ರಾಜಕೀಯ

ತಿಮ್ಮಾಪೂರಗೆ ‘ಕೈ’ ತಪ್ಪಿದ ಟಿಕೆಟ್, ಮುಧೋಳದಲ್ಲಿ ಮುಗಿಲು ಮುಟ್ಟಿದ ಬೆಂಬಲಿಗರ ಆಕ್ರೋಶ

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನಿನ್ನೆ ರಾತ್ರಿ ಅಳೆದು ತೂಗಿ ಕೊನೆಗೂ ಕಾಂಗ್ರೆಸ್ ಕೊನೆಗೂ ವಿಧಾನಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆ ಮಾಡಿದೆ. ನಿನ್ನೆ ಬಿಡುಗಡೆ ಆದ ಪಟ್ಟಿಯಲ್ಲಿ 224 ವಿಧಾನಸಭೆ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯಲ್ಲಿ 5 ಕ್ಷೇತ್ರಗಳನ್ನು ಬಿಟ್ಟು ಉಳಿದೆಲ್ಲಾ ಕಡೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೆಸರು ಬಿಡುಗಡೆ ಆಗಿದೆ.

 

 

ಇನ್ನು ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಪ್ರಭಲ ಟಿಕೆಟ್ ಆಕಾಂಕ್ಷಿ ಆಗಿದ್ದ ಆರ್.ಬಿ. ತಿಮ್ಮಾಪೂರ ಅವರಿಗೆ ಟಿಕೆಟ್ ಕೈ ತಪ್ಪಿದೆ. ಇಲ್ಲಿ ಸತೀಶ ಬಂಡಿವಡ್ಡರ್ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಆಗಿದೆ. ಸತೀಶ ಬಂಡಿವಡ್ಡರ್ ಕಳೆದ ಬಾರಿಯೂ ಕೂಡ ಟಿಕೆಟ್ ಆಕಾಂಕ್ಷಿ ಆಗಿದ್ದರು ಆಗ ಅವರಿಗೆ ಟಿಕೆಟ್ ಕೈ ತಪ್ಪಿದ್ದು ಈಗ ಟಿಕೆಟ್ ದೊರತಿದೆ. ಟಿಕೆಟ್ ಕೈ ತಪ್ಪಿರುವ ಕಾರಣ ಆರ್.ಬಿ. ತಿಮ್ಮಾಪೂರ ಬೆಂಬಲಿಗಳು ಇಂದು ಮುಧೋಳ ನಗರದಲ್ಲಿ ಟೈರ್ ಸುಟ್ಟು ಪ್ರತಿಭಟನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.  ತಿಮ್ಮಾಪೂರ್ ಅವರಿಗೆ ಟಿಕೆಟ್ ಕೊಡಲೇಬೇಕು ಎಂದು ಅಪಾರ ಬೆಂಬಲಿಗಳು ಆಗ್ರಹಿಸಿದರು.

 

 

ಪ್ರತಿಭಟನೆ ವೇಳೆ ಮುಧೋಳದಲ್ಲಿ ತಿಮ್ಮಾಪೂರರವರ ಬೆಂಬಲಿಗರು “ಹೈ ಕಮಾಂಡ್ ತಮ್ಮ ನಿರ್ಧಾರ ಬದಲಿಸಬೇಕು ಇಲ್ಲದಿದ್ದರೆ ಕಾಂಗ್ರೆಸ್, ಯುವ ಕಾಂಗ್ರೆಸ್ ಪಧಾಧಿಕಾರಿಗಳು, ತಾಲೂಕ ಪಂಚಾಯತ್, ನಗರಸಭೆ ಸದಸ್ಯರು ಸಾಮೂಹಿಕ ರಾಜೀನಾಮೆ ಕೊಡುತ್ತೇವೆ” ಎಂದು ಪ್ರತಿಭಟನಾ ನಿರತರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top