ಅರೋಗ್ಯ

ಬಾಯಿ ದುರ್ವಾಸನೆ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಈ ಸಲಹೆಗಳನ್ನೊಮ್ಮೆ ಪ್ರಯತ್ನಿಸಿ.

ಬಾಯಿ ದುರ್ವಾಸನೆ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಈ ಸಲಹೆಗಳನ್ನೊಮ್ಮೆ ಪ್ರಯತ್ನಿಸಿ.

 

 

ಬಾಯಿ ನಮ್ಮ ದೇಹದ ಹೆಬ್ಬಾಗಿಲಿದ್ದಂತೆ. ಯಾವುದೇ ಆಹಾರ ಪದಾರ್ಥವಾದರೂ ಬಾಯಿಯ ಮೂಲಕವೇ ದೇಹದೊಳಗೆ ಹೋಗಬೇಕು. ದೈಹಿಕ ಆರೋಗ್ಯ ಸ್ಥಿತಿಯನ್ನು ಬಾಯಿ ನೋಡಿಯೆ ತಿಳಿಯಬಹುದಾಗಿದೆ. ದೇಹದ ಯಾವುದೇ ಅಂಗಗಳಲ್ಲಿ ಆಗಬಹುದಾದ ಬದಲಾವಣೆಯನ್ನು ರೋಗಸ್ಥಿತಿಯನ್ನು ಬಾಯಿಯ ಲಕ್ಷಣಗಳನ್ನು ಗಮನಿಸಿಯೇ ತಿಳಿಯಬಹುದು.

 

 

ಬಹಳ ಜನರಿಗೆ ತಮ್ಮ ಬಾಯಿಂದ ದುರ್ವಾಸನೆ ಬರುವುದು ತಿಳಿಯುವುದಿಲ್ಲ. ಆದರೆ ಅವರೊಂದಿಗೆ ಮಾತನಾಡುವ ವ್ಯಕ್ತಿಗಳಿಗೆ ಇದರ ಅರಿವು ಬರುತ್ತದೆ. ಹೇಳಿದರೆ ಎಲ್ಲಿ ಬೇಜಾರು ಮಾಡಿಕೊಳ್ಳುವವರೋ ಎಂದು ಬಹಳಷ್ಟು ಸಾರಿ ಸುಮ್ಮನಿರುತ್ತಾರೆ. ವಾಸನೆ ಬರುವ ವ್ಯಕ್ತಿಗಳಿಗೆ ಇದರ ಬಗ್ಗೆ ಗೊತ್ತಾಗುವುದೇ ಎಲ್ಲ. ಬಾಯಿಯ ದುರ್ವಾಸನೆಯನ್ನು ಹೇಗೆ ಪರಿಹಾರ ಮಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳಲು ಮುಂದೆ ಓದಿ.

 

1.ದಿನನಿತ್ಯ ಎರಡು ಬಾರಿ ಬ್ರಷ್ ಮಾಡಿ, ಬಾಯಿ ಮುಕ್ಕಳಿಸಬೇಕು. ಆಹಾರ ಸೇವನೆ ನಂತರ, ರಾತ್ರಿ ಮಲಗುವ ಮುನ್ನ ಬಾಯಿ ಮುಕ್ಕಳಿಸುವುದನ್ನು ಮರೆಯಬೇಡಿ.

 

 

2. ಶುದ್ಧ ನೀರಿನಿಂದ ಬಾಯಿ ಮುಕ್ಕಳಿಸುವುದನ್ನು ರೂಢಿ ಮಾಡಿಕೊಳ್ಳಿ. ಉಗುರು ಬೆಚ್ಚಗಿನ ನೀರಿನ ಜೊತೆ ಸ್ವಲ್ಪ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸುವುದು ಹಲ್ಲು, ಬಾಯಿ ಹಾಗೂ ಗಂಟಲು ಸ್ವಚ್ಛತೆಗೆ ಅನುಕೂಲ. ಇಲ್ಲದಿದ್ದರೆ ಮೆಡಿಕಲ್ ಸ್ಟೋರ್ ಗಳಲ್ಲಿ ಸಿಗುವ ಮೌಥ್ ವಾಷ್ ಗಳನ್ನು ಉಪಯೋಗಿಸಬಹುದು.

