ಉಪ್ಪಯುತ್ತ ಮಾಹಿತಿ

ನವಿಲು ಗರಿ ಯಾಕೆ ಅದೃಷ್ಟದ ಸಂಕೇತವೆಂದು ಈ ಆರು ಕಾರಣಗಳು ಹೇಳುತ್ತವೆ.

ನವಿಲು ಗರಿ ಯಾಕೆ ಅದೃಷ್ಟದ ಸಂಕೇತವೆಂದು ಈ ಆರು ಕಾರಣಗಳು ಹೇಳುತ್ತವೆ.

 

 

ನವಿಲನ್ನು ಎಲ್ಲರೂ ರಕ್ಷಿಸುತ್ತಾರೆ. ಅಷ್ಟೇ ಅಲ್ಲ ಅದು ನಮ್ಮ ಭಾರತ ದೇಶದ ರಾಷ್ಟ್ರ ಪಕ್ಷಿ ಕೂಡ. ಈ ಕಾರಣಕ್ಕೂ ಕೂಡ ನವಿಲನ್ನು ರಕ್ಷಿಸಲಾಗುತ್ತದೆ.ಈ ಪಕ್ಷಿಯು ಸ್ವಯಂ ತನ್ನಲ್ಲಿರುವ ಅತೀಂದ್ರಿಯ ಶಕ್ತಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ. ಜಾನಪದ ಅಧ್ಯಯನದಲ್ಲಿ ಹೀಗೆ ಬರೆದಿದ್ದಾರೆ ಮನೆಯಲ್ಲಿ ನವಿಲು ಗರಿಯನ್ನು (ರೆಕ್ಕೆಗಳನ್ನು) ಇಟ್ಟರೆ ಅದು ಕೆಟ್ಟ ಮತ್ತು ನಕಾರಾತ್ಮಕ ಶಕ್ತಿಯಿಂದ ಮನೆ ಮತ್ತು ಆ ಮನೆಯಲ್ಲಿ ವಾಸಿಸುವರನ್ನು ಸಹ ರಕ್ಷಿಸುತ್ತದೆ.

 

 

ಈ ವಿಶ್ವದಲ್ಲಿರುವ ಬೇರೆ ದೇಶಗಳಿಗೆ ಹೋಲಿಸಿದರೆ ನಿಜವಾಗಿಯು ನಮ್ಮ ಭಾರತ ದೇಶದಲ್ಲಿ ನವಿಲನ ರೆಕ್ಕೆಗಳನ್ನು ತುಂಬ ಭಕ್ತಿಯಿಂದ ಪೂಜಿಸಲಾಗುತ್ತದೆ.ದೇವನಾದ ಇಂದ್ರದೇವ ನವಿಲಿನ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಾನೆ.ಭಗವಂತನಾದ ಶ್ರೀ ಕೃಷ್ಣನ ಕಿರೀಟದಲ್ಲಿ ನವಿಲಿನ ರೆಕ್ಕೆಗಳು ಇರುತ್ತವೆ.ನವಿಲಿನ ಗರಿಗಳು ಇಲ್ಲದೆ ಹೋದರೆ ಪರಿಪೂರ್ಣತೆ ಇಲ್ಲದಂತಾಗುತ್ತದೆ ಎಂದು ಕೃಷ್ಣನು ಸಮರ್ಥಿಸಿಕೊಳ್ಳುತ್ತಾನೆ.

 

 

ಬೆಳಕಿನ ಹಬ್ಬ ದೀಪಾವಳಿ ಹಬ್ಬದಲ್ಲಿಯೂ ಸಹ ನವಿಲಿನ ರೆಕ್ಕೆಗಳನ್ನು ಕವಡೆಗಳ ಜೊತೆ ಬಳಸಿ ಶೃಂಗರಿಸಲಾಗುತ್ತದೆ. ಇಡೀ ಏಷ್ಯಾ ಖಂಡದಲ್ಲಿಯೇ ನವಿಲಿನ ರೆಕ್ಕೆಗಳನ್ನು ಅತ್ಯಂತ ಮಂಗಳಕರ ವೆಂದು ಭಾವಿಸಿದ್ದಾರೆ.ಆದ್ದರಿಂದ ಹೀಗೆ ಪರಿಗಣಿಸಿರುವುದರಿಂದ ನವಿಲುಗಳನ್ನು ರಕ್ಷಿಸಲಾಗುತ್ತದೆ.ಆದರೂ ಸಹ 20 ನೇ ಶತಮಾನದಲ್ಲಿಯೇ ಏಷ್ಯಾದ ಪಶ್ಚಿಮ ಭಾಗದಲ್ಲಿ ನವಿಲನ್ನು ಮಂಗಳಕರ ಎಂದು ಪರಿಗಣಿಸಲಾಗಿತ್ತು.

