fbpx
ಸಮಾಚಾರ

ಬೆತ್ತಲೆ ಸ್ಟಾರ್ ಶ್ರೀ ರೆಡ್ಡಿಯನ್ನು ಅಶೋಕ ಚಕ್ರವರ್ತಿಗೆ ಹೋಲಿಸಿದ ರಾಮ್ ಗೋಪಾಲ್ ವರ್ಮಾ!

ಅದೇನೇ ಸಾಮಾಜಿಕ ಪಲ್ಲಟಗಳು ಸಂಭವಿಸಿದರೂ ಅದಕ್ಕೆ ಸಡನ್ನಾಗಿ ಫೇಸ್ ಬುಕ್ ಅಥವಾ ಟ್ವಿಟರ್ ಮೂಲಕ ವಿಭಿನ್ನ ಪ್ರತಿಕ್ರಿಯೆ ನೀಡುವುದನ್ನು ಮೈಗೂಡಿಸಿಕೊಂಡು ಬಂದಿರುವವರು ಬಾಲಿವುಡ್ಡಿನ ಪ್ರತಿಭಾವಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ಆದರೆ ಇತ್ತೀಚೆಗ್ಯಾಕೋ ವರ್ಮಾ ಅವರಿವರ ಮೇಲೆ ಟೀಕಾಸ್ತ್ರ ಪ್ರಯೋಗ ಮಾಡುತ್ತಾ, ವಿನಾಃ ಕಾರಣ ವಿವಾದದ ಕೇಂದ್ರ ಬಿಂದುವಾಗುತ್ತಾ ಸುದ್ದಿ ಮಾಡಿದ್ದೇ ಹೆಚ್ಚು. ಈಗ ನಟಿ ಶ್ರೀರೆಡ್ಡಿಯನ್ನು ಅಶೋಕ ಸಾಮ್ರಾಟನಿಗೆ ಹೋಲಿಕೆ ಮಾಡಿದ್ದಾರೆ.

 

 

ಕೆಲವು ದಿನಗಳ ಹಿಂದೆಯಷ್ಟೇ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಅವರಣದಲ್ಲಿರುವ ಚಲನಚಿತ್ರ ಕಲಾವಿದರ ಸಂಘದ ಮುಂದೆ ಶ್ರೀ ರೆಡ್ಡಿ ಕಾಸ್ಟ್ ಕೌಚಿಂಗ್ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಳು. ಆದರೆ ಯಾರೊಬ್ಬರೂ ಆಕೆಯ ಧರಣಿಗೆ ಸ್ಪಂದಿಸಲೇ ಇಲ್ಲ. ಇದರಿಂದಾಗಿ ಶ್ರೀ ರೆಡ್ಡಿ ರೊಚ್ಚಿಗೆದ್ದಿದ್ದ ಶ್ರೇರೆಡ್ಡಿ ಓಪನ್ ಪ್ಲೇಸಿನಲ್ಲಿಯೇ ತಾನು ಧರಿಸಿದ್ದ ಟಾಪ್ ಕಿತ್ತೆಸೆದು ತೆರೆದೆದೆಯಲ್ಲಿಯೇ ಧರಣಿ ಆರಂಭಿಸಿ ಕಾಮುಖರ ವಿರುದ್ಧ ತನ್ನ ಹೋರಾಟಕ್ಕೆ ಯಾರೂ ಬೆಂಬಲ ಸೂಚಿಸುತ್ತಿಲ್ಲ. ಆದ್ದರಿಂದಲೇ ಹೀಗೆ ನಡುರಸ್ತೆಯಲ್ಲಿ ಬೆತ್ತಲಾಗಿ ಕುಳಿತಿರೋದಾಗಿ ಶ್ರೀ ಹೇಳಿಕೊಂಡಿದ್ದಳು.

ಇಷ್ಟೇ ಅಲ್ಲದೆ ರಾಣಾ ದಗ್ಗುಬಾಟಿ ತಮ್ಮ ಅಭಿರಾಮ್ ಎಂಬಾತನೊಂದಿಗಿನ ಲಿಪ್ ಟು ಲಿಪ್ ಕಿಸ್ ಮಾಡುತ್ತಿರುವ ಖಾಸಗಿ ಫೋಟೋಗಳನ್ನು ಶ್ರೀ ರೆಡ್ಡಿ ಬಹಿರಂಗಪಡಿಸಿದ್ದರು. ಅನೇಕ ಕಾಮುಕರ ಬಗ್ಗೆಯೂ ಈಕೆ ಬಹಿರಂಗವಾಗಿಯೇ ಮಾತನಾಡಿದ್ದಳು. ತೆಲುಗು ಚಿತ್ರರಂಗದಲ್ಲಿನ ಕಾಸ್ಟ್ ಕೌಚಿಂಗ್ ಕಾಯಿಲೆಯ ವಿರುದ್ಧ ಕಾಲೂರಿ ನಿಂತು ಸಮರ ಸಾರುವ ಸೂಚನೆ ರವಾನಿಸಿದ್ದಾರೆ. ಇದಾದೇಟಿಗೆ ತೆಲುಗಿನಲ್ಲಿ ಸಭ್ಯತೆಯ ಮುಖವಾಡ ತೊಟ್ಟ ಅನೇಕ ನಟರು ನಿರ್ಮಾಪಕರು ಯಾವುದೇ ಕ್ಷಣದಲ್ಲಾದರೂ ತಮ್ಮ ವಿರುದ್ಧ ಬಾಂಬು ಸಿಡಿದು ಬೆತ್ತಲಾಗುವ ಭಯದಲ್ಲಿದ್ದಾರೆ.

