ದೇವರು

ಅಕ್ಷಯ ತೃತೀಯ ದಿನ ಚಿನ್ನ ಕೊಳ್ಳೊಕಿಂತ ಶಾಸ್ತ್ರದ ಪ್ರಕಾರ ಈ 5 ವಸ್ತುಗಳನ್ನ ದಾನ ಮಾಡಿ ಅದೃಷ್ಟ , ಐಶ್ವರ್ಯ ಪ್ರಾಪ್ತಿಯಾಗುತ್ತೆ

ಅಕ್ಷಯ ತೃತೀಯ ದಿನ ಚಿನ್ನ ಕೊಳ್ಳುವುದಕ್ಕಿಂತ ಹೆಚ್ಚಾಗಿ, ಯಾವ ಕೆಲಸ ಮಾಡಿದ್ರೆ ನಿಮಗೆ ಅದೃಷ್ಟ , ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ನಿಮಗೆ ಗೊತ್ತೇ ? ಹಾಗೂ ಯಾವ ದಾನ ಮಾಡಿದರೆ ಏನು ಫಲ ?

 

ಅಕ್ಷಯ ಅಂದ್ರೆ ಯಾವತ್ತಿಗೂ ಖಾಲಿ ಆಗದೆ ಇರೋದು. ಯಾವತ್ತಿಗೂ ನಾಶ ಆಗದೆ  ಇರುವುದು. ಭಾಗ್ಯ ವೃದ್ಧಿ ಆಗುವಂತದ್ದು. ಅಕ್ಷಯ ಪಾತ್ರೆಯಿಂದ ಬಂದಂತಹ ಪದವೇ  ಈ “ಅಕ್ಷಯ ತೃತೀಯ”.

 

 

ವಿಷ್ಣುವಿನ  ಅವತಾರವಾದ ಪರಶುರಾಮ ಹುಟ್ಟಿದ ದಿನ, ಗಂಗೆಯು ಶಿವನ ಮುಡಿಯಿಂದ ಭೂಮಿಗೆ ತಲುಪಿದ ದಿನ, ಕೃಷ್ಣನ ಸ್ನೆಹಿತ ಕುಚೇಲ  ಕೃಷ್ಣನಿಗೆ ಅವಲಕ್ಕಿ ಕೊಟ್ಟು ಕೃಷ್ಣನಿಂದ ಅದೃಷ್ಟ ಮತ್ತು ಐಶ್ವರ್ಯವನ್ನು ಪಡೆದು  ಕೊಂಡಂತಹ ದಿನ ಕೂಡಾ ಇದು. ಅಲ್ಲದೆ ಕುಬೇರನು  ಲಕ್ಷ್ಮೀ ದೇವಿಯ ಪೂಜೆ ಮಾಡಿ ಐಶ್ವರ್ಯವನ್ನು  ಪಡೆದುಕೊಂಡಂತಹ ದಿನ ಕೂಡ ಇದು.ಜೊತೆಗೆ ಅಕ್ಷಯ ಪಾತ್ರೆಯೂ ಹುಟ್ಟಿದ್ದು ಕೂಡ ಈ ದಿನ. ಅದಕ್ಕೆ ಇದನ್ನು ಅಕ್ಷಯ ತೃತೀಯ ಅಂತ ಕರೀತಾರೆ.

ಈ ದಿನ ಬರೀ ಚಿನ್ನ ತೆಗೆದು ಮನೆಯಲ್ಲಿ ಇಟ್ಟರೆ ನಿಮಗೆ  ಲಕ್ಷ್ಮೀ ಕೃಪೆ ಆಗುವುದಿಲ್ಲ. ಬದಲಿಗೆ ಯಾವುದಾದರೂ ಒಂದು ಒಳ್ಳೆಯ ಕೆಲಸ ಮಾಡಿದ್ರೆ ಶಾಶ್ವತವಾಗಿ ಅದರ ಪುಣ್ಯ ನಿಮಗೆ ಪ್ರಾಪ್ತಿಯಾಗುತ್ತದೆ.ಆದೇ ಈ ದಿನದ ವಿಶೇಷ . ಚಿನ್ನ ಮಾತ್ರ ಖರೀದಿಸಬೇಕು ಅಂತ ಯಾವ ಶಾಸ್ತ್ರದಲ್ಲಿಯೂ ಕೂಡ ಬರೆದಿಲ್ಲ.

