ಸಮಾಚಾರ

ಆಗ ತಾನೇ ಮೈ ನೆರೆದ ಹೆಣ್ಮಕ್ಳಳಿಗೆ ಗುಡಿಸಲು ವಸಗೆ ಹಾಕುತ್ತಾರೆ ಅದರ ಹಿಂದಿನ ವೈಜ್ಞಾನಿಕ ಕಾರಣ ಏನು ಅಂತ ಗೊತ್ತಾ

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಆಗ ತಾನೇ ಮೈ ನೆರೆದ ಹುಡುಗಿಗೆ ಗುಡಿಸಲು ವಸಗೆ ಹಾಕುವುದರ ಹಿಂದಿನ ವೈಜ್ಞಾನಿಕ ಕಾರಣಗಳು ..

ಹೆಣ್ಣುಮಕ್ಕಳು ಸುಮಾರು 11 -12 ವಯಸ್ಸಿನ ಹೊತ್ತಿಗೆ ಸಾಮಾನ್ಯವಾಗಿ ಮೈ ನೆರೆಯುತ್ತಾರೆ , ನಮ್ಮಲ್ಲಿ ಅನೇಕರಿಗೆ ಗೊತ್ತಿರುವ ಹಾಗೆ ಮೈ ನೆರೆಯುವುದು ಒಂದು ಸಹಜ ಕ್ರಿಯೆ .
ಕೆಲವು ಹೆಣ್ಣು ಮಕ್ಕಳು 8-9 ವಯಸ್ಸಿಗೆ ಮೈ ನೆರೆಯುತ್ತಾರೆ ,ಹಾರ್ಮೋನ್ಗಳ ಬದಲಾವಣೆ ತಾವಿರುವ ವಾತಾವರಣ , ದೇಹದ ರೀತಿ ಇನ್ನು ಅನೇಕ ಅಂಶಗಳು ಬೇಗ ಮೈ ನೆರೆಯುವುದಕ್ಕೂ ಮತ್ತು ನಿಧಾನವಾಗಿ ಮೈ ನೆರೆಯುವುದಕ್ಕೂ ಕಾರಣವಾಗುತ್ತದೆ .

 

 

ವಿಜ್ಞಾನದ ಪ್ರಕಾರ ಹೇಳಬೇಕಾದರೆ ಹೆಣ್ಣು ಮಗು ಒಂದು ಮೊದಲಬಾರಿಗೆ ಋತು ಸ್ರಾವ ಅನುಭವಿಸಿರುತ್ತಾಳೆ ಅಂದರೆ ಆಕೆ ಋತುಮತಿಯಾಗಿರುತ್ತಾಳೆ .
ಆಕೆಯ ದೇಹವು ಅಂಡಾಣುಗಳನ್ನು ಬಿಡುಗಡೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅರ್ಥ .

ಅನೇಕ ರಾಜ್ಯಗಳಲ್ಲಿ ಮೈ ನೆರೆದ ಕ್ರಿಯೆಯನ್ನು ಬೇರೆ ಬೇರೆ ವಿಧಗಳಾಗಿ ಆಚರಿಸುತ್ತಾರೆ ಆಂಧ್ರಪ್ರದೇಶದಲ್ಲಿ ಇದನ್ನು ‘ಓಣಿ ‘ ಹಾಕುವ ಕಾರ್ಯಕ್ರಮ ಎಂದು ಕರೆಯುತ್ತಾರೆ .
ನಮ್ಮ ಕರ್ನಾಟಕದಲ್ಲಿ ಇದನ್ನು ವಿಧ ವಿಧ ಹೆಸರುಗಳಿಂದ ಕರೆಯುತ್ತಾರೆ ‘ಋತು ಮತಿ ‘ , ‘ಮಗಳು ಕೈಗೆ ಬಂದಳು ‘ , ‘ವಸಗೆ ‘ , ‘ನೆರೆ ಮುಟ್ಟು’ , ಇತ್ಯಾದಿ .

ಮೈ ನೆರೆದ ದಿನ ಮಗಳಿಗೆ ತಲೆಗೆ ಎಣ್ಣೆ ಹಚ್ಚಿ , ಮೈ ಕೈ ಗೆ ಹರಳೆಣ್ಣೆ ತಿಕ್ಕಿ , ಸೀಗೆಕಾಯಿ ತಲೆಗೆ ಹಚ್ಚಿ ಸ್ನಾನ ಮಾಡಿಸುತ್ತಾರೆ .
ತಾನು ಮುಟ್ಟಾದಾಗ ಧರಿಸಿದ ಬಟ್ಟೆಗಳನ್ನು ಒಗೆದು ಅಗಸರಿಗೆ ದಾನ ಮಾಡುತ್ತಾರೆ .
ನಂತರ ಸಾಮ್ರಾಣಿ ಹೊಗೆ ಹಾಕಿ ಕೂದಲು ಒಣಗಿಸುತ್ತಾರೆ ನಂತರ ಶುಭ್ರವಾದ ಬಟ್ಟೆಯನ್ನು ತೊಡಲು ಕೊಡುತ್ತಾರೆ .

