ಮನೋರಂಜನೆ

ಸಿನಿಮಾರಂಗಕ್ಕೆ ‘ಸರಿಗಮಪ’ ಖ್ಯಾತಿಯ ಸುಹಾನ ಸೈಯದ್ ಪ್ರವೇಶ!

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಝೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಜನಪ್ರಿಯ ಕಾರ್ಯಕ್ರಮವಾದ ಸರಿಗಮಪ ಸೀಸನ್ 13ರ ಸ್ಪರ್ಧಿಯಾಗಿದ್ದ ಸುಹಾನಾ ಸೈಯದ್ ಸಿನಿಮಾದಲ್ಲಿ ಹಾಡುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಈಗಾಗಲೇ ಸರಿಗಮಪ ಕಾರ್ಯಕ್ರಮದದ ಅನೇಕ ಸ್ಪರ್ಧಿಗಳಿಗೆ ಸಿನಿಮಾದಲ್ಲಿ ಹಾಡುವ ಚಾನ್ಸ್ ಸಿಕ್ಕಿದ್ದು ಈಗ ಆ ಸಾಲಿಗೆ ಸುಹಾನಾ ಕೂಡ ಸೇರಿಕೊಳ್ಳುತ್ತಿದ್ದಾರೆ.

 

 

‘ಸ್ಟೇಟ್ ಮೆಂಟ್ 8/11’ ಚಿತ್ರದ ‘ನರನಾಡಿ ನುಡಿಯುತ್ತೆ ಹಿಂದುಸ್ತಾನ್’ ಎಂಬ ಹಾಡನ್ನು ಸುಹಾನಾ ಹಾಡಿದ್ದು ಇದೊಂದು ದೇಶಭಕ್ತಿಯ ಕಾನ್ಸೆಪ್ಟಿನ ಹಾಡಾಗಿದೆ.. ಸರಿಗಮಪ ಕಾರ್ಯಕ್ರಮದಲ್ಲಿ ಸುಹಾನಾ ಅವರ ಗಾಯನದ ಶೈಲಿಯನ್ನು ಕಂಡು ಮೆಚ್ಚಿಕೊಂಡಿದ್ದ ಚಿತ್ರತಂಡ ಇದೀಗ ಅವರ ಚಿತ್ರದ ಪ್ರಮುಖ ಅಂಶಗಲ್ಲಿ ಒಂದಾಗಿರುವ ಈ ಹಾಡನ್ನು ಹಾಡಿಸಿದೆ.

 

 

ಅಪ್ಪಿ ಪ್ರಸಾದ್ ಈ ಚಿತ್ರದ ಮಾಡುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸದ ವೈಖರಿಯ ಮತ್ತು ನೋಟು ಬ್ಯಾನ್ ಕುರಿತಾದ ಸಿನಿಮಾ ಇದಾಗಿದೆ. ಹೇಮಂತ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗಿದ್ದು ನಿಧಾನವಾಗಿ ಚಿತ್ರಪ್ರೇಮಿಗಳ ಗಮನ ಸೆಳೆಯುತ್ತಿದೆ. ವೇಣು ಕೆ ಎಚ್ ಎಂಬವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top