ಭವಿಷ್ಯ

ಏಪ್ರಿಲ್  18ನೇ ತಾರೀಖಿನಂದು ಸೂರ್ಯನು ಮೀನ ರಾಶಿಯಿಂದ ತನ್ನ ಉಚ್ಚ ರಾಶಿಯಾದ ಮೇಷ ರಾಶಿಗೆ ಪ್ರವೇಶ ಮಾಡಲಿದ್ದಾನೆ ಇದ್ರಿಂದ ಯಾವ ರಾಶಿಗೆ ಲಾಭ ಯಾವುದಕ್ಕೆ ನಷ್ಟ ತಿಳ್ಕೊಳ್ಳಿ

ಏಪ್ರಿಲ್  18 ನೇ ತಾರೀಖಿನಂದು ಸೂರ್ಯನು ಮೀನ ರಾಶಿಯಿಂದ ತನ್ನ ಉಚ್ಚ ರಾಶಿಯಾದ ಮೇಷ ರಾಶಿಗೆ ಪ್ರವೇಶ ಮಾಡಲಿದ್ದಾನೆ.

 

ಹಿಂದೂಗಳ ಧರ್ಮದ ಅನುಸಾರ ಸೂರ್ಯ ಇಡೀ ಜಗತ್ತಿಗೇ ದೇವರಾಗಿದ್ದಾನೆ. ಅವನೇ ಈ ಜಗತ್ತಿಗೆ ತಂದೆಯಾಗಿದ್ದಾನೆ. ಸೂರ್ಯನೂ ಇಲ್ಲದೇ ಹೋದರೆ ಈ ಪೃಥ್ವಿಯ ಮೇಲೆ ಯಾವ ಜೀವರಾಶಿಗಳು ಜೀವ ಜಂತುಗಳು, ಮನುಷ್ಯರ ಜೀವನ ಮತ್ತು ಅಸ್ತಿತ್ವ ಈ ಭೂಮಿಯ ಮೇಲೆ ಉಳಿಯುವುದಿಲ್ಲ . ಸೂರ್ಯನಲ್ಲಿ ಇಷ್ಟೊಂದು ಅಪಾರವಾದ ಶಕ್ತಿ ಇದೆ.

 

 

ವೈದಿಕ ಜ್ಯೋತಿಷ್ಯದ ಪ್ರಕಾರ ಸೂರ್ಯನು ಯಶಸ್ಸನ್ನು ಕರುಣಿಸುವನು. ರಾಜ ಮರ್ಯಾದೆ, ಗೌರವವನ್ನು ನೀಡುವವನು. ವಿಭಿನ್ನ ಸ್ಥಾನಗಳಲ್ಲಿ ಪಕ್ಷ, ಪದವಿಯ ಪ್ರಾಪ್ತಿಯನ್ನು ಸಹ ನೀಡಲಿದ್ದಾನೆ. ಆದರೆ ಇದು ಸೂರ್ಯನ ಶುಭ ಪ್ರಭಾವದ ಕಾರಣದಿಂದಲೇ ಆಗಿದೆ. ಸೂರ್ಯನ ಅಶುಭ ಪ್ರಭಾವದ ಕಾರಣ ಗೌರವ, ಸನ್ಮಾನಗಳು ಸಿಗುವುದಿಲ್ಲ .ತಂದೆಗೆ ಕಷ್ಟ, ಕಣ್ಣಿಗೆ ಸಂಬಂಧಪಟ್ಟಂತೆ ಖಾಯಿಲೆಗಳು ಮತ್ತು ರೋಗಗಳು ಸಹ ನಿಮ್ಮನ್ನು ಬಾಧಿಸುತ್ತದೆ.