ಆದರೆ ಗುಡಿಸಲು ವಸಗೆ ಯಾಕೆ ಹಾಕುತ್ತಾರೆ ?

 

 

ಹೌದು ಇದಕ್ಕೆ ವೈಜ್ಞಾನಿಕ ಕಾರಣ ಇದೆ

ಮೊದಲಿಗೆ ಗುಡಿಸಲು ಕಟ್ಟಲು ಬಳಸುವ ಸಾಮಾನುಗಳನ್ನು ಗಮನಿಸಿ
ಇದರಲ್ಲಿ ಮುಖ್ಯವಾಗಿ ಲಕ್ಕಿ ಸೊಪ್ಪು (ಲಕ್ಕಲಿ ಸೊಪ್ಪು ) , ಹೊಂಗೆ ಸೊಪ್ಪು ಮತ್ತು ಬೇವಿನ ಸೊಪ್ಪನ್ನು ಬಳಸುತ್ತಾರೆ .
ಈ ಮೂರು ಮರದ ರೆಂಬೆ ಕೊಂಬೆ ಎಲೆಗಳನ್ನು ಬಳಸಿಯೇ ಗುಡಿಸಲು ಕಟ್ಟುವುದು , ಈ ಮೂರರಲ್ಲಿ ಯಾವುದಾದರೂ ಎರಡು ಸಿಕ್ಕರೂ ಸಾಕು .

ಅದರಲ್ಲೇನಿದೆ ವಿಶೇಷ ಅಂತೀರಾ .. ಹೌದು ವಿಶೇಷ ಇದೆ ಲಕ್ಕಿ ಸೊಪ್ಪು ಆಂಟಿ ಬೈಯೋಟಿಕ್ ಗುಣಗಳನ್ನು ಹೊಂದಿದೆ ಅಷ್ಟೇ ಅಲ್ಲದೆ ಆಂಟಿ ಫಂಗಸ್ ಕ್ರಿಮಿ ವಿರೋಧಿಗುಣಗಳಿಂದಾಗಿ ಯಾವುದೇ ಕ್ರಿಮಿ ಕೀಟ ಬಾದೆ , ಸೂಕ್ಶ್ಮಾಣುಗಳ ಬಾದೆ ಇರೋದಿಲ್ಲ , ಸೊಳ್ಳೆ ಅಂತು ಹತ್ರ ಬರೋಲ್ಲ .ಹೊಂಗೆ ಸೊಪ್ಪು ಕೂಡ ತನ್ನ ಕ್ರಿಮಿ ವಿರೋಧಿಗುಣಗಳಿಗೆ ಜನಪ್ರಿಯ .
ಇನ್ನು ಬೇವಿನ ಬಗ್ಗೆ ಹೇಳುವ ಹಾಗಿಲ್ಲ ಎಲ್ಲರಿಗು ತಿಳಿದಿದೆ , ಬೇವಿನ ಗಿಡಕ್ಕೆ ಗಾಳಿಯನ್ನು ಶುದ್ದಿ ಮಾಡುವ ಗುಣವಿದೆ .

ಋತುಮತಿಯಾದಾಗ ದೇಹದಲ್ಲಿ ಬಹಳ ಬದಲಾವಣೆಗಳಾಗಿರುತ್ತದೆ , ಮೊದಲ ಬಾರಿಗೆ ಸಾಕಷ್ಟು ಹೊಟ್ಟೆ ನೋವು ,ಜ್ವರದಂತ ಸಾಮಾನ್ಯ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು .
ಅಷ್ಟೇ ಅಲ್ಲದೆ ದೇಹದ ರೋಗ ನಿರೋಧಕ ಶಕ್ತಿ ಕೂಡ ಕಡಿಮೆ ಇರುತ್ತೆ ಅದಕ್ಕೆ ಗುಡಿಸಲು ವಸಗೆ ಹಾಕ್ತಾರೆ .

ಬಾಣಂತಿಯರ ಕೊಠಡಿಯ ಕಿಟಕಿ ಹಾಗು ಬಾಗಿಲುಗಳಿಗೂ ಈ ಸೊಪ್ಪುಗಳನ್ನು ಕಟ್ಟುತ್ತಾರೆ .

ಆ ಸಮಯದಲ್ಲಿ ತುಪ್ಪ , ಬೆಣ್ಣೆ , ಸಕ್ಕರೆ ಮತ್ತೆ ಒಣ ಕೊಬ್ಬರಿ , ಸಿಹಿ ತಿಂಡಿ ಹಣ್ಣುಗಳನ್ನು ಹೆಚ್ಚಿಗೆ ತಿನ್ನಲು ಕೊಡ್ತಾರೆ .

ಈಗ ಹೈಷಾರಾಮಿ ಸಂಭ್ರಮಗಳನ್ನು ಮಾಡುವವರು ಒಮ್ಮೆ ಹಿರಿಯರು ಮಾಡುವ ಸಾಂಪ್ರದಾಯಗಳನ್ನು ನೆನಪಿಟ್ಟುಕೊಂಡು ಮಾಡಬೇಕು , ಸುಮ್ಮನೆ ವಡವೆ ವಸ್ತ್ರಗಳ ದೊಂಬರಾಟ ನಡೆಯಬಾರದು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top