ಅರೋಗ್ಯ

ಪೈಲ್ಸ್ ಅಥವಾ ಮೂಲವ್ಯಾಧಿ ಕಾಯಿಲೆ ಬಂದರೆ ಈ ಮನೆ ಮದ್ದುಗಳು ಮತ್ತೆ ಆಹಾರ ಪದ್ಧತಿ ಫಾಲೋ ಮಾಡೋದು ಮರೀಬೇಡಿ ..

ಪೈಲ್ಸ್ ಅಥವಾ ಮೂಲವ್ಯಾಧಿ ಕಾಯಿಲೆ ಬಂದರೆ ಈ ಮನೆ ಮದ್ದುಗಳು ಮತ್ತೆ ಆಹಾರ ಪದ್ಧತಿ ಫಾಲೋ ಮಾಡೋದು ಮರೀಬೇಡಿ ..

 

 

ಪೈಲ್ಸ್ ಅಥವಾ ಮೂಲವ್ಯಾಧಿ ಕಾಯಿಲೆಗೆ ಕೆಲವು ಮನೆ ಮದ್ದುಗಳು ಮತ್ತೆ ಆಹಾರ ಪದ್ಧತಿಗಳು ಹೀಗಿವೆ

 

ಮಜ್ಜಿಗೆ

 

ಮಜ್ಜಿಗೆ ತುಂಬಾ ಒಳ್ಳೆಯದು, ಇದು ಹೊಟ್ಟೆಯನ್ನು ತಂಪಾಗಿ ಇಡುತ್ತದೆ ಹಾಗೂ ಮಲಬದ್ಧತೆ ಸಮಸ್ಯೆ ಉಂಟು ಮಾಡುವುದಿಲ್ಲ.

 

ಮೂಲಂಗಿ

 

ಮೊದಮೊದಲು 1/3 ಕಪ್ ಮೂಲಂಗಿ ರಸ ಕುಡಿಯಿರಿ. ನಂತರ ಅರ್ಧ ಕಪ್ ನಷ್ಟು ಪ್ರತಿದಿನ ಕುಡಿಯುತ್ತಾ ಬನ್ನಿ. ಹೀಗೆ ಮಾಡಿದರೆ ಪೈಲ್ಸ್ ಸಮಸ್ಯೆಗೆ ತುಂಬಾ ಒಳ್ಳೆಯದು.

 

ಆಪಲ್ ಸೈಡರ್ ವಿನೆಗರ್

 

ಒಂದು ಚಮಚ ಆಪಲ್ ಸೈಡರ್ ವಿನೆಗರ್ ರನ್ನು ಹತ್ತಿಯಲ್ಲಿ ಅದ್ದಿ ನೋವಿರುವ ಜಾಗಕ್ಕೆ ಒತ್ತಿ.

 

ನಿಂಬೆ ಹಣ್ಣಿನ ರಸ

 

ಶುಂಠಿ ರಸವನ್ನು ನಿಂಬೆ ಹಣ್ಣಿನ ಪಾನಕಕ್ಕೆ ಹಾಕಿ ಕುಡಿಯುವುದು ಒಳ್ಳೆಯದು.

ಬಿಳೀಎಳ್ಳು

 

ಮೂಲವ್ಯಾಧಿಯಿಂದ ಬಳಲುತ್ತಿರುವವರು ಬಿಳೀಎಳ್ಳು 15 ಗ್ರಾಂ, ಕಲ್ಲುಸಕ್ಕರೆ 15 ಗ್ರಾಂ, ಹಾಗು ಹಸುವಿನ ಬೆಣ್ಣೆ 15 ಗ್ರಾಂ ಸೇರಿಸಿ ಅರೆದು, ನಿತ್ಯ ಬೆಳಗ್ಗೆ ಮಾತ್ರ 3 ವಾರ ಸೇವಿಸುವುದರಿಂದ ಸಾಮಾನ್ಯ ಮೂಲವ್ಯಾಧಿಯಲ್ಲದೆ ರಕ್ತ ಮೂಲವ್ಯಾಧಿಯು ಸಹ ನಿವಾರಣೆಯಾಗುತ್ತದೆ.

 

ಜೀರಿಗೆ

 

ಪ್ರತೀದಿನ ಒಂದು ಲೋಟ ಜೀರಿಗೆ ನೀರು ಕುಡಿಯಿರಿ. ಅದಕ್ಕೆ ಜೀರಿಗೆಯನ್ನು ರೋಸ್ಟ್ ಮಾಡಿ ಪುಡಿ ಮಾಡಿ ಇಟ್ಟುಕೊಳ್ಳಿ ಅದನ್ನು ಜೀರಿಗೆ ಕಲೆಸಿ ಕುಡಿದರೆ ಒಳ್ಳೆಯದು.
ವಿಭೂತಿ ಎಲೆಗಳು :

ವಿಭೂತಿ ಎಲೆಗಳನ್ನು ಹರಳೆಣ್ಣೆಯಲ್ಲಿ ಸುಟ್ಟು ಆರಿದ ಮೇಲೆ ಸೋಂಕಿರುವ ಜಾಗಕ್ಕೆ ಹಚ್ಚಬೇಕು .

 

ಬಾಳೆ ಹಣ್ಣು

 

ಬಾಳೆ ಹಣ್ಣನ್ನು ಒಂದು ಕಪ್ ನೀರಿನಲ್ಲಿ ಹಾಕಿ ಬೇಯಿಸಿ, ಈ ನೀರನ್ನು ದಿನದಲ್ಲಿ 3 ಬಾರಿ ಕುಡಿಯಿರಿ. ಈ ರೀತಿ ಕುಡಿಯುವುದರಿಂದ ಮೂಲವ್ಯಾಧಿ ಸಮಸ್ಯೆ ನೈಸರ್ಗಿಕವಾಗಿ ಕಡಿಮೆಯಾಗುವುದು.

 

ತುಳಸೀ ಬೀಜದ ಪುಡಿ

 

ತುಳಸೀ ಬೀಜದ ಪುಡಿ 10 ಗ್ರಾಂ ಮತ್ತು ಒಂದು ಚಮಚ ಬೆಣ್ಣೆ ಬೆರೆಸಿ ಅದಕ್ಕೆ ಸ್ವಲ್ಪ ಬೆಲ್ಲ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಬೇಕು.

 

ಲೋಳೆರಸ

 

ಲೋಳೆರಸದ ತಿರುಳನ್ನು ಒಂದು ಚಮಚೆಯಷ್ಟನ್ನು ದಿನಕ್ಕೆ ಮೂರು ಬಾರಿ ಸೇವಿಸಬೇಕು. ಜೇನು ಮತ್ತು ಅದರ ಅರ್ಧದಷ್ಟು ಹರಳೆಣ್ಣೆ ಸೇರಿಸಿ ಸೇವಿಸಿದರೆ ಮೂಲವ್ಯಾಧಿ ಉಪಶಮನವಾಗುವುದು

 

ಹಾಗಾಲಕಾಯಿ

ಹಾಗಾಲಕಾಯಿಯ ಖಾದ್ಯಗಳನ್ನು ತಿನ್ನುವುದು ಒಳ್ಳೆಯದು. ಅದರ ಎಲೆಯನ್ನು ಹಿಂಡಿ ರಸ ತೆಗೆದು ಆ ರಸವನನ್ನು ಊದಿದ ಭಾಗಕ್ಕೆ ಹಚ್ಚಿದರೆ ಉರಿ ಕಡಿಮೆಯಾಗುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top