ಸೂರ್ಯನು ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶ ಮಾಡುವುದರಿಂದ ವಿಭಿನ್ನ ಪರಿಸ್ಥಿತಿಗಳನ್ನು ಉತ್ಪತ್ತಿ ಮಾಡಲಿದೆ. ಈ ಬಾರಿ ಏಪ್ರಿಲ್  ಹದಿನಾಲ್ಕನೇ  ತಾರೀಖಿನಂದು ಸೂರ್ಯನು ಮೇಷ  ರಾಶಿಗೆ ಪ್ರವೇಶ ಮಾಡಲಿದ್ದಾನೆ. ಮೇ ಹದಿನೈದು ನೇ ತಾರೀಕಿನವರೆಗೂ ಸೂರ್ಯನು ಇದೇ ರಾಶಿಯಲ್ಲಿಯೇ ಸ್ಥಿತ ನಿರುತ್ತಾನೆ. ಸೂರ್ಯನ ಬೆಳಗ್ಗೆ ಎಂಟು ಗಂಟೆ ಇಪ್ಪತ್ತೇಂಟು ನಿಮಿಷಕ್ಕೆ ಮೇಷ ರಾಶಿಗೆ ಪ್ರವೇಶ ಮಾಡಲಿದ್ದು, ಇದರಿಂದಾಗಿ ಬರೀ ಮೇಷ ರಾಶಿ ಮಾತ್ರವಲ್ಲ ,ಇನ್ನುಳಿದ ಬೇರೆ ರಾಶಿಗಳಿಗೆ ಕೂಡ ಇದರ ಪ್ರಭಾವ ಬೀರಲಿದೆ. ಬನ್ನಿ ಸೂರ್ಯನ ಈ ಗೋಚರದಿಂದ ಮೇಷ ರಾಶಿ ಮತ್ತು  ಇನ್ನಿತರೆ ರಾಶಿಗಳಿಗೆ ಯಾವ ರೀತಿಯ ಪ್ರಭಾವವನ್ನು ಬೀರುತ್ತದೆ ಎಂದು ನೋಡೋಣ.

 

ಮೇಷ (Mesha)

 

 

 

ಸೂರ್ಯನು ಮೇಷ ರಾಶಿಗೆ ಪ್ರವೇಶವಾಗುವುದರ ಕಾರಣ ಈ ರಾಶಿಯವರಿಗೆ  ಹೆಚ್ಚಿನ ಪ್ರಭಾವ ಬೀರುತ್ತದೆ. ಇವರಿಗೆ ಸರ್ಕಾರಿ ಕೆಲಸಗಳಲ್ಲಿ ಲಾಭವಾಗಲಿದೆ. ಪ್ರಬಲವಾಗಿ ಲಾಭವಾಗುವ ಸಂಭವ ಇದೆ. ಸೂರ್ಯನ ಪ್ರವೇಶದಿಂದ ಈ ರಾಶಿಯ ಜನರಲ್ಲಿ ಶಕ್ತಿ ,ಚೈತನ್ಯ, ಉತ್ತೇಜನ ಶಕ್ತಿಯೂ ಕೂಡ ಹೆಚ್ಚುತ್ತದೆ. ಕಾರ್ಯಕ್ಷೇತ್ರ ಮತ್ತು ವ್ಯವಸಾಯದಲ್ಲಿ ಉನ್ನತಿಯೂ ಕಂಡುಬರುತ್ತದೆ .ಈ ಗೋಚರವು ಮೇಷ ರಾಶಿಯವರ ತಂದೆಗೂ ಕೂಡ ಅನುಕೂಲಕರವಾಗಿರುತ್ತದೆ.

ಪರಿಹಾರ-  ಶನಿವಾರದ ದಿನ ಬಡ ರೋಗಿಗಳಿಗೆ ಔಷಧಿಯನ್ನು ವಿತರಿಸಿ.

 

ವೃಷಭ (Vrushabha)

 

