ಐಪಿಎಲ್

ಪ್ರಕೃತಿ ದೇವರ ಮೊರೆ ಹೋದ ಆರ್ಸಿಬಿ ಅಭಿಮಾನಿಗಳು!

ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ ಈಗಾಗಲೇ ಶುರುವಾಗಿದ್ದು ಇಡೀ ದೇಶಾದ್ಯಂತ ಈಗ ಎಲ್ಲೆಡೆ ಕ್ರಿಕೆಟ್ ಜ್ವರ ಸಾಂಕ್ರಾಮಿಕ ಕಾಯಿಲೆಯಂತೆ ಎಲ್ಲರಿಗೂ ಅಂಟಿಕೊಂಡಿದೆ. ಇದರ ನಡುವೆ ನಮ್ಮ ಆರ್ಸಿಬಿ ತಂಡದ ಅಭಿಮಾನಿಗಳ ಅಭಿಮಾನ ಎಲ್ಲರ ಗಮನ ಸೆಳೆಯುತ್ತಿದ್ದು ನಿಜಕ್ಕೂ ಮೆಚ್ಚುವಂತದ್ದು.ಟೂರ್ನಿಯ ಆರಂಭಕ್ಕೂ ಮೂರ್ನಾಲ್ಕು ತಿಂಗಳ ಮುನ್ನವೇ “ಈ ಸಲ ಕಪ್ ನಮ್ದೇ” ಎಂಬ ಸ್ಲೋಗನ್ ನಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಆರ್ಸಿಬಿ ಅಭಿಮಾನಿಗಳು ನೆನ್ನೆಯ ಪಂದ್ಯವನ್ನು ಸೋತಿದ್ದರೂ ವಿಶ್ವಾಸವನ್ನು ಕಳೆದುಕೊಳ್ಳದೆ ಮುಂದಿನ ಪಂದ್ಯಗಳಲ್ಲಿ ಬೆಂಗಳೂರು ತಂಡ ಕಮ್ ಬ್ಯಾಕ್ ಮಾಡಲಿದೆ ಎನ್ನುವ ಭರವಸೆಯನ್ನು ಅಭಿಮಾನಿಗಳು ಇಟ್ಟುಕೊಂಡಿದ್ದಾರೆ.

 

 

ಐಪಿಎಲ್ ಪ್ರಾರಂಭಗೊಂಡು ಹತ್ತು ವರ್ಷಗಳೇ ಕಳೆದಿದ್ದರೂ ಇನ್ನು ಒಂದು ಭಾರಿಯೂ ಕೂಡ ಬೆಂಗಳೂರು ತಂಡ ಕಿರೀಟವನ್ನು ಮುಡಿಗೇರಿಸಿಕೊಂಡಿಲ್ಲ ಹಾಗಾಗಿ ಈ ಭಾರಿ ಕಪ್ ಗೆಲ್ಲಬೇಕು ಎಂದು ಪಣತೊಟ್ಟಿದೆ. ಇದಕ್ಕೆ ಬೆಂಬಲವಂತೆ ಅಭಿಮಾನಿಗಳಂತೂ ಡಬಲ್ ಉತ್ಸಾಹದಲ್ಲಿ ತಮ್ಮ ನೆಚ್ಚಿನ ತಂಡಕ್ಕೆ ಈಗಿನಿಂದಲೇ ಬೆಂಬಲ ಸೂಚಿಸುತ್ತಿದ್ದಾರೆ ಇದರಂತೆ ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿನ ಯಾವುದೇ ಪೋಸ್ಟ್ ಗೂ ‘ಈ ಸಲ ಕಪ್ ನಮ್ದೆ’ ಎಂಬ ಹ್ಯಾಶ್‌ಟ್ಯಾಗ್ ಅನ್ನು ಕಾಮೆಂಟ್ ಮಾಡುತ್ತಿದ್ದಾರೆ. ನೆನ್ನೆಯ ಮ್ಯಾಚ್ ಸೋತಿದ್ದರೂ ‘ಈ ಸಲ ಕಪ್ ನಮ್ದೇ’ ಸ್ಲೋಗನ್ ನ ಹವಾ ಮಾತ್ರ ಕಮ್ಮಿಯಾಗಿಲ್ಲ.