 

 

ನವಿಲು ಪಕ್ಷಿಯ ರೆಕ್ಕೆಗಳು ಮಾತ್ರ ಅದೃಷ್ಟ ಮತ್ತು ಸಮೃದ್ಧಿಯ ಸಂಕೇತವಾಗಿವೆ ಎಂದು ಪರಿಗಣಿಸಿದ್ದಾರೆ ಯಾಕೆ ? ಎಂದು ವಿವಿಧ ಪುರಾಣಗಳಲ್ಲಿ ಈ ರೀತಿ ವಿವರಿಸಿದ್ದಾರೆ.

1.ಗ್ರೀಕ್ ಪುರಾಣದಲ್ಲಿ ನವಿಲನ್ನು ಜಾಗರೂಕ ರಕ್ಷಕನಾಗಿ ನೂರು ಕಣ್ಣುಗಳಿಂದ ಸೃಷ್ಟಿ ಮಾಡಲಾಗಿದೆ.ಆದ್ದರಿಂದ ನವಿಲಿನ ರೆಕ್ಕೆಗಳನ್ನು ಸ್ವರ್ಗದ ಮೇಲಿನ ಛಾವಣಿ ಮತ್ತು ನಕ್ಷತ್ರಗಳ ಕಣ್ಣು ಎಂದು ವಿವರಿಸಿದ್ದಾರೆ.
2.ಹಿಂದೂಗಳ ಪುರಾಣದ ಪ್ರಕಾರ ನವಿಲು ದೇವಿ ಲಕ್ಷ್ಮೀಯ ಸಂಕೇತವೆಂದು.ದೇವಿ ಲಕ್ಷ್ಮೀಯು ಅದೃಷ್ಟ,ತಾಳ್ಮೆ, ದಯೆ,ಸಹಾನುಭೂತಿ ಉಳ್ಳವಳ್ಳು.ಆದ್ದರಿಂದ ನವಿಲು ಗರಿ ಅಥವಾ ರೆಕ್ಕೆಗಳು ಈ ಎಲ್ಲಾ ಗುಣಗಳನ್ನು ಪಡೆದುಕೊಂಡಿವೆ ಎಂದು ಹೇಳಲಾಗಿದೆ.
3.ಏಷ್ಯಾ ಖಂಡದಲ್ಲಿ ಆಧ್ಯಾತ್ಮಿಕವಾಗಿ ನವಿಲು ಕ್ವಾನ್ ಯಿನ್ ನ ಸಂಕೇತವಾಗಿವೆ. ಕ್ವಾನ್ ಯಿನ್ ಆಧ್ಯಾತ್ಮಿಕ ಗುಣಗಳ ಪ್ರತಿಬಿಂಬವಾಗಿದೆ.ಅವುಗಳಾದ ದಯೆ,ಸಹಾನುಭೂತಿ, ಎಚ್ಚರ,ಪ್ರೀತಿ ಮತ್ತು ಒಳ್ಳೆಯತನ.
4.ಬುದ್ಧ ಧರ್ಮದವರು ನವಿಲಿನ ರೆಕ್ಕೆಗಳನ್ನು ಮುಕ್ತವಾದ ಸಂಕೇತಕ್ಕೆ ಸಂಬಂಧಿಸಿದೆ ಎಂದು ಪರಿಗಣಿಸಲಾಗಿದೆ.ಯಾಕೆಂದರೆ ನವಿಲು ತನ್ನ ಮೈಯಿಂದ ಬಾಲದ ತನಕ ಇರುವ ಎಲ್ಲಾ ರೆಕ್ಕೆಗಳನ್ನು ಸಹ ಮುಕ್ತವಾಗಿ ಅರಳಿಸುತ್ತದೆ.
5.ಕ್ರಿಶ್ಚಿಯನ್ನ ಧರ್ಮದಲ್ಲಿ ನವಿಲು ಪುನರುತ್ತಾನ,ಅಮರತ್ವವನ್ನು ಪ್ರತಿಬಿಂಬಿಸುವ ಸಂಕೇತವಾಗಿದೆ.ಇದರ ಜೊತೆಗೆ ಆಧ್ಯಾತ್ಮಿಕ ಭೋದನೆಗಳಿಗೂ ಸಹ ನವೀಕರಿಸಿದ್ದಾರೆ ಕ್ರಿಶ್ಚಿಯನ್ ರು.
6.ಮುಸ್ಲಿಂ ಧರ್ಮದಲ್ಲಿರುವ ದಂತಕಥೆಗಳ ಪ್ರಕಾರ.ಈ ಪಕ್ಷಿಯು ತನ್ನ ಸೌಂದರ್ಯದಿಂದಲೇ ಎಲ್ಲರನ್ನು ಬೆರಗು ಗೊಳಿಸುವಂತೆ ಮಾಡುತ್ತದೆ. ದೇವತೆಗಳಲ್ಲಿ ನವಿಲಿನ ರೆಕ್ಕೆಗಳನ್ನು ರಾಜ ಮನೆತನದ ಪ್ರತೀಕ ಮತ್ತು ಸ್ವರ್ಗದ ಬಾಗಿಲು ಎಂದು ಪರಿಗಣಿಸಿ ಚಿಹ್ನೆಯಾಗಿ ಬಳಸುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top