ಸೂರ್ಯನು ಈ ರಾಶಿಯಿಂದ ಹನ್ನೆರಡನೇ ಭಾವದಲ್ಲಿ ಸಂಚಾರ ಮಾಡಲಿದ್ದಾನೆ. ಈ ಕಾರಣದಿಂದ ವಿದೇಶ ಯಾತ್ರೆಯನ್ನು ಮಾಡುವ ಪ್ರಬಲ ಯೋಗವು ಉಂಟಾಗಲಿದೆ .ಯಾರು ಮೊದಲೇ ವಿದೇಶಗಳಲ್ಲಿ ನಲೆಸಿದ್ದಾರೆ ಅವರ ವೃತ್ತಿ ಜೀವನ ಉತ್ತಮವಾಗಿರುತ್ತದೆ. ಆರೋಗ್ಯದ ದೃಷ್ಟಿಯಲ್ಲಿ ಸಮಾಧಾನದಿಂದ ಇರುವುದು ಒಳ್ಳೆಯದು. ಈ ಸಮಯದಲ್ಲಿ ತಲೆನೋವು, ಜ್ವರ ಹೀಗೆ ಇನ್ನೂ ಅನೇಕ ರೋಗಗಳು ಕಾಣಿಸಿಕೊಳ್ಳುವ ಸಂಭವ ಇದೆ. ನೀವು ಈ ಕಾಯಿಲೆಗಳಿಂದ ನರಳಬಹುದು. ಸೂರ್ಯನ ಈ ಬದಲಾವಣೆಯಿಂದ ನೀವು ನಿಮ್ಮ ವಿರೋಧಿಗಳ ಕೋಪಕ್ಕೆ ಗುರಿಯಾಗುತ್ತೀರಿ. ಈ ರಾಶಿಯವರು ಆಸ್ತಿಯನ್ನು ಈ ಸಮಯದಲ್ಲಿ ಖರೀದಿಸಬಹುದು. ನಿಮ್ಮ ಖರ್ಚು ಹೆಚ್ಚಾಗುತ್ತದೆ. ಆದ್ದರಿಂದ ನೀವು ಸ್ವಲ್ಪ ಯೋಚನೆ ಮಾಡಿ ಹಣ ಖರ್ಚು ಮಾಡುವುದು ಒಳ್ಳೆಯದು .

ಪರಿಹಾರ  – ಪಾರ್ಕ್ ಅಥವಾ ದೇವಾಲಯಗಳ ಬಳಿ ಬಿಳಿ ಎಕ್ಕದ ಗಿಡವನ್ನು ಬೆಳೆಸಿ.

 

ಮಿಥುನ (Mithuna)

 

 

ಈ ರಾಶಿಯಿಂದ ಹನ್ನೊಂದನೇ ಭಾವದಲ್ಲಿ ಸೂರ್ಯನು ಗೋಚರವಾಗಲಿದ್ದಾನೆ. ಇವರಿಗೆ ಧನ ವೃದ್ಧಿಯಾಗಲಿದೆ. ನಿಮ್ಮ ಆದಾಯ ಹೆಚ್ಚಾಗಲಿದೆ . ಸಮಾಜದಲ್ಲಿ ನಿಮ್ಮ ಖ್ಯಾತಿಯೂ ಹೆಚ್ಚುತ್ತದೆ. ನೀವು ತೆಗೆದುಕೊಂಡ ನಿರ್ಣಯಗಳಿಂದ ನಿಮಗೆ ಲಾಭ ದೊರೆಯಲಿದೆ. ಅವಶ್ಯಕತೆ ಇದ್ದರೆ ಸಹೋದರ ಸಹೋದರಿಯರ ಸಹಯೋಗವೂ ದೊರೆಯಲಿದೆ. ನೀವು ಅಧಿಕ ಸಮಯದಿಂದ ಯೋಚಿಸುತ್ತಿರುವ ಯಾವುದೋ ಒಂದು ಕಾರ್ಯವೂ ಅಥವಾ ಆಸೆಯೂ ಈ ಸಮಯದಲ್ಲಿ ಪೂರ್ಣಗೊಳ್ಳಲಿದೆ. ಪ್ರೇಮಕ್ಕೆ ಸಂಬಂಧಪಟ್ಟಂತೆ ಈ ಸಮಯದಲ್ಲಿ ಏರಿಳಿತಗಳು ಸಂಭವಿಸಲಿವೆ.

ಪರಿಹಾರ – ನಿಮ್ಮ ಕಣ್ಣುಗಳಿಂದ ಉದಯಿಸುತ್ತಿರುವ ಸೂರ್ಯನ ದರ್ಶನವನ್ನು  ಪ್ರತಿದಿನ ಬೆಳಗ್ಗೆ ದರ್ಶನ ಮಾಡಿ.

