ಅರೋಗ್ಯ

ಆಕರ್ಷಕವಾದ ಪಿಂಕ್ ತುಟಿ ಬೇಕು ಅಂತ ದುಬಾರಿ ಲಿಪ್ ಸ್ಟಿಕ್ ತಗೋಳೋ ಬದ್ಲು ಈ 9 ತಂತ್ರ ಬಳಸಿ ನೈಸರ್ಗಿಕವಾಗಿ ಪಿಂಕ್ ತುಟಿ ನಿಮ್ಮದಾಗುತ್ತದೆ

ತುಟಿಗಳಿಗೆ ಸೌಂದರ್ಯ ಸಲಹೆ.

ತುಟಿಗಳು ಸುಂದರವಾಗಿರಬೇಕು ಎಂದು ಎಲ್ಲರೂ ಅಪೇಕ್ಷೆ ಪಡುತ್ತಾರೆ ಹಾಗೆ ಅಂದವಾಗಿ ಕಾಣಬೇಕೆಂದು ಕೂಡ. ಹುಡುಗಿಯರು ಸಾಮಾನ್ಯವಾಗಿ ಎದುರಿಸುವ ತೊಂದರೆಗಳೆಂದರೆ ಒಣಗಿರುವ ತುಟಿಗಳು, ಒಣಗಿ ಹೊಡೆದು ರಕ್ತ ಬರುವ ತುಟಿಗಳು ಹೀಗೆ ಸಮಸ್ಯೆಗಳಿಂದ ಹೊರಗೆ ಬರಲು ನಿಮ್ಮ ತುಟಿಗಳನ್ನು ಅಂದವಾಗಿ ಕಾಣುವಂತೆ ಮಾಡಲಿ ಇಲ್ಲಿವೆ ನಿಮಗಾಗಿ ಸೌಂದರ್ಯ ಸಲಹೆಗಳು.
1. ಒಣಗಿದ ತುಟಿಗೆ ಆರಾಮದಾಯಕ ವೆನಿಸಲು ತಾಜಾ ತುಪ್ಪ ಹಚ್ಚಿ ಸಾಕು. ಬೇಗನೆ ಸರಿಹೋಗಿ ಮೃದುವಾಗಿ ಮೊದಲಿನಂತಾಗುತ್ತದೆ.

 

2. ಒಣಗಿದ ತುಟಿಯಿಂದ ರಕ್ತ ಬರುತ್ತಿದ್ದರೆ ತಾಜಾ ತುಪ್ಪದ ಜೊತೆ ಕೋಕೋಮಿನ್ ಎಣ್ಣೆಯನ್ನು ಮಿಶ್ರಣ ಮಾಡಿ ಹಚ್ಚಿದರೆ ಬೇಗ ಗುಣ ಹೊಂದುತ್ತವೆ.

 

 

3. ಸೂರ್ಯನ ಕಿರಣಗಳಿಂದ ತುಟಿಯನ್ನು ರಕ್ಷಿಸಲು SPF ಎಂದು ಮುದ್ರೆ ಹೊಂದಿರುವ ತುಟಿಯ ಮುಲಾಮ್ಮನ್ನೇ ಖರೀದಿಸಿ. ಆದನ್ನು ಬಳಸುವುದರಿಂದ ಸೂರ್ಯನೇ ಅತೀ ನೇರಳೆ(ultra violet rays) ಕಿರಣಗಳಿಂದ ರಕ್ಷಿಸುತ್ತದೆ.

 

4. ನಿಂಬೆಹಣ್ಣಿನ ರಸ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ ತುಟಿಯ ಮೇಲೆ ಹಚ್ಚುವುದರಿಂದ ತುಟಿಗಳು ಗುಲಾಬಿಯಂತಾಗುತ್ತವೆ.

 

 

5. ತುಟಿಗಳ ಮೇಲಿನ ಮೃತ ಕಣಗಳನ್ನು (dead cells) ತೆಗೆಯಲು ಹಲ್ಲುಜ್ಜುವ ಬ್ರಶನ್ನು ತೆಗೆದುಕೊಂಡು ಅದರ ಮೇಲೆ ಸಕ್ಕರೆ ಹಾಕಿ ಹಾಗೆ ಮೃದುವಾಗಿ ಮೆಲ್ಲಗೆ ತ್ತಿಕ್ಕಿದರೆ ಮೃತ ಕಣಗಳು ಹೋಗುತ್ತವೆ.

 

6. ನಿಯಮಿತವಾಗಿ ನೀರನ್ನು ಕುಡಿಯಬೇಕು ಆದ್ದರಿಂದ ದೇಹವು ಒಣಗುವುದಿಲ್ಲ ಶರೀರವು ನಿರ್ಜಲೀಕರಣ ದಿಂದ ಮುಕ್ತಿಹೊಂದಿ ತುಟಿಗಳ ಒಣಗುವಿಕೆಯಿಂದ ರಕ್ಷಿಸುತ್ತದೆ. ಚಳಿಗಾಲದಲ್ಲಿ 1 ಅಥವಾ 11/2 ಲೀಟರ್, ಬೇಸಿಗೆ ಕಾಲದಲ್ಲಿ 3 ರಿಂದ 4 ಲೀಟರ್ ನಷ್ಟು ನೀರನ್ನು ಕುಡಿಯಬೇಕು.ಇದು ಚಳಿ ಮತ್ತು ಬೇಸಿಗೆಯ ಉಷ್ಣಾಂಶಕ್ಕೆ ತಕ್ಕಂತೆ ಏರುಪೇರಾಗುತ್ತದೆ.

 

 

7. ತುಟಿಯ ಬಣ್ಣ ಅಂದರೆ ಲಿಪ್ ಸ್ಟಿಕ್ ಖರೀದಿಸುವ ಮುನ್ನ ನಿಮ್ಮ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗದಂತಹ ಲಿಪ್ ಸ್ಟಿಕ್ನ್ನು ನೋಡಿ ಖರೀದಿಸಿ.

8. ಬೀಟ್ರೂಟ್ನ ರಸ ಹಚ್ಚುವುದರಿಂದ ನಿಮ್ಮ ತುಟಿಗಳಿಗೂ ಗುಲಾಬಿ ಬಣ್ಣಕ್ಕೆ ಬರುತ್ತವೆ ಮತ್ತು ತುಟಿಯ ಮೇಲಿನ ಕಪ್ಪು ಕಲೆಗಳು ಹೋಗಿ ತುಟಿಗಳು ಕೆಂಪು ಬಣ್ಣದಿಂದ ಕಂಗೊಳಿಸುತ್ತವೆ.

 

9. ತುಟಿಗೆ ಹರಳಿನ ಎಣ್ಣೆಯನ್ನು ಅಂದರೆ ಅಳ್ಳೆಣ್ಣೆ ಎಂದು ಕರೆಯುತ್ತೇವೆ ಇದನ್ನು ಹಚ್ಚುವುದರಿಂದ ಕೂಡ ಮೃದುವಾಗಿ ತುಟಿಗಳು ಸಹಜ ಬಣ್ಣ ಹೊಂದಿ ಸೌಂದರ್ಯದಿಂದ ಕಂಗೊಳಿಸುತ್ತವೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top