ವಿಶೇಷ

ಇನ್ನು 30 ಆಗಿಲ್ಲ ಜೀವನದಲ್ಲಿ ಎಲ್ಲ ಮುಗ್ದೆ ಹೋಯ್ತು ಅಂದ್ಕೊಳ್ಳೋರು ಇವ್ರಗಳ ಬಗ್ಗೆ ತಿಳ್ಕೊಳ್ಳಿ ಜೀವನದಲ್ಲಿ ಮತ್ತೆ ಉತ್ಸಾಹ ಬರುತ್ತೆ

ಈಗಿನ ಕಾಲದಲ್ಲಿ ವಯಸ್ಸಲ್ಲಿರೋರೆ ಸಾಕಪ್ಪ ಈ ಜೀವ ಅಂತಿರೋವಾಗ ಇನ್ನೇನು ಇವತ್ತೋ ನಾಳೆನೋ ಅಂತೀರೋ ಈ ಮುದುಕರು ಮಾಡ್ತಿರೋ ಕೆಲ್ಸಗಳು ವಯಸ್ಸಿದ್ದು ವಯಸ್ಸಾಗಿರೋ ತರ ಆಡ್ತಿರೋರ್ಗೆ ಒಳ್ಳೆ ಪಾಠ ಆಗ್ದೇ ಇರಲ್ಲ

ಟಾವೊ ಪೋರ್ಚನ್-ಲಿಂಚ್

 

 

ಈ ಅಜ್ಜಿ ಹೆಸರು ಟಾವೊ ಪೋರ್ಚನ್-ಲಿಂಚ್ ಪ್ರಪಂಚದ ಅತಿ ಮುದಿಯ ಯೋಗ ಟೀಚರ್ ಹಾಗೆ ಬುಕ್ ಕೂಡ ಬರಿಯುತ್ತೆ, ಈ ಅಜ್ಜಿ ಯೋಗ ಮಾಡೋಕೆ ನಿಂತ್ಕೊಂಡ್ರೆ ಹುಡುಗುರೆಲ್ಲಾ ಠುಸ್ ಪಟಾಕಿ , ಈ ಅಜ್ಜಿಗೆ 100 ವರ್ಷ ದಾಟೋಗಿದೆ, ಬೆಳಗ್ಗೆ ಬೇಗ ಎದ್ದೇಳೋದು , ಒಳ್ಳೆ ಆಲೋಚನೆ ಈ ಅಜ್ಜಿ ಹೆಲ್ತ್ ಸೀಕ್ರೆಟ್ .

 

ಮಸಝೋ ನೋನಕ

 

 

1905 ರಲ್ಲಿ ಹುಟ್ಟಿರೋ ಈ ತಾತನಿಗೆ 112 ತುಂಬಿ 113 ವರ್ಷಕ್ಕೆ ಬಿದ್ದಿದೆ , 7 ಜನ ಜೊತೆಗುಟ್ಟಿರೋರು, ಹೆಂಡತಿ ಎಲ್ರು ತೀರೋಗಿದ್ರು ಜೀವನದಲ್ಲಿ ಒಳ್ಳೇದೇ ಮಾಡ್ಕೊಂಡು ಬಂದಿರೋ ಈ ತಾತಪ್ಪ ವೀಲ್ ಚೇರ್ ಮೇಲೆ ಇರುತ್ತೆ , ಪೇಪರ್ ಓದೋದು , ಕುಸ್ತಿ, ನಾಟಕ ನೋಡೋ ಒಳ್ಳೆ ಅಭ್ಯಾಸ ಇಟ್ಕೊಂಡಿದೆ .

 

ನಬಿ ತಜಿಮಾ

 

 

1900 ರಲ್ಲಿ ಹುಟ್ಟಿರೋ ಈ ಅಜ್ಜಿ ಪ್ರಪಂಚದಲ್ಲೇ ದೊಡ್ಡಜ್ಜಿ 118 ವಯಸ್ಸು ಆದರು ಮಾಸಿಲ್ಲ ಈವಜ್ಜಿ ಸೊಗಸು , ಅಜ್ಜಿಗೆ ಮೊಕ್ಕಳನ್ನ ನೋಡ್ಕೊಳ್ಳೋದು ,ನೂಡಲ್ಸ್ ತಿನ್ನೋದು ಅಂದ್ರೆ ಪಂಚ ಪ್ರಾಣ .

ಮಸ್ತನಮ್ಮ

 

 

ಯುಟ್ಯೂಬ್ ಅಲ್ಲಿ ನಾಟಿ ಸ್ಟೈಲ್ ಅಡುಗೆ ವಿಡಿಯೋ ಮಾಡಿ ಅಪ್ಲೋಡ್ ಮಾಡೋ ಈ ಅಜ್ಜಿ , ಪ್ರಪಂಚದಲ್ಲೇ ಅತಿ ವಯಸ್ಸಾಗಿರೋ ಯುಟ್ಯುಬರ್ ಈ ಅಜ್ಜಿ , 2,50,000 ಕ್ಕೂ ಹೆಚ್ಚು ಸಬ್ಸ್ಕ್ರಿಬರ್ ಇದಾರೆ ಈ ಅಜ್ಜಿ ಚಾನೆಲ್ ಗೆ , ಚಾನೆಲ್ ಮ್ಯಾನೇಜ್ ಮಾಡ್ತಿರೋರು ಅಜ್ಜಿ ಮೊಮ್ಮಗ ಲಕ್ಷ್ಮಣ್ , ಅಜ್ಜಿ ಅಡುಗೆ ಮಾಡ್ತಿದ್ರೆ ನೋಡೋರ ಬಾಯಲ್ಲಿ ನೀರು ಸುರಿಯುತ್ತೆ , ಆಮೇಲೆ ಅಜ್ಜಿ ಎನರ್ಜಿ ನೋಡಿ ಸುಸ್ತಾಗ್ ಹೋಗ್ತೀರಾ .