ಕರ್ಕ (Karka)

 

 

ಸೂರ್ಯನು ಈ ರಾಶಿಯಿಂದ ಹತ್ತನೇ ಭಾವದಲ್ಲಿ ಗೋಚರಿಸಲಿದ್ದಾನೆ. ಅನುಕೂಲಕರವಾದ ಪ್ರಭಾವಗಳು ಕಾಣಿಸಲಿವೆ. ಕಾರ್ಯ ಕ್ಷೇತ್ರದಲ್ಲಿ ನಿಮಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ. ನೀವು ಕೆಲಸ ಮಾಡುತ್ತಿದ್ದರೆ ಅದರಿಂದ ನಿಮಗೆ ಸ್ವಲ್ಪ ಸಮಾಧಾನದಿಂದ ಇರುವುದು ಒಳ್ಳೆಯದು. ಯಾಕೆಂದರೆ ನಿಮಗೆ ನಾನು ಎನ್ನುವ ಅಹಂ ಭಾವನೆ ಮತ್ತು ಅಹಂಕಾರ ಹೆಚ್ಚಾಗುವುದು. ನಿಮ್ಮ ವ್ಯಕ್ತಿತ್ವದಲ್ಲಿ ಪರಾಕ್ರಮದಲ್ಲಿ ಶೌರ್ಯ ಕಾಣಿಸುತ್ತದೆ. ಸರಕಾರಿ ಕೆಲಸಗಳಲ್ಲಿ ನಿಮಗೆ ನಿರಾಸೆಯಾಗುವುದಿಲ್ಲ. ಈ ಗೋಚರದಿಂದ ನಿಮ್ಮ ತಾಯಿಯ ಆರೋಗ್ಯದಲ್ಲಿ ಏರು ಪೇರಾಗುವ ಸಂಭವ ಇದೆ. ಆದ್ದರಿಂದ ತಾಯಿಯ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಇದರಿಂದ ನಿಮಗೆ ಮಾನಸಿಕ ಒತ್ತಡ ಕೂಡ ಹೆಚ್ಚಾಗಲಿದೆ .

ಪರಿಹಾರ – ಪ್ರತಿದಿನ ಹನುಮಾನ್ ಚಾಲೀಸವನ್ನು ಪಾರಾಯಣ ಮಾಡಿ .

 

ಸಿಂಹ (Simha)

ಸೂರ್ಯನು ಈ ರಾಶಿಯಿಂದ ಒಂಬತ್ತನೇ ಭಾವದಲ್ಲಿ ಗೋಚರವಾಗಲಿದೆ. ಇದರಿಂದ ನಿಮ್ಮ ಸಮ್ಮಾನ, ಗೌರವಗಳು ಹೆಚ್ಚಾಗಲಿವೆ. ನಿಮ್ಮ ಅದೃಷ್ಟ ಈ ಸಮಯದಲ್ಲಿ ನಿಮ್ಮ ಜೊತೆಗೆ ಇದೆ. ದೀರ್ಘ ಯಾತ್ರೆಯು ನಿಮಗೆ ಫಲದಾಯಕವಾಗಲಿದೆ. ಸಮಾಜದಲ್ಲಿ ಸಕ್ರಿಯವಾಗಿ ಇರಲು ದಾನ ದಕ್ಷಿಣೆಗಳನ್ನು ನೀಡುವುದರಲ್ಲಿ ಅಗ್ರಸ್ಥಾನದಲ್ಲಿ ನೀವು ಇರುತ್ತೀರಿ. ತಂದೆಯ ಜತೆಗೆ ಮಾತಿನ ಚಕಮಕಿ ಏರ್ಪಡಿಸಲಿದೆ. ಆದರೆ ನಿಮ್ಮ ತಂದೆಗೆ ಈ ಗೋಚರವು ಒಳ್ಳೆಯದನ್ನೇ ಉಂಟು ಮಾಡಲಿದೆ. ಸಹೋದರ ಸಹೋದರಿಯರ ಜತೆಗೂ ಉತ್ತಮ ಸಂಬಂಧ ವೃದ್ಧಿಯಾಗಲಿದೆ .

ಪರಿಹಾರ – ಪ್ರತಿದಿನ ಸೂರ್ಯ ಮಂತ್ರವನ್ನು ಜಪಿಸುತ್ತಿರಿ.