ಈ ದಿನ ಯಾವುದಾದರೂ ಒಂದು ಒಳ್ಳೆಯ ಕೆಲಸ ಮಾಡಿ. ನಿಮಗಿಷ್ಟದ ಅನುಸಾರವಾಗಿ ನಿಮ್ಮ ಕೈಲಾದಷ್ಟು ದಾನ ಮಾಡಿ. ಆ ಪುಣ್ಯ ನಿಮಗೆ ಈ ಜನ್ಮ ಮಾತ್ರವಲ್ಲದೆ, ಮುಂದಿನ ಜನ್ಮದ ವರೆಗೂ ಪ್ರಾಪ್ತಿಯಾಗಲಿದೆ. ದುಡ್ಡು ಇಲ್ಲದಿದ್ದರೆ ಪರವಾಗಿಲ್ಲ , ಒಂದು ಲೋಟ  ನೀರಾದರೂ ದಾನ ಮಾಡ್ಬೇಕಂತೆ.

 

 

ದಾನ ಮಾಡುವುದೇ ಈ ಅಕ್ಷಯ ತೃತೀಯದ ಮಹತ್ವ .

ದುಡ್ಡು ಇಲ್ಲದಿದ್ದರೂ ದಯವಿಟ್ಟು ಸಾಲ ಮಾಡಿ ಚಿನ್ನ ಖರೀದಿಸಬೇಡಿ. ಈ ರೀತಿ ಮಾಡಿದ್ರೆ ದರಿದ್ರ ಬರುತ್ತದೆ. ಇದರ ಜೊತೆಗೆ ಕೆಲವು ವಸ್ತುಗಳನ್ನು ದಾನ ಮಾಡಿದರೆ ಅಷ್ಟ ಐಶ್ವರ್ಯ ನಿಮ್ಮದಾಗುತ್ತದೆ. ಅದು ಯಾವುದು ಅಂತ ತಿಳಿದುಕೊಳ್ಳೋಣ ಬನ್ನಿ

 

1.ಮಡಿಕೆ ದಾನ ಮಾಡ್ಬೇಕು.

 

 

ಮಣ್ಣಿನ ಮಡಿಕೆ ತುಂಬಾ ನೀರನ್ನು ಹಾಕಿ ಅದನ್ನು ಬಡವರಿಗೆ ದಾನ ಮಾಡಿದರೆ ಐಶ್ವರ್ಯ, ಅದೃಷ್ಟ ಪ್ರಾಪ್ತಿಯಾಗುವುದರ ಜೊತೆಗೆ ಪ್ರಾಣ ಭಯವೂ ಕೂಡ ಇರುವುದಿಲ್ಲ.

 

2.ವಸ್ತ್ರದಾನ.

 

 

ಬಡವರಿಗೆ ವಸ್ತ್ರದಾನ ಮಾಡಿದರೆ ಐಶ್ವರ್ಯ, ಆರೋಗ್ಯ ಪ್ರಾಪ್ತಿಯಾಗುತ್ತದೆ.

 

3.ಹಣ್ಣುಗಳು.

 

ಬಡವರಿಗೆ ಹಣ್ಣುಗಳನ್ನು ದಾನ ಮಾಡಿದರೆ ಐಶ್ವರ್ಯ ,ಆರೋಗ್ಯ ,ಪುಣ್ಯ ಜೊತೆಗೆ ಜೀವನದಲ್ಲಿ ಉನ್ನತ ಮಟ್ಟದ ಒಳಿತು ನಿಮ್ಮದಾಗಲಿದೆ.

 

4.ಅನ್ನದಾನ .

 

 

ಅನ್ನದಾನ ಮಾಡಿದರೆ ಐಶ್ವರ್ಯ, ಪುಣ್ಯದ ಜೊತೆಗೆ ನಿಮಗೆ ಯಾವ ಜನ್ಮದಲ್ಲೂ ಕೂಡ ಆನ್ನದ ಕೊರತೆ ಇರುವುದಿಲ್ಲ.

 

5.ಮಜ್ಜಿಗೆ .

 

 

ಮಣ್ಣಿನ ಮಡಿಕೆಯ  ಮಜ್ಜಿಗೆಯನ್ನು ನಾವು ದಾನ ಮಾಡಿದರೆ ವಿದ್ಯೆ ಲಭಿಸುತ್ತದೆ.

ಅಕ್ಷಯ ತೃತೀಯದ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ, ಮನೆಯಲ್ಲಿ ಪೂಜೆ ಮಾಡಿ , ಗೋವಿಗೆ ಪೂಜೆ ಮಾಡಿ, ಗೋವಿಗೆ ನೈವೇದ್ಯವಾಗಿ ಗೋಧಿ ,ಹೊಟ್ಟು, ಬೆಲ್ಲ, ಬಾಳೆ ಹಣ್ಣು ಕೊಟ್ಟರೆ ನಿಮಗೆ ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top