 

 

3.ಸೂರ್ಯಕಾಂತಿ ಬೀಜಗಳು ಬಾಯಿ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ತುಂಬಾ ಉಪಯುಕ್ತವಾಗಲಿದೆ. ಸ್ವಲ್ಪ ಸೂರ್ಯಕಾಂತಿ ಬೀಜಗಳನ್ನು ಬಾಯಿಗೆ ಹಾಕಿಕೊಂಡು ಅಗೆದು, ನೀರು ಕುಡಿದರೆ ಸಾಕು. ದುರ್ಗಂಧ ದೂರವಾಗುತ್ತದೆ.

 

 

4 ದಿನಕ್ಕೊಂದು ಸೇಬು ಬಳಸಿದರೆ ಬಾಯಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗಿ ಬಾಯಿ ಸ್ವಚ್ಛವಾಗುತ್ತದೆ. ಬಾಯಿಯ ದುರ್ವಾಸನೆ ನಿರ್ಮೂಲನೆ ಮಾಡುತ್ತದೆ.

 

 

5. ಬಾಯಿಯ ದುರ್ವಾಸನೆಗೆ ನಿಂಬೆಹಣ್ಣು ತುಂಬಾ ಪರಿಣಾಮಕಾರಿಯಾಗಬಲ್ಲುದು.ನಿಂಬೆಹಣ್ಣು ರಸವನ್ನು ಬಿಸಿನೀರಿನೊಂದಿಗೆ ಸೇವಿಸಿ ಬಾಯಿ ಮುಕ್ಕಿಳಿಸುತ್ತಾ ಬಂದರೆ,ದುರ್ವಾಸನೆ ನಾಶವಾಗಿ ಹೊಸ ಉತ್ಸಾಹ ಮೂಡುತ್ತದೆ.

 

 

6.ಬಾಯಿ ದುರ್ವಾಸನೆಯನ್ನು ನಿರ್ಮೂಲನೆ ಮಾಡಿ ಸುವಾಸನೆ ಬೀರುವಂತೆ ಮಾಡಲು ಒಂದೆರಡು ಏಲಕ್ಕಿ ಎಸಳುಗಳನ್ನು ಬಾಯಿಗೆ ಹಾಕಿಕೊಂಡು ಅಗಿಯುತ್ತಾ ಇರಿ. ಏಲಕ್ಕಿ ಅಗಿಯುವುದರಿಂದ ದುರ್ವಾಸನೆ ಹೋಗಲಾಡಿಸುತ್ತದೆ.

 

 

7.ಆಗಾಗ ಸಕ್ಕರೆ ಅಂಶ ಕಮ್ಮಿಯಿರುವ ಚ್ಯೂಯಿಂಗ್ ಗಮ್ ತಿನ್ನಬಹುದು. ಬಾಯಿಯನ್ನು ಎಂಜಲು ಪ್ರಮಾಣ ಹೆಚ್ಚಿಸಿ, ಬಾಯಿ ದುರ್ವಾಸನೆ ಹೊಗಲಾಡಿಸಲು ಇದು ಸಹಾಯಕಾರಿ.

 

 

 

8.ದೂಮಪಾನ ಮದ್ಯಪಾನ ಗಳಂತಹ ದುಶ್ಚಟಗಳಿದ್ದರೆ ಅವುಗಳನ್ನು ಬಿಟ್ಟರೆ ಬಾಯಿಯ ದುವಾಸನೆಯನ್ನು ಹೋಗಲಾಡಿಸಬಹುದು. ಈ ಯಾವುದೇ ಉಪಯೋಗಗಳು ಉಪಯೋಗವಾಗದಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳಿತು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top