ವಿಶೇಷ

ಕ್ರಿಕೆಟ್ ಮೈದಾನದಲ್ಲಿ ಫೋರ್, ಸಿಕ್ಸ್ ಬಿದ್ದಾಗೆಲ್ಲ ಮೈ ಚಳಿ ಬಿಟ್ಟು ಕುಣಿಯೋ ಚೀರ್ ಲೀಡರ್ ಬೆಡಗಿಯರ ಬಗ್ಗೆ ತಿಳ್ಕೊಳ್ಳೆಬೇಕಾದ 13 ಹಾಟ್ ಸತ್ಯಗಳು

ಐಪಿಲ್ ಬಂತು ಅಂದ್ರೆ ಸಾಕು ಈ ಚಿಯರ್ ಲೀಡರ್ ಗಳದ್ದೆ ಹಾವಳಿ , ಒಂದು ಸಿಕ್ಸ್ , ಫೋರ್ ಬಿದ್ರು ಸಾಕು ಮೈ ಚಳಿ ಬಿಟ್ಟು ಕುಣಿತಾರೆ, ಸ್ಟೇಡಿಯಂ ನಲ್ಲಿರೋ ಎಲ್ಲ ತುಂಡ್ ಹೈಕ್ಳು ಜೊಲ್ಲು ಸುರ್ಸ್ ಕೊಂಡು ನೋಡ್ತಾ ಇರ್ತಾರೆ, ಇನ್ನು ಮ್ಯಾಚು ನಡೆಯೋ ಟೈಂ ಅಲ್ಲಿ ಸ್ಲೌ ಮೋಷನ್ ಮಾಡಿ ಕ್ಯಾಮೆರಾ ದವನು ಇವರ ಅಂದ ಚಂದ ಎಲ್ಲರಿಗೂ ಸವಿಯೋ ಹಾಂಗೆ ಮಾಡ್ತಾನೆ.

 

 

ಇಷ್ಟೆಲ್ಲ ಚಿಯರ್ ಮಾಡೋ ಈ ಬೆಡಗಿಯರ ಬಗ್ಗೆ ಕೆಲವು ಹಾಟ್ ಹಾಟ್ ಸತ್ಯಗಳು ತಿಳ್ಕೊಳ್ಳಿ ಮ್ಯಾಚು ಇನ್ನು ಚಂದ ಅನ್ಸುತ್ತೆ

 

1. ಬರಿ ಅಮೆರಿಕಾ ಒಂದ್ರಲ್ಲೇ 40 ಲಕ್ಷ ಚಿಯರ್ ಲೀಡರ್ ಇದಾರೆ ಅದ್ರಲ್ಲಿ ಇನ್ನು ಹೈ ಸ್ಕೂಲ್ ಮೆಟ್ಟಲು ಹತ್ತಿರೋರು 4 ಲಕ್ಷ ಜನ !

2.ಅಮೆರಿಕಾದ ಟೆಕ್ಸಾಸ್ ಒಂದ್ರಲ್ಲೇ ಅತಿ ಹೆಚ್ಚು ಬೇಡಗಿರು ಇರೋ ದ್ರಿಂದ ಇದನ್ನ ಚಿಯರ್ ಲೀಡರ್ ರಾಜಧಾನಿ ಅಂತಲೇ ಕರೀತಾರೆ.

3.ಚಿಯರ್ ಲೀಡರ್ ಗಳಲ್ಲಿ ಪದವಿ, ಸ್ನಾತಕ, ಸ್ನಾತಕೋತ್ತರ ಹೀಗೆ ತುಂಬಾ ಓದಿರೋರು ಇದಾರೆ, ಕೆಲವರು ಇರೋ ಕೆಲಸದ ಜೊತೆಗೆ ಇದನ್ನು ಆಡ್ತಾರೆ, ಇನ್ನು ಕೆಲವರು ಒಂದಕ್ಕಿಂತ ಹೆಚ್ಚು ಆಟಕ್ಕೆ ಚಿಯರ್ ಲೀಡರ್ ಆಡೋಕೆ ಇಷ್ಟ ಪಡ್ತಾರೆ.

 

4.ಅಮೆರಿಕಾದ ‘ದಲ್ಲಾಸ್ ಕೌಬಾಯ್ಸ್’ ಅನ್ನೋ ತಂಡ ಒಂದು ಶಿಸ್ತು ಬದ್ದ ಮೊದಲ ಮಾನ್ಯತೆ ಪಡೆದ ಫುಟ್ ಬಾಲ್ ಕ್ರೀಡೆಗೆ ಅಂತಲೇ ಮೀಸಲಿದ್ದ ಚಿಯರ್ ಲೀಡರ್ಗಳ ತಂಡ.

5.100 ವರ್ಷಗಳ ಇತಿಹಾಸ ಇದ್ರು ಮೊದಲಿಗೆ ,ಚಿಯರ್ ಲೀಡರ್ ಗಳಾಗಿ ಹುಡುಗರೇ ಇದ್ರು.

