ಸಮಾಚಾರ

ಫ್ಯಾಮಿಲಿ ಪವರ್’ ಗ್ರ್ಯಾಂಡ್ ಫಿನಾಲೆ ನಡೆಯುತ್ತಿರುವುದು ಪುಟ್ಟ ಹುಡುಗನಿಗಾಗಿ!

ಪವರ್‌ಸ್ಟಾರ್‌ಪುನೀತ್‌ ರಾಜ್‌ಕುಮಾರ್‌ ನಡೆಸಿಕೆೊಡುತ್ತಿರುವ ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಮೂಡಿ ಬಂದಿದ್ದ ನೆಚ್ಚಿನ ಫ್ಯಾಮಿಲಿ ಗೇಮ್‌ಶೋ ’ಫ್ಯಾಮಿಲಿ ಪವರ್‌’ ಕಾರ್ಯಕ್ರಮದ ಮೊದಲ ಆವೃತ್ತಿಗೆ ತೆರೆ ಬಿದ್ದಿದ್ದು. ಇದೇ ಶನಿವಾರ ಮತ್ತು ಭಾನುವಾರ ‘ಫ್ಯಾಮಿಲಿ ‌ಪವರ್‌’ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಪ್ರಸಾರವಾಗಲಿದ್ದು ಆ ಸಂಚಿಕೆಯನ್ನು ಅತ್ಯಂತ ವಿಶೇಷವಾಗಿ ರೂಪಿಸಲಾಗುತ್ತಿದೆ.

 

 

ಸುಮಾರು ಇದ್ದು ತಿಂಗಳ ಹಿಂದೆ ಪ್ರಾರಂಭವಾಗಿದ್ದ ಈ ಷೋ ಇಲ್ಲಿಯವರೆಗೂ ನಲವತ್ತು ಸಂಚಿಕೆಯನ್ನು ಪೂರೈಸಿದೆ. ಕಾರ್ಯಕ್ರಮದಲ್ಲಿ ಎಂಬತ್ತು ಕುಟುಂಬ, ನಾರೂರು ಜನ ಭಾಗವಹಿಸಿದ್ದಾರೆ. ಈ ನಲವತ್ತು ಸಂಚಿಕೆಗಳಲ್ಲೂ ಒಂದೊಂದು ಭಾವನಾತ್ಮಕವಾಗಿ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದ್ದ ಈ ಕಾರ್ಯಕ್ರಮದ ಗ್ರಾಂಡ್ ಫಿನಾಲೆ ನಡೆಯುತ್ತಿರುವುದು ಮೂರು ವರ್ಷದ ಮುದ್ದು ಹುಡುಗ ಪ್ರಚೀತ್ ಗೋಸ್ಕರ. ನೋಡಲು ಮುದ್ದು ಮುದ್ದಾಗಿ ಕಾಣಿಸುವ ಈತನಿಗೆ ಮಾತುಬರಲ್ಲ, ಕಿವಿ ಕೇಳಲ್ಲ.

 

 

ಈಗಾಗಲೇ ಪ್ರಚೀತ್ ಗೆ ಒಂದು ಆಪರೇಷನ್ ಮಾಡಲಾಗಿದೆ ಆದರೆ ಎಲ್ಲರಂತೆ ಪ್ರಚೀತ್’ಗು ಕೂಡ ಕಿವಿ ಕೇಳಬೇಕು, ಮಾತು ಬರಬೇಕು ಅಂದ್ರೆ ಬರೋಬ್ಬರಿ 14 ಲಕ್ಷ ರೂಪಾಯಿಯ ಅವಶ್ಯಕತೆಯಿದೆ. ಹಾಗಾಗಿ ಹುಡುಗನ ಸಹಾಯಾರ್ಥ ನಡೆಯುತ್ತಿರುವ ಈ ಫಿನಾಲೆಯಲ್ಲಿ 15 ಲಕ್ಷ ರೂ. ಬಹುಮಾನಕ್ಕಾಗಿ ನಾಲ್ಕೂ ಕುಟುಂಬಗಳು ಆಡಿ, ಗೆದ್ದ ಬಹುಮಾನವನ್ನು ಆ ಹುಡುಗನ ಚಿಕಿತ್ಸೆಗೆ ನೀಡಲಿವೆ. ಎರಡು ದಿನ ಪ್ರಸಾರವಾಗುವ ಈ ಸಂಚಿಕೆಯಲ್ಲಿ, ಕಲರ್ಸ್ ಕನ್ನಡದ ಮೂಲಕ ಮನೆಮಾತಾಗಿರುವ ಶನಿ, ಅಗ್ನಿಸಾಕ್ಷಿ, ರಾಧಾರಮಣ ಮತ್ತು ಬಿಗ್ ಬಾಸ್ ಕುಟುಂಬಗಳು ಸ್ಪರ್ಧಿಗಳಾಗಿ ಪಾಲ್ಗೊಳ್ಳಲಿವೆ.

 

 

ಇದಕ್ಕೂ ಮುನ್ನ ಪ್ರಚೀತ್ ಕುಟುಂಬ ಫ್ಯಾಮಿಲಿ ಪವರ್ ಕಾರ್ಯಕ್ರಮದಲ್ಲಿ ಬಂದು ಭಾಗವಹಿಸಿತ್ತು ಆದರೆ ಅಲ್ಲಿ ಹೆಚ್ಚು ಹಣವನ್ನು ಗೆಲ್ಲಲು ಅವರಿಗೆ ಸಾಧ್ಯವಾಗಲಿಲ್ಲ. ಮುದ್ದು ಹುಡುಗನ ಸ್ಥಿತಿಯನ್ನು ಮರುಗಿದ ಚಾನೆಲ್ ಮಂದಿ ಆತನಿಗೆ ಸಹಾಯಹಸ್ತ ಚಾಚುವ ಉದ್ದೇಶದಿಂದ ಗ್ರಾಂಡ್ ಫಿನಾಲೆಯಲ್ಲಿ ಗೆಲ್ಲುವ ಬಹುಮಾನದ ಹಣವನ್ನು ಈತನ ಚಿಕಿತ್ಸೆಗೆ ನೀಡಲು ಮುಂದಾಗಿದ್ದು ಈಗ ಆತನ ಸಹಾಯಕ್ಕೆ ವಾಹಿನಿಯ ಕಿರುತೆರೆ ಕುಟುಂಬಗಳೇ ಆಟ ಆಡುತ್ತಿವೆ. ಲಕ್ಷ ಪ್ರಶ್ನೆ ಸುತ್ತಿನಲ್ಲಿ ಒಂದು ಕುಟುಂಬ ಗೆಲ್ಲಬಹುದಾದ ಗರಿಷ್ಠ ಮೊತ್ತವನ್ನು ಹತ್ತು ಲಕ್ಷದಿಂದ ಹದಿನೈದು ಲಕ್ಷಕ್ಕೆ ಏರಿಸಲಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top