ಸಮಾಚಾರ

ಜಾತಕದಲ್ಲಿ ಸರ್ಪದೋಷ ಇದ್ರೆ ಸಂತಾನ, ವಿವಾಹ ,ಕೆಲಸ ಆಗದೆ ಇರೋದು ಹೀಗೆ ಸಮಸ್ಯೆಗಳೇ ಬರ್ತವೆ ಇದಕ್ಕೆ ಹೇಗೆ ಪರಿಹಾರ ಮಾಡ್ಕೋಬೇಕು ತಿಳ್ಕೊಳ್ಳಿ

ಸರ್ಪ ದೋಷ ಎಂದರೆ ಏನು ? ಇದಕ್ಕೆ ಪರಿಹಾರವನ್ನು ಯಾವ ರೀತಿಯಾಗಿ ಮಾಡಿಕೊಳ್ಳಬೇಕು ?

ಜಾತಕದಲ್ಲಿ ಸರ್ಪ ದೋಷ ಇದ್ದರೆ ವಿವಾಹದಲ್ಲಿ ಅಡೆತಡೆ ಉಂಟಾಗಬಹುದು , ಕೆಲಸ ಕಾರ್ಯಗಳಲ್ಲಿ ಅಪಜಯ , ಅಪಕೀರ್ತಿ, ಅಪಯಶಸ್ಸು, ಈ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಜಾತಕದಲ್ಲಿ ಸರ್ಪ ದೋಷ ಇದ್ದಂತಹ ಸಂದರ್ಭದಲ್ಲಿ ಯಾವೆಲ್ಲಾ ನಿಯಮ ? ನಿಷ್ಠೆಯಿಂದ ಸರ್ಪದೋಷವನ್ನು ನಿವಾರಣೆ ಮಾಡಿಕೊಳ್ಳಬೇಕು. ಸಾಮೂಹಿಕವಾಗಿ ಸರ್ಪದೋಷವನ್ನು ನಿವಾರಣೆ ಮಾಡಿಕೊಳ್ಳುವುದು ಒಳ್ಳೆಯದೇ ? ಸರ್ಪ ದೋಷಗಳಲ್ಲಿ ಎಷ್ಟು ವಿಧಗಳಿವೆ ? ಅವು ಯಾವುವು ? ಅವುಗಳನ್ನು ನಿವಾರಣೆ ಮಾಡಿಕೊಳ್ಳುವುದು ಹೇಗೆ ? ಸಾಮೂಹಿಕವಾಗಿ ಸರ್ಪ ದೋಷ ನಿವಾರಣೆ ಮಾಡಿಕೊಂಡರೆ ಯಾವ ಮಟ್ಟದ ಫಲವನ್ನು ಅವು ನೀಡುತ್ತವೆ. ಅಥವಾ ಪ್ರತ್ಯೇಕವಾಗಿ ದೋಷವನ್ನು ನಿವಾರಣೆ ಮಾಡಿಸಿದರೆ ಒಳ್ಳೆಯದೇ ? ಇವೆಲ್ಲ ಪ್ರಶ್ನೆಗಳಿಗೂ ಇಂದು ನಾವು ಉತ್ತರವನ್ನು ತಿಳಿದುಕೊಳ್ಳೋಣ.

 

 

ಸರ್ಪ ದೋಷ ಎಂದರೇನು ?
ರಾಹು ಮತ್ತು ಕೇತು ಸರ್ಪದ ತಲೆ ಮತ್ತು ಬಾಲಗಳಾಗಿದ್ದು, ಒಂದೇ ದೇಹದ ಎರಡು ಅಂಗಗಳಾಗಿದ್ದು, ಇವುಗಳ ಬಂಧನವನ್ನು ಕಾಳಸರ್ಪ ದೋಷ ಎಂದು ಉಲ್ಲೇಖಿಸಲಾಗಿದೆ .

 

 

 

ಕಾಳಸರ್ಪ ದೋಷದಲ್ಲಿ ಎಷ್ಟು ವಿಧದ ಯೋಗಗಳು ಅಥವಾ ದೋಷಗಳಿವೆ ?

ಕಾಳ ಸರ್ಪ ದೋಷಗಳಲ್ಲಿ ಹನ್ನೆರಡು ವಿಧದ ಯೋಗಗಳು ಅಥವಾ ದೋಷಗಳು ಇವೆ. ಅವುಗಳಾದ ಅನಂತ ಕಾಳ ಸರ್ಪ ದೋಷ, ಗುಳಿಕ ಕಾಲ ಸರ್ಪ ದೋಷ ,ವಾಸುಕಿ ಕಾಳಸರ್ಪ ದೋಷ , ಪದ್ಮ ಕಾಳಸರ್ಪ ದೋಷ ,ಮಹಾಪದ್ಮ ಕಾಳಸರ್ಪ ದೋಷ , ತಕ್ಷಕ ಕಾಳಸರ್ಪ ದೋಷ , ಕಾರ್ಕೋಟಕ ಕಾಳ ಸರ್ಪ ದೋಷ, ಶೇಷಾಹ ಕಾಳ ಸರ್ಪ ದೋಷ , ಶಂಖಪಾಲ ಕಾಳಸರ್ಪ ದೋಷ, ಹೀಗೆ ಒಟ್ಟಾಗಿ ಹನ್ನೆರಡು ವಿಧವಾದ ಕಾಳಸರ್ಪ ದೋಷಗಳು ಇವೆ.
ಈ ಹನ್ನೆರಡು ವಿಧವಾದ ಕಾಲ ಸರ್ಪ ದೋಷವನ್ನು ಇತ್ತೀಚೆಗೆ ಬಹಳಷ್ಟು ದೇವಾಲಯಗಳಲ್ಲಿ ಸಾಮೂಹಿಕವಾಗಿ ಸರ್ಪ ದೋಷ ಸಂಸ್ಕಾರ ಪೂಜೆಯನ್ನು ಮಾಡುತ್ತಿದ್ದಾರೆ . ಸರ್ಪ ಸಂಸ್ಕಾರವನ್ನು ವ್ಯವಸ್ಥಿತವಾಗಿ, ನಿಯಮಬದ್ಧವಾಗಿ ಮಾಡಬೇಕು ಎಂದು ನಾಗ ಪುರಾಣ ಹೇಳುತ್ತದೆ. ಬಹಳಷ್ಟು ಪ್ರಸಿದ್ಧ ನಾಗ ಕ್ಷೇತ್ರಗಳಲ್ಲಿ ಸರ್ಪ ಸಂಸ್ಕಾರವನ್ನು ಸಾಮೂಹಿಕವಾಗಿ ಮಾಡುತ್ತಿದ್ದಾರೆ.

