ಅರೋಗ್ಯ

ದೇಹದ ಈ ಭಾಗವನ್ನು ಒತ್ತಿಕೊಂಡರೆ ಯಾವೆಲ್ಲಾ ಪ್ರಯೋಜನವಾಗುತ್ತದೆ ಗೊತ್ತೇ

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈನಲ್ಲೇ ಇರುತ್ತದೆ ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಷಯ..ಪ್ರತಿನಿತ್ಯ ನಮ್ಮ ಹಸ್ತ ಮತ್ತು ಪಾದಗಳ ಮೇಲ್ಭಾಗವನ್ನು ನಿರ್ದಿಷ್ಟ ರೀತಿಯಲ್ಲಿ (ಒತ್ತಿಕೊಳ್ಳುವ)ಸ್ಪರ್ಶಿಸುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅಕ್ಯೂಪ್ರೆಶರ್ ಪದ್ಧತಿಯು ನಮ್ಮ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಲು ಸಹಕಾರಿಯಾಗುತ್ತದೆ. ಪ್ರತಿನಿತ್ಯ ಇದನ್ನು ಮಾಡುವುದರಿಂದ ನಮ್ಮ ಆರೋಗ್ಯದಲ್ಲಿ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಸಾಕಷ್ಟು ಬದಲಾವಣೆ ಕಂಡುಕೊಳ್ಳಲು ಸಾಧ್ಯವಿದೆ. ಅಕ್ಯೂಪ್ರೆಶರ್ ಭಾಗವನ್ನು ಒತ್ತುವುದರಿಂದ ಯಾವೆಲ್ಲ ಪ್ರಯೋಜನಗಳನ್ನ ಪಡ್ಕೋಬೋದು ಅಂತ ತಿಳ್ಕೊಬೇಕಂದ್ರೆ ಮುಂದೆ ಓದಿ.

 

1.ಒತ್ತಡವನ್ನು ಕಡಿಮೆಮಾಡುತ್ತದೆ:

 

ಅಕ್ಯೂಪ್ರೆಶರ್ ಪಾಯಿಂಟ್ ಅನ್ನು ಒತ್ತಿಕೊಳ್ಳುವುದರ ಮೂಲಕ ನಿಮ್ಮ ಏಕಾಗ್ರತಾ ಶಕ್ತಿ ಹೆಚ್ಚಾಗುವುದರಿಂದ ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು.ಹೀಗೆ ಮಾಡೋದ್ರಿಂದ ನಿಮ್ ಮನಸಿಗೆ ನೆಮ್ಮದಿಯ ಭಾವನೆ ಬರುತ್ತದೆ.

 

2.ನೋವುನಿವಾರಕ

ಅಕ್ಯೂಪ್ರೆಶರ್ ಪಾಯಿಂಟ್ ಅನ್ನು ಒತ್ತಿಕೊಳ್ಳುವುದು ನರ/ಸ್ನಾಯು ಸೆಳೆತ ಸಮಸ್ಯೆಗಳಿಗೆ ಪರಿಣಾಮವಾಗಿ ಕೆಲಸ ಮಾಡುತ್ತವೆ. ಹಸ್ತ ಮತ್ತು ಪಾದದ ಮೇಲೆ ನರಮಂಡಲದ ಮೂಲ ನರಗಳು ಇರುವುದರಿಂದ ಬಹುಬೇಗ ನೋವು ನಿವಾರಣೆಯಾಗುತ್ತದೆ.