ಜಿಮ್ ಅರಿಂಗಟೋನ್

 

 

ದೇಹದಾಢ್ಯ ಸ್ಪರ್ಧೆಲಿ 70 ವರ್ಷ ಪಳಗಿದೆ ಈ ತಾತ, ಈ ತಾತನಿಗೆ 85 ವರ್ಷ , ಎಷ್ಟು ಬೇಕೋ ಅಷ್ಟು ಊಟ ಮಾತ್ರ ತಿನ್ನೋದು ಪ್ರೋಟೀನ್ ,ಕಾರ್ಬೋಹೈಡ್ರೇಟ್ ಎಲ್ಲ ಬೇಕಿರೋಷ್ಟು ಮಾತ್ರ .

ಫ್ಯಾಊಜಾ ಸಿಂಗ್

 

 

1911ರಲ್ಲಿ ಹುಟ್ಟಿರೋ ಈ ತಾತ 107 ವರ್ಷ , ಈ ವಯಸ್ಸಲ್ಲೂ ವಯಸ್ಸು ಮಾರೆ ಮಾಚಿ ಮ್ಯಾರಥಾನ್ ಓಡುತ್ತೆ ಈ ತಾತ , ಇವ್ರನ್ನ ‘ಸಿಖ್ ಸೂಪರ್ ಮ್ಯಾನ್ ‘, ‘ರನ್ನಿಂಗ್ ಬಾಬಾ’ ಅಂತ ಕರೀತಾರೆ , ಪಕ್ಕ ವೆಜಿಟೇರಿಯನ್ ಈ ತಾತ ಮಿತಿಯಾಗಿ ತಿಂದ್ಕೊಂಡು ಜೋರಾಗಿ ಓಡ್ಬೇಕು ಅನ್ನೋದು ಈ ತಾತನ ತತ್ವ .

 

ಗ್ರೇಸ್ ಬ್ರೆಟ್

 

 

104 ವರ್ಷದ ಈ ಅಜ್ಜಿ ಕಸೂತಿ ಕಲೆ ಅಂದ್ರೆ ಪ್ರಾಣ ಬಿಡುತ್ತೆ , ಸ್ಕಾಟ್ಲೆಂಡ್ ಬೀದಿಗಳಲ್ಲಿ ಗೋಡೆಗಳಿಗೆ ರಸ್ತೆಗಳಿಗೆ ಕಸೂತಿ ಕಲೆ ಮೂಲಕ ಅಲಂಕಾರ ಮಾಡೋದು ಈ ಅಜ್ಜಿಗೆ ಇಷ್ಟ .

 

ಡಾ ಬಿಲ್ ಫ್ರಾಂಕ್ಲ್ಯಾಂಡ್

 

 

ಅಲರ್ಜಿ ಅನ್ನೋದಕ್ಕೆ ತಾತ ಅಂತ ಈ ಅಜ್ಜನ್ನ ಕರೀತಾರೆ , ವಿಶ್ವದ ಅತ್ಯಂತ ಅನುಭವಿ ವೈದ್ಯ ಕೂಡ ಈ ತಾತ , ಪೆನಿಸಿಲಿನ್ ಕಂಡುಹಿಡಿದ ವ್ಯಕ್ತಿ ಅಲೆಕ್ಸಾಂಡರ್ ಫ್ಲೆಮಿಂಗ್ ಜೊತೆ ಕೂಡ ಕೆಲಸ ಮಾಡಿದ್ದಾರೆ .

 

ವಾನ್ಗ್ -ಓಡ್ ಒಗ್ಗಯ್

 

 

ಮಾರಿಯಾ ಒಗ್ಗೆ ಅಂತ ಕರೆಯಲ್ಪಡುವ ಈ ಫಿಲಿಪಿನೋ ಅಜ್ಜಿ 1917 ರಲ್ಲಿ ಹುಟ್ಟಿರೋ ಈ ಅಜ್ಜಿಗೆ 101 ವಯಸ್ಸು , ಈ ಅಜ್ಜಿ ಪ್ರಪಂಚದಲ್ಲೇ ಹಳೆ ಟಾಟೂ ಕಲಾವಿದೆ .

ಗೋಪಾಲ್ ವಾಸುದೇವ್ ಲೇಲೆ

 

 

ಹಿಮಾಲಯದ ರುಪಿನ್ ಪಾಸ್ ದಾಟಿದ ಅತ್ಯಂತ ಹಳೆಯ ಚಾರಣಿಗಾರ, 82 ವರ್ಷ ವಯಸ್ಸು ,15,350 ಅಡಿ ಎತ್ತರದ ರುಪಿನ್ ಪಾಸ್ ದಾಟಿದ ಅತ್ಯಂತ ವಯಸ್ಕ ವ್ಯಕ್ತಿ ಅಂತ ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ದಾಖಲೆ ಕೂಡ ಇದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top