ಸಿನಿಮಾ

ಆ ದಿನ ನೆನೆದರೆ ಕಣ್ಣೀರು ಬರುತ್ತದೆ ಅಂದ್ರು ಜಗ್ಗೇಶ್

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿ ಪೋಸ್ಟ್ ಮಾಡುವ ನವರಸನಾಯಕ ಜಗ್ಗೇಶ್ ಅವರು ಇಂದು ಆ ದಿನಗಳನ್ನು ನೆನೆಸಿಕೊಂಡ್ರೆ ಇದೀಗ ಕಣ್ಣೀರು ಬರುತ್ತದೆ ಎಂದು ಹೇಳಿದ್ದಾರೆ.

 

 

ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಕಿಚ್ಚ ಸುದೀಪ್ ಅಭಿಮಾನಿಯೊಬ್ಬರು, ಅಂಬರೀಶ್, ರವಿಚಂದ್ರನ್, ಜಗ್ಗೇಶ್ ಹಾಗೂ ವಿಷ್ಣುವರ್ಧನ್ ಜೊತೆಯಲ್ಲಿರೋ ಅಪರೂಪದ ಹೆಳೆಯ ಚಿತ್ರವನ್ನು ಜಗ್ಗೇಶ್ ಗೆ ಟ್ಯಾಗ್ ಮಾಡಿದ್ದರು.

ನವರಸ ನಾಯಕ ಜಗ್ಗೇಶ್ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ ಅಂಬರೀಶ್ ರವರು ನಾನೆ ಜಾಸ್ತಿ ಕರಿಯ ಎಂದು..ನಾನು ಇಲ್ಲಾ ನೀವೆ ಎಂದು..ಆಗ ಅಂಬರೀಶ್ ಬಿಚ್ಚೋ ಶರ್ಟು ನೋಡೆಬಿಡಣ ಎಂದಾಗ ನಾನು ಇದು ಪಬ್ಲಿಕ್ ಎಂದಾಗ ಎಲ್ಲರು ಬಿಚ್ಚು ನೋಡಣ ಎಂದಾಗಿನ ಚಿತ್ರ..ಆ ದಿನ ನೆನೆದರೆ ಕಣ್ಣೀರು ಬರುತ್ತದೆ..ಎಂಥ ಅದ್ಭುತ ಸಂತೋಷದ ದಿನಗಳು..ಇಂದು ಎಲ್ಲಾ ಇದೆ ಆ ಸಂತೋಷವಿಲ್ಲಾ #ಬದುಕು. ಎಂದು ತಮ್ಮ ಹಳೆಯ ದಿನದ ಮೆಲುಕು ಹಾಕಿಕೊಂಡಿದ್ದಾರೆ.

 

ಜಗ್ಗೇಶ್ ಈಗ ಪದ್ಮಿನಿ ಸಿನೆಮದಲ್ಲಿ ಅಭಿನಯ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಇದೊಂದು ಕೌಟುಂಬಿಕ ಡ್ರಾಮಾ ಆಗಿದ್ದು, ಜಗ್ಗೇಶ್ ಜೊತೆಗೆ ಮಧು, ಸುಧಾರಾಣಿ, ಸಿಹಿಕಹಿ ಗೀತಾ ಮುಂತಾದವರು ಅಭಿನಯ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಸಿನಿಮಾ ಗೆ ಅರ್ಜುನ್ ಜನ್ಯ ಸಂಗೀತ ಹಾಗು ಅದ್ವೈತ ಗುರುಮೂರ್ತಿ ಅವರು ಛಾಯಾಗ್ರಹಣ ಮಾಡಿದ್ದಾರೆ. ಈ ಚಿತ್ರದ ಶೂಟಿಂಗ್ ಕಾರ್ಯ ಎಪ್ರಿಲ್ 18ರಂದು ಆರಂಭ ಆಗಲಿದೆ, ಬೆಂಗಳೂರು ಸುತ್ತಮುತ್ತ ಸುಮಾರು 40 ದಿನಗಳ ಕಾಲ ಚಿತ್ರದ ಶೂಟಿಂಗ್ ಕೆಲಸ ನಡೆಯಲಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top