ ಕೌಚ್ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳುವವರೆಗೂ ಈ ಹೋರಾಟ ನಿಲ್ಲಿಸದಿರುವುದಾಗಿ ಎಚ್ಚರಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top