 

 

ಸರ್ಪ ಸಂಸ್ಕಾರವನ್ನು ವ್ಯವಸ್ಥಿತವಾಗಿ, ನಿಯಮ ಬದ್ಧವಾಗಿ ಆಚರಣೆ ಮಾಡಬೇಕು ಎಂದು “ನಾಗ ಪುರಾಣ” ಹೇಳುತ್ತದೆ. ಒಂದು ಗ್ರಾಮದಲ್ಲಿ ಒಂದು ಸರ್ಪ ಸಂಸ್ಕಾರ ಎನ್ನುವುದನ್ನು ಮಾಡುವಂತಹ ಸಮಯದಲ್ಲಿ ಇನ್ನೊಂದು ಸರ್ಪ ಸಂಸ್ಕಾರವನ್ನು ಮಾಡಬಾರದು ಎನ್ನುವುದು ಒಂದು ಲೆಕ್ಕಾಚಾರದಲ್ಲಿ ಹೇಳುತ್ತಾರೆ.

 

ಆದರೆ ಇವತ್ತು ನಾವು ಏನು ? ಮಾಡುತ್ತಿದ್ದೇವೆ ಎಂದರೆ ಸಾಮೂಹಿಕವಾಗಿ ಸರ್ಪ ಸಂಸ್ಕಾರವನ್ನು ಹೋಗಿ ಮಾಡಿಸುತ್ತಿದ್ದೇವೆ. ಆಶ್ಲೇಷ ಬಲಿ ಪೂಜೆ ಮಾಡಿಸುವುದು ಅಥವಾ ನಾರಾಯಣ ಬಲಿಗೆ ಹೋಗುವುದು ಮತ್ತು ಅಲ್ಲಿಂದ ಬಂದ ನಂತರ ಜನರು ಸಾಮಾನ್ಯವಾಗಿ ಹೇಳುತ್ತಿರುತ್ತಾರೆ ನಾವು ಅಲ್ಲಿಗೆ ಹೋಗಿ ಮೂರು ದಿನಗಳ ಕಾಲ ಪೂಜೆ ಮಾಡಿಸಿದ್ದೇವೆ ಆದರೂ ಸಹ ನಮಗೇನೂ ಒಳ್ಳೆಯದು ಆಗಿಲ್ಲ ಎಂದು ಹೇಳುತ್ತಾರೆ.ಈ ಸರ್ಪ ದೋಷ ಇದ್ದರೆ ವಿವಾಹ ತಡವಾಗುತ್ತದೆ, ಹೆಣ್ಣು ಮಕ್ಕಳ ದಾಂಪತ್ಯ ಜೀವನದಲ್ಲಿ ತೊಂದರೆ ಉಂಟಾಗುತ್ತದೆ. ಸಂತಾನ ಭಾಗ್ಯದಲ್ಲಿ ತೊಂದರೆ ಬರುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತವೆ.

ಸರ್ಪ ದೋಷ ಸಂಸ್ಕಾರ ಪೂಜೆಯನ್ನು ಎಲ್ಲಿ ಮಾಡಿಸಬೇಕು ?
ಸಾಮಾನ್ಯವಾಗಿ ನಾಗ ದೇವತೆ ಇರುವ ದೇವಾಲಯಗಳಲ್ಲಿ ಸಾಮೂಹಿಕವಾಗಿ ಸರ್ಪ ಸಂಸ್ಕಾರ ಮಾಡಿಸುತ್ತಾರೆ.ಈ ದೇವಾಲಯಗಳನ್ನು ಹೊರತು ಪಡಿಸಿ, ಇಂತಹ ಸರ್ಪ ಸಂಸ್ಕಾರವನ್ನು ತಾಳೆಗರಿ ವನದಲ್ಲಿ ಅಂದರೆ ಕೇದಿಗೆ ಗರಿಯನ್ನು ಬಿಡುವ , ತಾಳೆ ಹೂವು ಬಿಡುವ ವನದಲ್ಲಿ , ತಾಳೆಗರಿ ವನದಲ್ಲಿ ನಿರ್ಜನ ಪ್ರದೇಶದಲ್ಲಿ ಮೂರು ದಿನಗಳ ಕಾಲ ಶ್ರದ್ಧೆ, ಭಕ್ತಿ ಮತ್ತು ಏಕಾಗ್ರತೆಯಿಂದ ನಂಬಿಕೆ ಇಟ್ಟು ಸರ್ಪ ಸಂಸ್ಕಾರವನ್ನು ಆಚರಣೆ ಮಾಡಿದಾಗ ಸಂಪೂರ್ಣ ಫಲವು ಪ್ರಾಪ್ತಿಯಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top