6.ಕ್ರಿಕೆಟ್ ಆಟದ ಸಂದರ್ಭದಲ್ಲಿ ಕೆಲವು ವೀಕ್ಷಕರು ತಾವು ತಿಂದ ಪ್ಲಾಸ್ಟಿಕ್ ತಟ್ಟೆ, ಲೋಟ, ತಿಂಡಿ ಕವೆರ್, ಪಾಪ್ ಕಾರ್ನ್ ಹೀಗೆ ಸಿಕ್ಕ ಸಿಕ್ಕ ವಸ್ತುಗಳನ್ನ ಇವರ ಮೇಲೆ ಎಸಿತಾರಂತೆ ಆದ್ರು ಇದನ್ನೆಲ್ಲ ಸಹಿಸ್ಕೊಂಡು ನಗ್ತಾ ಇರ್ತಾರೆ.

 

 

7.ಕೆಲವೊಂದು ಈವೆಂಟ್ ಮ್ಯಾನೇಜ್ಮೆಂಟ್ ಕಂಪೆನಿಗಳವರು ಕ್ರಿಕೆಟ್ ಸಂದರ್ಭದಲ್ಲಿ ಯಾವುದೇ ಆಟ ಗಾರರ ಜೊತೆ ಮಾತಡಬಾರ್ದು ಅಂತ ರೂಲ್ಸ್ ಹಾಕಿರ್ತಾರಂತೆ.

8.ಕೆಲವೊಮ್ಮೆ ಹಾಕೋ ಬಟ್ಟೆ ಕೆಟ್ಟದಾಗಿದ್ರು ಡ್ಯಾನ್ಸ್ ಮಾಡ್ಲೆ ಬೇಕಾದ ಅನಿವಾರ್ಯತೆ ಇವರಿಗೆ, ಇವ್ರು ಮೇಕಪ್ ಇವ್ರೆ ಮಾಡ್ಕೋಬೇಕು.

9.ಭಾರತದಲ್ಲಿ ಚಿಯರ್ ಲೀಡರ್ ಗಳು ಇಲ್ಲ ಆದ್ರೆ ಎಲ್ಲ ದೇಶದ ಚಿಯರ್ ಲೀಡರ್ ಗಳಿಗಿಂತ ಅಮೆರಿಕಾದವ್ರು ಕಾಸ್ಟ್ಲಿ

 

 

10.ಸುಮ್ನೆ ನೋಡೋಕೆ ತೆಳ್ಳಗೆ ಬೆಳ್ಳಗೆ ಇದಾರೆ ಅಂತ ಇವರನ್ನ ಆಯ್ಕೆ ಮಾಡೋಲ್ಲ ಚಿಯರ್ ಲೀಡರ್ ಗಳು ಲಿಖಿತ, ಮೌಖಿಕ ಪರೀಕ್ಷೆ ಮತ್ತೆ ನೇರ ಆಯ್ಕೆ ಸುತ್ತುಗಳನ್ನ ಕಡ್ಡಾಯವಾಗಿ ಎದುರಿಸಲೇಬೇಕು.

11.ಈವರೆಗೆ ಐಪಿಲ್ ನಲ್ಲಿ ಆರ್ ಸಿ ಬಿ ತಂಡ ದುಬಾರಿ ಚಿಯರ್ ಲೀಡರ್ ಗಳನ್ನ ಕರೆಸ್ಕೊಂಡಿತ್ತು ಇದಕ್ಕೆ ಅಂತಲೇ ವಾಷಿಂಗ್ಟೋನ್ ನ ರೆಡ್ ಸ್ಕಿನ್ ಅನ್ನೋ ಚಿಯರ್ ಲೀಡರ್ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿತ್ತು.

12.ಮುಂಬೈ ಇಂಡಿಯನ್ ಟೀಮ್ ಜೊತೆಗಿದ್ದ ಸೌತ್ ಆಫ್ರಿ ಕಾ ದೇಶದ ಚಿಯರ್ ಲೀಡರ್ ಒಬ್ಬಳು ತನ್ನ ಅನುಭವಗಳನ್ನ ವೆಬ್ಸೈಟ್ ಒಂದ್ರಲ್ಲಿ ಬರ್ಕೊಂಡಿದ್ಲು ಅದ್ರಲ್ಲಿ ಎಷ್ಟು ಕೀಳಾಗಿ ಚಿಯರ್ ಲೀಡರ್ ಗಳನ್ನ ನೋಡ್ತಾರೆ ಅಂತ ಹೇಳ್ಕೊಂಡಿದ್ಲು

 

ಇದ್ರಿಂದ ಕೋಪ ಮಾಡ್ಕೊಂಡ ಮುಂಬೈ ಇಂಡಿಯನ್ ಟೀಮ್ ಆಯೋಜಕರು ಅವಳನ್ನ ಕೆಲಸದಿಂದ್ಲೇ ತೆಗೆದು ಬಿಟ್ರು.

13.ಕ್ರಿಕೆಟ್ ಆಟಗಾರರ ಜೊತೆ ಮಾತಡದಿದ್ರು ಪರವಾಗಿಲ್ಲ , ನೈಟ್ ಪಾರ್ಟಿಗಳು, ಈವೆಂಟ್ಗಳು ಇಲ್ಲೆಲ್ಲ ರಂಗು ಹೆಚ್ಚಿಸೋರು ಇವ್ರೆನೆ.

ಇನ್ನಾದ್ರೂ ಅವರನ್ನ ಕೀಳಾಗಿ ನೋಡೋದು ಬಿಡೋಣ ಅವರ ಕೆಲಸ ಅವ್ರು ಮಾಡ್ಕೊಂಡು ಹೋದ್ರೆ ನಮಗೇನು ತೊಂದ್ರೆ ಅಲ್ವಾ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top