ಸಮಾಚಾರ

ಶ್ರೀರೆಡ್ಡಿ ಪರ ನಿಂತ ಮಹೇಶ್ ಕತ್ತಿ ಈಗ ಚಿರಂಜೀವಿ ಪ್ರೊಡಕ್ಷನ್ ಹೌಸ್ ಮೇಲೆ ಕೇಸ್ ಹಾಕ್ತಾರಂತೆ , ಎಷ್ಟು ದುಡ್ಡಿಗೆ ಗೊತ್ತಾ

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಚಿತ್ರರಂಗದಲ್ಲಿ ಈಗ ಕಾಸ್ಟಿಂಗ್ ಕೌಚ್ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಹೌದು ಇತ್ತೀಚಿಗೆ ತೆಲುಗು ಚಿತ್ರನಟಿ ಶ್ರೀರೆಡ್ಡಿ ಫಿಲಂ ಚೇಂಬರ್ ಎದುರಲ್ಲೇ ಅರೆಬೆತ್ತಲಾಗಿ ಪ್ರತಿಭಟನೆ ಮಾಡಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದರು. ಇದರ ಬೆನ್ನಲ್ಲೇ ಈಗ ಮತ್ತೊಂದು ವಿವಾದ ಭುಗಿಲೆದ್ದಿದೆ. ಕಾಸ್ಟಿಂಗ್ ಕೌಚ್ ವಿವಾದಗಳು ಸದ್ಯಕ್ಕೆ ತೆರೆ ಬೀಳುವ ಲಕ್ಷಣ ಕಾಣುತ್ತಿಲ್ಲ.

 

 

ಇದೀಗ ಕ್ಯಾರೆಕ್ಟರ್ ಆರ್ಟಿಸ್ಟ್ ಸುನಿತಾ ಎಂಬುವವರು ನಿರ್ದೇಶಕ ಮಹೇಶ್ ಕತ್ತಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಮಹೇಶ್ ಕತ್ತಿ ತೆಲುಗು ಬಿಗ್ ಬಾಸ್ ನಲ್ಲಿ ಭಾಗವಹಿಸಿದ ಸಂಧರ್ಭದಲ್ಲಿ ಪವನ್ ಕಲ್ಯಾಣ್‌‌‌‌‌ ಬಗ್ಗೆ ಮಾತನಾಡಿ ಪವನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿ ಆಗಿದ್ದರು. ನಂತರ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿದ್ದರು.

 

 

ಸುನಿತಾ ಮಾಡಿರುವ ಆರೋಪದ ಪ್ರಕಾರ ಮಹೇಶ್ ಕತ್ತಿ ಇವಳಿಗೆ ಫೋನ್ ಮಾಡಿ ಅವಕಾಶ ಕೊಡುವುದಾಗಿ ಹೇಳಿ ಭೇಟಿ ಮಾಡಲು ಹೇಳಿದ್ದ. ಆದರೆ ಹೋಟೆಲ್ ರೂಮ್ ಒಂದರಲ್ಲಿ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದ ಎಂದು ಸುನೀತಾ ಆರೋಪ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹೇಶ್ ಕತ್ತಿ ಆರೋಪ ನಿರಾಕರಿಸಿದ್ದಾರೆ, ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಸುನಿತಾ ಮೇಲೆ ಮತ್ತು ನನ್ನ ವಿರುದ್ಧ ಆಕೆಯನ್ನು ಎತ್ತಿ ಕಟ್ಟುತ್ತಿರುವ ಕೊನಿಡೇಲ ಪ್ರೊಡಕ್ಷನ್ ವಿರುದ್ಧ 50 ಲಕ್ಷ ರೂ. ಮಾನನಷ್ಟ ಮೊಕದ್ದಮೆ ದಾಖಲು ಮಾಡುವುದಾಗಿ ಮಹೇಶ್ ಕತ್ತಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top