 

 

ಟೂರ್ನಿಯ ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ತಂಡದ ವಿರುದ್ಧ ಆರ್ಸಿಬಿ ಸೋಲುಕಂಡಾಗ ಮೊದಲ ಪಂದ್ಯವನ್ನು ದೇವರಿಗೆ ಸಮರ್ಪಿಸಿದ್ದೇವೆ ಎಂದು ತಮಗೆ ತಾವೇ ಸಮಾಧಾನ ಪಟ್ಟುಕೊಂಡಿದ್ದರು. ನಂತರ ಎರಡನೇ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗೆಲುವು ಕಂಡಾಗ ಖುಷಿ ಪಟ್ಟಿದ್ದ ಅಭಿಮಾನಿಗಳು ಈಗ ನೆನ್ನೆಯ ಪಂದ್ಯದಲ್ಲಿ ರಾಜಸ್ತಾನ್ ವಿರುದ್ಧಆರ್ಸಿಬಿ ಸೋಲು ಕಂಡಾಗ ಪ್ರಕೃತಿ ದೇವರ ಮೊರೆ ಹೋಗಿದ್ದಾರೆ.,ಸಾಮಾನ್ಯವಾಗಿ ಯಾವುದೇ ತಂಡದ ಅಭಿಮಾನಿಗಳು ತಮ್ಮ ತಂಡ ಸೋತಾಗ ಬೇಸರ ಪಟ್ಟುಕೊಳ್ಳುತ್ತಾರೆ ಆದ್ರೆ ಆರ್ಸಿಬಿ ಅಭಿಮಾನಿಗಳು ಮಾತ್ರ ಇದಕ್ಕೆ ವಿಭಿನ್ನ. ಏಕೆಂದರೆ ತಮ್ಮ ನೆಚ್ಚಿನ ತಂಡ ಸೋತಾಗಲೂ ಆರ್ಸಿಬಿ ಅಭಿಮಾನಿಗಳು ಹತಾಶರಾಗುವುದಿಲ್ಲ.

 

 

ನೆನ್ನೆಯ ಪಂದ್ಯದಲ್ಲಿ ಪರಿಸರ ಕಾಳಜಿ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹಸಿರು ಜರ್ಸಿ ತೊಟ್ಟು ಆಟಕ್ಕಿಳಿದಿದ್ದ ಆರ್‌ಸಿಬಿ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಸೋಲನ್ನು ಒಪ್ಪಿಕೊಂಡಿತು. ನೆನ್ನೆ ಮ್ಯಾಚ್ ಪರಿಸರ ಕಾಳಜಿಯ ಸಲುವಾಗಿ ಹಸಿರು ಜರ್ಸಿ ತೊಟ್ಟು ಆಡಿದ್ದರಿಂದ ಈ ಮ್ಯಾಚ್ ಪ್ರಕೃತಿ ದೇವತೆಗೆ ಅರ್ಪಣೆ ಎಂದು ತಮ್ಮನ್ನು ತಾವು ಸಂತೈಸಿಕೊಳ್ಳುತ್ತಿದ್ದಾರೆ. ಬಹುಷಃ ಅಭಿಮಾನದ ವಿಷ್ಯದಲ್ಲಿ ಆರ್ಸಿಬಿ ಅಭಿಮಾನಿಗಳನ್ನು ಮೀರಿಸುವವರು ಮತ್ಯಾರು ಇಲ್ಲ ಅಂತ ಕಾಣುತ್ತೆ. ಸದ್ಯ ಆರ್ಸಿಬಿ ಅಭಿಮಾನಿಗಳು ಈ ಮ್ಯಾಚ್ ದೇವರಿಗೆ ಅರ್ಪಿಸಿದ್ದೇವೆ ಎನ್ನುವ ಪೋಸ್ಟ್ ಗಳು ಸೋಷಿಯಲ್ ಮೀಡಿಯಾಗಲಿ ಸಕತ್ ವೈರಲ್ ಆಗುತ್ತಿವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top