ಸಿನಿಮಾ

ಶ್ರೀದೇವಿಗೆ ಉತ್ತಮ ನಟಿ ಪ್ರಶಸ್ತಿ ಲಭಿಸಿದ್ದಕ್ಕೆ ನಿರ್ದೇಶಕ ಶೇಖರ್ ಕಪೂರ್ ಬೇಸರ ವ್ಯಕ್ತಪಡಿಸಿದ್ದು ಯಾಕೆ ಗೊತ್ತೇ

ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅಭಿನಯ ತಾರೆ ವಿನೋದ್ ಖನ್ನಾ ಅವರಿಗೆ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿಯನ್ನು, ಅತ್ಯುತ್ತಮ ನಟನೆ ಮಾಡಿದ್ದಕ್ಕಾಗಿ ನಟಿ ಶ್ರೀದೇವಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಗಿದೆ. ಆದರೆ ಇದೀಗ ನಿರ್ದೇಶಕ ಹಾಗು ನ್ಯಾಷನಲ್ ಅವಾರ್ಡ್ ಜ್ಯೂರಿ ಹೆಡ್ ಶೇಖರ್ ಕಪೂರ್‍ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

 

‘ನಾವೆಲ್ಲರೂ ನಟಿ ಶ್ರೀದೇವಿ ಅವರನ್ನು ಭಾವನಾತ್ಮಕವಾಗಿ ಹಚ್ಚಿಕೊಂಡಿದ್ದೇವೆ. ಶ್ರೀದೇವಿ ಸಾವನಪ್ಪಿದ ಕಾರಣ ಅವರಿಗೆ ಪ್ರಶಸ್ತಿ ನೀಡಿರುವುದು ಸೂಕ್ತ ನಿರ್ಧಾರವಲ್ಲ. ಈ ನಿರ್ಧಾರದಿಂದ ಇತರ ನಟಿಯರಿಗೆ ಮೋಸವಾಗಿದೆ. ಬೇರೆಯವರು ಸಹ 10-12 ವರ್ಷ ಗಳಿಂದಲೂ ಬಾಲಿವುಡ್‍ನಲ್ಲಿ ಶ್ರಮಿಸಿದ್ದು, ವೃತ್ತಿ ಜೀವನವನ್ನು ಹೊಂದಿದ್ದಾರೆ. ಪ್ರತಿ ಬೆಳಗ್ಗೆ ನಾನು ಉತ್ತಮ ನಟಿಯ ಆಯ್ಕೆಯ ಕಮೀಟಿಗೆ ಬಂದಾಗ ಎಲ್ಲ ಜ್ಯೂರಿಗಳಿಗೆ ಮತ ಚಲಾಯಿಸಲು ಕೇಳುತ್ತಿದೆ. ಆದರೆ ಪದೇ ಪದೇ ಶ್ರೀದೇವಿಗೆ ಹೆಚ್ಚಿನ ಮತಗಳು ಬರುತ್ತಿದ್ದವು. ಆದ್ದರಿಂದ ಆಕೆಗೆ ಕೊಡಬಾರದೆಂದು ಹೋರಾಡಿದವನು ನಾನು’ ಎಂದು ಶೇಖರ್ ಕಪೂರ್ ಅವರು ತಿಳಿಸಿದ್ದಾರೆ.

 

 

ಚಿತ್ರನಟಿ ಶ್ರೀ ದೇವಿ ಅವರ ‘ಮಾಮ್’ ಚಲನಚಿತ್ರ ನಟನೆಗೆ ಈ ಪ್ರಶಸ್ತಿ ನೀಡಲಾಗಿದೆ. ವಿಶೇಷ ಅಂದರೆ ಶ್ರೀದೇವಿ ಅವರು ಪೂರ್ಣ ಪ್ರಮಾಣದಲ್ಲಿ ನಟಿಸಿದ್ದ ಕೊನೆಯ ಸಿನಿಮಾ ಇದಾಗಿದೆ. ಜೊತೆಗೆ ಇದು ಶ್ರೀ ದೇವಿ ಅವರ 300ನೇ ಚಿತ್ರವಾಗಿದೆ. ‘ಇಂಗ್ಲೀಷ್ ವಿಂಗ್ಲೀಷ್’ ಚಿತ್ರದ ಬಳಿಕ ನಾಲ್ಕು ವರ್ಷಗಳ ನಂತರ ಶ್ರೀದೇವಿ ‘ಮಾಮ್’ ಸಿನಿಮಾ ಮಾಡಿದ್ದರು. ನಟಿ ಶ್ರೀದೇವಿ ಅವರು 50 ವರ್ಷ ಜೀವನದುದ್ದಕ್ಕೂ ಸಿನಿಮಾ ಕ್ಷೇತ್ರದಲ್ಲಿ ಅಭಿನಯ ಮಾಡಿದ್ದರು, ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ 300ಕ್ಕೂ ಹೆಚ್ಚು ಸಿನಿಮಾ ದಲ್ಲಿ ನಟನೆ ಮಾಡಿದ್ದಾರೆ. ‘ಮಾಮ್‌’ನಲ್ಲಿ ತನ್ನ ಮಗಳಿಗೆ ನ್ಯಾಯಕ್ಕಾಗಿ ಕೋಪಗೊಂಡ ತಾಯಿ ಪಾತ್ರದಲ್ಲಿ ಅತ್ಯುತ್ತಮ ಅಭಿನಯ ತೋರಿ ಗುರುತಿಸಿಕೊಂಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top