ಕಿರುತೆರೆ

ಅದೇ ಪ್ರಶ್ನೆಗೆ ರಾಗಿಣಿಯಿಂದ ಬಂದಿದ್ದು ಅದೇ ಉತ್ತರ: ಮತ್ತೆ ಕಿಚ್ಚನ ಹೆಸರನ್ನು ಎಳೆದು ತಂದ್ರು ರಾಗಿಣಿ

ವೀರ ಮದಕರಿ ಚಿತ್ರದಲ್ಲಿ ಕಿಚ್ಚಾ ಸುದೀಪ್ ಜೋಡಿಯಾಗಿ ಬಂದ ಘಳಿಗೆಯಲ್ಲಿ ಚಿಗರೆಯಂತಿದ್ದ ನಟಿ ರಾಗಿಣಿ ಸ್ಯಾಂಡಲ್‌ವುಡ್‌ನ ಆಕ್ಷನ್ ಕ್ವೀನ್ ಅಂತಲೇ ಫೇಮಸ್ಸು. ರಾಗಿಣಿ ಯಾವುದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಾಗಲೂ ಮದುವೆ, ರಿಲೇಷನ್ ಶಿಪ್ ಕುರಿತಾದ ಈ ಖಾಸಗೀ ಪ್ರಶ್ನೆಗಳು ತೇಲಿ ಬರೋದು ಮಾಮೂಲಿಯಾಗಿಬಿಟ್ಟಿದೆ. ಇದೀಗ ಮೊನ್ನೆಯ ಶಿವಣ್ಣನ ಕಾರ್ಯಕ್ರಮದಲ್ಲೂ ಅದೇ ರೀತಿಯ ಪ್ರಶ್ನೆಗಳು ಪುನಾರಾವರ್ತನೆ ಗೊಂಡಿವೆ.

 

 

ನಂ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮದ ಮೊನ್ನೆಯ ಸಂಚಿಕೆಯಲ್ಲಿ ನಟಿಯರಾದ ರಕ್ಷಿತಾ ಮತ್ತು ರಾಗಿಣಿ ಅಥಿತಿಗಳಾಗಿ ಬಂದಿದ್ದರು. ಸ್ವಲ್ಪ ಮೋಜು ಮಸ್ತಿ ಹರಟೆಗಳೊಂದಿಗೆ ಮಾತುಕತೆ ನಡೆಸುವ ಈ ಕಾರ್ಯಕ್ರಮದಲ್ಲಿ ಶಿವಣ್ಣ ಕೇಳುವ ಥರಥರ ಪ್ರಶ್ನೆಗಳಿಗೆ ಅಥಿತಿಗಳು ಮುಕ್ತವಾಗಿ ಉತ್ತರ ಕೊಡಬೇಕು ಎನ್ನುವುದು ಕಾರ್ಯಕ್ರಮದ ನಿಯಮ. ಅದರಂತೆ ರಾಗಿಣಿ ಮತ್ತು ರಕ್ಷಿತಾ ಕೂಡ ತಮ್ಮ ಕುರಿತಾತ ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಶಿವಣ್ಣನ ಮುಂದೆ ಬಿಚ್ಚಿಟ್ಟಿದ್ದಾರೆ.

 

 

ಕಾರ್ಯಕ್ರಮದ ಮೂರನೇ ಹಂತವಾದ ರ್ಯಾಪಿಡ್ ಫೇರ್ ಸುತ್ತಿನಲ್ಲಿ ರಾಗಿಣಿಯವರಿಗೆ ಶಿವಣ್ಣ “ಈ ನಟರಲ್ಲಿ ಯಾರನ್ನ ಕೊಲೆ ಮಾಡ್ತೀರಾ? ಯಾರ್ ಜೊತೆ ಡೇಟ್ ಮಾಡ್ತೀರಾ? ಯಾರನ್ನ ಮದುವೆ ಮಾಡ್ಕೋತೀರಾ?” ಎಂದು ಪ್ರಶ್ನೆಯನ್ನು ಕೇಳಿ ‘ಕಿಚ್ಚ ಸುದೀಪ್, ಯಶ್, ಲೂಸ್ ಮಾದ ಯೋಗಿ’ಯವರ ಮೂರು ಆಯ್ಕೆಯನ್ನು ನೀಡಿದರು. ಈ ಪ್ರಶ್ನೆಗೆ ಸಕತ್ ಬೋಲ್ಡ್ ಆಗಿಯೇ ಉತ್ತರ ನೀಡಿದ ರಾಗಿಣಿ. “ಯೋಗಿಯನ್ನು ಕೊಲೆ ಮಾಡ್ತೀನಿ, ಯಶ್ ಜೊತೆ ಡೇಟ್ ಮಾಡ್ತೀನಿ ಮತ್ತು ಸುದೀಪ್ ಅವರನ್ನು ಮದುವೆ ಮಾಡ್ಕೋತೀನಿ.” ಎಂದು ಉತ್ತರ ನೀಡಿದರು.

 

 

ವಿಶೇಷವೇನೆಂದರೆ ಈ ಹಿಂದೆ ಅಕುಲ್ ಬಾಲಾಜಿ ನಡೆಸಿಕೊಡುತ್ತಿದ್ದ ಸೂಪರ್ ಟಾಕ್ ಟೈಮ್ ಶೋನಲ್ಲಿ ರಾಗಿಣಿ ಭಾಗವಹಿಸಿದ್ದಾಗಲೂ ರಕ್ಷಿತಾ ಅವರೇ ಜೊತೆಯಲ್ಲಿ ಹೋಗಿದ್ದರು ಮತ್ತು ಅಲ್ಲೂ ಕೂಡ ಇದೇ ಸೇಮ್ ಪ್ರಶ್ನೆಯನ್ನು ಕೇಳಲಾಗಿತ್ತು. ಆಗಲೂ ರಾಗಿಣಿ ಇದೇ ಉತ್ತರವನ್ನು ನೀಡಿದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top