 

 

ಈ ಹಿನ್ನಲೆಯಲ್ಲಿ ಈಕೆಯ ನಡೆಯನ್ನು ಮೆಚ್ಚಿಕೊಂಡು ಟ್ವೀಟ್ ಮಾಡಿರುವ ವರ್ಮಾ ಈಕೆಯನ್ನು ಅಶೋಕ ಚಕ್ರವರ್ತಿಗೆ ಹೋಲಿಸಿದ್ದಾರೆ.”ನೂರು ವರ್ಷಗಳ ಹಿಂದೆ ಸಿನಿಮಾ ಆರಂಭವಾದಗನಿಂದಲೂ ‘ಕಾಸ್ಟಿಂಗ್ ಕೌಚ್’ ಇದೆ. ಈ ನೂರು ವರ್ಷಗಳ ಇತಿಹಾಸದಲ್ಲಿ ಈ ಕಾಸ್ಟಿಂಗ್ ಕೌಚ್ ವಿರುದ್ಧ ಯಾರೊಬ್ಬರು ಕೂಡ ವೈಯಕ್ತಿಕವಾಗಿ ಆರೋಪ ಮಾಡಿ ಇಷ್ಟರ ಮಟ್ಟಿಗೆ ಗಮನ ಸೆಳೆದಿಲ್ಲ. ಅದಕ್ಕಾಗಿ ಆಕೆಗೆ ನನ್ನ ಸಲ್ಯೂಟ್”

 

 

. ಶ್ರೀರೆಡ್ಡಿ ಈ ಮುಂಚೆ ಸೋಷಿಯಲ್ ಮೀಡಿಯಾಗಳಲ್ಲಿ ಬಳಸಿರುವ ಭಾಷೆಯನ್ನು ಗುರುತಿಸಿ ಕೆಲವರು ನಟಿ ಶ್ರೀರೆಡ್ಡಿ ಕೇವಲ ತಮ್ಮ ಸ್ವಾರ್ಥಕ್ಕಾಗಿ ಈ ರೀತಿ ಚೀಪ್ ಪಬ್ಲಿಸಿಟಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿಕೆ ನೀಡುತ್ತಿರುವವರ ಕುರಿತು ವರ್ಮಾ ಭಾರತದ ಶ್ರೇಷ್ಠ ಚಕ್ರವರ್ತಿ ಅಶೋಕನನ್ನ ನಿದರ್ಶನವಾಗಿ ಕೊಡುವ ಮೂಲಕ ಶ್ರೀರೆಡ್ಡಿಯನ್ನು ಅಶೋಕನಿಗೆ ಹೋಲಿಸಿದ್ದಾರೆ.

 

 

“ಅಶೋಕ ಚಕ್ರವರ್ತಿ ಕೂಡ ತಮ್ಮ ಆರಂಭದ ದಿನಗಳಲ್ಲಿ ಸಾವಿರಾರು ಜನರನ್ನು ಭಯಂಕರವಾಗಿ ಕೊಂದಿದ್ದರು ಆದರೆ ಬಳಿಕ ತಮ್ಮ ಮನಪರಿವರ್ತನೆಯಿಂದ ದೇಶಕ್ಕೆ ಹಾಗು ಶೋಷಿತರಿಗೆ ಅದ್ಬುತವಾದ ಕೊಡುಗೆಗಳನ್ನು ನೀಡಿದ್ದಾನೆ. ಈ ದೃಷ್ಟಿಯಲ್ಲಿ ನಟಿ ಶ್ರೀರೆಡ್ಡಿಯವರ ನಡೆ ಕೂಡ ಅದೇ ರೀತಿಯದ್ದು. ಅಶೋಕ ಚಕ್ರವರ್ತಿಯಷ್ಟೇ ಶ್ರೀ ರೆಡ್ಡಿ ಕೂಡ ಗ್ರೇಟ್ “ಎಂದು ಟ್ವೀಟ್ ಮಾಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top