 

3.ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ:

ಕಾಮಾಸಕ್ತಿಯನ್ನು ಹೆಚ್ಚಿಸಲು ಪಾದದ ಮೇಲೆ ಬೆರಳಿನ ಸಹಾಯದಿಂದ ನಾಲ್ಕು – ಐದು ನಿಮಿಷ ಪ್ರೆಶರ್‌ ಹಾಕಿ. ಇದೇ ರೀತಿ ಬೆಳಗ್ಗೆ ಸಂಜೆ ಹತ್ತು ನಿಮಿಷಗಳ ಕಾಲ ಮಾಡಿ. ಇದರಿಂದ ದೇಹದಲ್ಲಿ ಕಾಮಾಸಕ್ತಿಯನ್ನು ಹೆಚ್ಚಿಸುವ ಲಿಬಿಡೊ ಹಾರ್ಮೋನ್‌ ಬಿಡುಗಡೆಯಾಗುತ್ತದೆ. ಇದರಿಂದ ಕಾಮಾಸಕ್ತಿ ಹೆಚ್ಚಾಗುತ್ತದೆ.

 

4.ಖಿನ್ನತೆ-ಶಮನಕಾರಿ


ಪಾದದ ಮೇಲಿನ ಅಕ್ಯೂಪ್ರೆಶರ್ ಪಾಯಿಂಟ್ ಅನ್ನು ಒತ್ತಿಕೊಳ್ಳುವುದರಿಂದ ಒತ್ತಡ ಮತ್ತು ನಿದ್ರಾಹೀನತೆಯ ಪರಿಣಾಮವಾಗಿ ಎದುರಾಗಿರುವ ಖಿನ್ನತೆ ಮತ್ತು ಆತಂಕದ ಸಮಸ್ಯೆಗಳ ಸುಧಾರಣೆಯನ್ನು ಮಾಡಿಕೊಳ್ಳಬಹುದಾಗಿದೆ.

 

5.ಸುಧಾರಿಸಿದ ರಕ್ತಪರಿಚಲನೆ:


ಪಾದದ ಮೇಲಿನ ಅಕ್ಯೂಪ್ರೆಶರ್ ಪಾಯಿಂಟ್ ಅನ್ನು ಒತ್ತಿಕೊಳ್ಳುತ್ತಿದ್ದರೆ ದೇಹದ ನರ ಮಂಡಲವು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.ಇದರಿಂದ ದೇಹದಲ್ಲಿ ರಕ್ತಪರಿಚಲನೆಯು ಉತ್ತಮ ರೀತಿಯಲ್ಲಿ ನಡೆಯಲು ಸಹಕಾರಿಯಾಗಿದೆ.

 

6.ಉತ್ತಮವಾದ ಜೀರ್ಣಕ್ರಿಯೆ:

ಅಕ್ಯೂಪ್ರೆಶರ್ ಪಾಯಿಂಟ್ ಅನ್ನು ಒತ್ತಿಕೊಂಡರೆ ಅಜೀರ್ಣ,ಹೊಟ್ಟೆ ನೋವು, ಈ ಹಂತದಲ್ಲಿ ನಿಮ್ಮ ಚಯಾಪಚಯ ಕ್ರಿಯೆಯನ್ನು ಸರಿಯಾಗಿ ನಡೆಯುವಂತೆ ನರಗಳಿಗೆ ಪ್ರೇರೇಪಿಸುತ್ತದೆ.

 

7.ಬಹುಬೇಗ ದೇಹ ಸುಕ್ಕಾಗುವುದನ್ನು ತಪ್ಪಿಸುತ್ತದೆ:


ಪಾದದ ಮೇಲಿನ ಅಕ್ಯೂಪ್ರೆಶರ್ ಪಾಯಿಂಟ್ ಅನ್ನು ಒತ್ತಿಕೊಳ್ಳುತ್ತಿದ್ದರೆ ದೇಹದ ನರಗಳಿಗೆ ಅರೋಗ್ಯ ಹೆಚ್ಚಾಗುತ್ತದೆ. ನರಮಂಡಲ ಉತ್ತಮವಾಗಿ ಕೆಲಸ ನಿರ್ವಹಿಸಿ ದೇಹವು ಅತಿಬೇಹ ಅಂದರೆ ಚಿಕ್ಕ ವಯಸ್ಸಿನಲ್ಲೇ ಸುಕ್ಕು ಆಗುವುದನ್ನು ತಡೆಯುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top