ಮನೋರಂಜನೆ

ರಿಲೀಸ್ ಆಗಿರೋ ಕುರುಕ್ಷೇತ್ರ ಮೇಕಿಂಗ್ ವಿಡಿಯೋದಲ್ಲಿ ದರ್ಶನ್, ನಿಖಿಲ್’ಗಿಂತ ಮುನಿರತ್ನರದ್ದೇ ಜೋರು ದರ್ಬಾರು!

ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದ ಚಿತ್ರೀಕರಣ ಸಂಪೂರ್ಣ ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಈ ಚಿತ್ರ ಇಷ್ಟೊತ್ತಿಗೆ ಬಿಡುಗಡೆಯಾಗಬೇಕಿತ್ತು. ಆದರೆ ಕೆಲವು ದೃಶ್ಯಗಳ ರೀಶೂಟ್, ಮತ್ತು ಗ್ರಾಫಿಕ್ ಕೆಲಸಗಳು ಬಾಕಿ ಉಳಿದಿದ್ದರಿಂದ ರಿಲೀಸ್ ಮಾಡಲು ಸಾಧ್ಯವಾಗಿಲ್ಲ. ಇದೀಗ ಚಿತ್ರವು ಬಿಡುಗಡೆಗೆ ಸಿದ್ದವಾಗಿದ್ದು ಆದಷ್ಟ ಬೇಗ ತೆರೆ ಮೇಲೆ ತರುವ ಪ್ಲಾನ್ ನಲ್ಲಿ ಮುನಿರತ್ನ ಇದ್ದಾರೆ. ಇದಕ್ಕೆ ಪೂರಕವೆಂಬಂತೆ ಆಡಿಯೋವನ್ನು ಅದ್ದೊರಿ ಸಮಾರಂಭದ ಮೂಲಕ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಮದ್ಯದಲ್ಲಿ ಚಿತ್ರದಿಂದ ಮೇಕಿಂಗ್ ವಿಡಿಯೋವೊಂದು ರಿಲೀಸ್ ಆಗಿದ್ದು ಹೊಸ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

 

 

ಅಂದಹಾಗೆ ಕುರುಕ್ಷೇತ್ರ ಚಿತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಚಿತ್ರವಾಗಿದ್ದು ಚಿತ್ರದಲ್ಲಿ ಅರ್ಜುನ್ ಸರ್ಜಾ, ರವಿಚಂದ್ರನ್, ಅಂಬರೀಷ್, ಸೋನು ಸೂದ್, ಸೇರಿದಂತೆ ಅನೇಕ ದಿಗ್ಗಜ ಕಲಾವಿದರೇ ದಂಡೇ ನಟಿಸಿದ್ದಾರೆ. ಆದರೆ ಬಿಡುಗಡೆಗೊಂಡಿರುವ ಮೇಕಿಂಗ್ ವಿಡಿಯೋದಲ್ಲಿ ಮಾತ್ರ ಇವರೆಲ್ಲರಿಗಿಂತ ಜಾಸ್ತಿ ನಿರ್ಮಾಪಕ ಮುನಿರತ್ನ ಅವರೇ ಕಾಣಿಸ್ಕೊಂಡಿದ್ದಾರೆ. ಹಾಗಾಗಿ ಮೇಕಿಂಗ್ ವಿಡಿಯೋ ನೋಡಿದವರೆಲ್ಲಾ ಚಿತ್ರದ ಹೀರೋ ಯಾರು ಎಂಬಂಥ ಗೇಲಿ ಮಾಡುತ್ತಿದ್ದಾರೆ. ವಿಡಿಯೋದಲ್ಲಿನ ಪ್ರತಿಯೊಂದು ದೃಶ್ಯಗಳಲ್ಲೂ ಮುನಿರತ್ನ ಅವರೇ ಎದ್ದು ಕಾಣುತ್ತಿರುವುದರಿಂದಲೇ ಚಿತ್ರಕ್ಕೆ ಮುನಿರತ್ನ ಕುರುಕ್ಷೇತ್ರ ಎಂಬ ಹೆಸರಿಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಟ್ರೊಲ್ ಆಗುತ್ತಿದೆ.

 

 

ಅಂದಹಾಗೆ ಚಿತ್ರಕ್ಕೆ ಸಂಬಂಧಪಟ್ಟ ಡಬ್ಬಿಂಗ್, ಗ್ರಾಫಿಕ್ ಕೆಲಸಗಳು ಭರದಿಂದ ಸಾಗುತ್ತಿದೆ. ಚಿತ್ರಕ್ಕೆ ಆಕಾಶ್ ಆಡಿಯೋದಲ್ಲಿ ಡಬ್ಬಿಂಗ್ ಕೆಲಸ ಕೂಡ ಮುಗಿದಿದೆ. ಈಗಾಗಲೇ ಚಿತ್ರ 90% ಕೆಲ್ಸಗಳು ಮುಗಿದಿದ್ದು ಬಾಕಿ ಕೆಲಸಗಳನ್ನು ಮುಗಿದ ತಕ್ಷಣ ಫೈನಲ್ ಕಾಪಿ ಸಿದ್ಧಪಡಿಸಿಕೊಂಡು ಸೆನ್ಸಾರ್ ಬೋರ್ಡ್ ಬಾಗಿಲು ತಟ್ಟಲಿದೆ ಚಿತ್ರತಂಡ. ಐಪಿಎಲ್ ಮುಗಿದ ತಕ್ಷಣ ಮೇ ತಿಂಗಳ ಮದ್ಯದಲ್ಲಿ ತೆರೆಗೆ ಬರಲಿದೆ ಎನ್ನುವುದು ಚಿತ್ರತಂಡ ಆಪ್ತವಲಯದ ಮಾತು. ಅಭಿಮಾನಿಗಳಂತೂ ಆ ದಿನ ಯಾವಾಗ ಬರುತ್ತೋ, ಯಾವಾಗ ಕುರುಕ್ಷೇತ್ರವನ್ನು ಕಣ್ಣುತುಂಬಿಕೊಳ್ಳುತ್ತೇವೋ ಅಂತ ಕಾದು ಕುಳಿತಿದ್ದಾರೆ.

 


ಕುರುಕ್ಕ್ಷೇತ್ರ ಚಿತ್ರಕ್ಕೆ ಭಾರತೀಯ ಮಹಾಕಾವ್ಯ ಮಹಾಭಾರತವನ್ನು ಆಧರಿಸಿ ಜೆ.ಕೆ. ಭಾರವಿಯವರು ಬರೆದಿದ್ದಾರೆ..ಸಿನಿಮಾವನ್ನು ನಾಗಣ್ಣ ನಿರ್ದೇಶಿಸುತ್ತಿದ್ದು, ಮುನಿರತ್ನ ನಿರ್ಮಾಪಕರಾಗಿದ್ದಾರೆ..ವಿ.ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top