 

ಕನ್ಯಾರಾಶಿ (Kanya)

 

ಸೂರ್ಯನು ಕನ್ಯಾ ರಾಶಿಯಿಂದ ಎಂಟನೇ ಭಾಗದಲ್ಲಿ ಗೋಚರಿಸಲಿದ್ದಾನೆ. ಈ ಕಾರಣದಿಂದ ನಿಮಗೆ ಶಾರೀರಿಕ ಸಮಸ್ಯೆಗಳು ಉಂಟಾಗಲಿವೆ. ಜ್ವರ ,ತಲೆನೋವು ಇವುಗಳ ಜೊತೆಗೆ  ಇನ್ನು ಬೇರೆ ರೀತಿಯ  ಖಾಯಿಲೆಗಳಿಂದ ಕೂಡ ನರಳಬೇಕಾಗುತ್ತದೆ. ನಿಮ್ಮ  ಖರ್ಚು ಹೆಚ್ಚಾಗುವ ಸಂಭವ ಇದೆ. ಜೊತೆಗೆ ನೀವು ಇಚ್ಛಿಸುವ  ಯಾತ್ರೆಯನ್ನು ಮಾಡುವ ಯೋಗವು ಕೂಡ ಇದೆ. ನೆನಪಿನಲ್ಲಿ ಇರಲಿ ನಿಮ್ಮ ಮಾತು ಆದಷ್ಟು ಮಿತವಾಗಿದ್ದರೆ ಒಳ್ಳೆಯದು. ದಂಪತಿಗಳ ಮನೆಯವರ ಜೊತೆ ಸಂಬಂಧಗಳು ಉತ್ತಮಗೊಳ್ಳುತ್ತವೆ. ಯಾವುದೇ ಕಾನೂನಿಗೆ ಸಂಬಂಧಪಟ್ಟ ಕೆಲಸ ಕಾರ್ಯಗಳನ್ನು ಮಾಡಲು ಹೋದರೆ ಸೋಲನ್ನು ಅನುಭವಿಸಬೇಕಾಗುತ್ತದೆ. ಇದರಲ್ಲಿ ನಿಮಗೆ ದೊಡ್ಡ ಸಮಸ್ಯೆ ಎದುರಾಗಬಹುದು.

ಪರಿಹಾರ – ಪ್ರತಿ ದಿನ ಭಗವಂತನಾದ ಶಿವನ ಆರಾಧನೆಯನ್ನು ಮಾಡಿ .

ತುಲಾ (Tula)

 

ಸೂರ್ಯನು ತುಲಾ ರಾಶಿಯಿಂದ ಏಳನೇ ಭಾಗದಲ್ಲಿ ಗೋಚರಿಸಲಿದ್ದಾನೆ. ಇದರಿಂದ ಜೀವನ ಸಂಗಾತಿಯ ಸಹಾಯದಿಂದ ಲಾಭವೂ ಪ್ರಾಪ್ತಿಯಾಗಲಿದೆ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ, ಗೌರವ ಹೆಚ್ಚಾಗಲಿದೆ. ಮುಂದೆ ನಿಮ್ಮ ಜೀವನ ಸಂಗಾತಿಯೂ ನಿಮ್ಮ ಮೇಲೆ ಕೋಪಗೊಳ್ಳುವ ಸಂಭವ ಇದೆ. ಆ ಸಮಯದಲ್ಲಿ ನೀವು ಸಮಾಧಾನದಿಂದ ಇರುವುದು ಒಳ್ಳೆಯದು. ಶಾಂತಿಯಿಂದ ಸಮಾಧಾನವಾಗಿದ್ದು ಜಗಳವಾಡದೆ ಇದ್ದರೆ ಉತ್ತಮ .ಈ ಸಮಯದಲ್ಲಿ ಹೊಸ ಸಂಬಂಧಗಳು ಮೂಡಿ ಬರಲಿವೆ. ಕೆಲಸ ಕಾರ್ಯಗಳಿಗೆ ಸಂಬಂಧಪಟ್ಟಂತೆ ವೃತ್ತಿ ಜೀವನದಲ್ಲಿ ಒಳ್ಳೆಯ  ಪರಿಣಾಮಗಳು ಬೀರುವ ಸಂಕೇತವಿದೆ.

ಪರಿಹಾರ – ಎಮ್ಮೆಗೆ ಗೋಧಿಯನ್ನು ತಿನ್ನಲು  ಕೊಡಿ.

ವೃಶ್ಚಿಕ (Vrushchika)

 

ಸೂರ್ಯನು ನಿಮ್ಮ ರಾಶಿಯಿಂದ ಆರನೇ ಭಾಗದಲ್ಲಿ ಗೋಚರವಾಗಲಿದ್ದಾನೆ. ಇದರಿಂದ ನಿಮ್ಮ ಸ್ವಭಾವದಲ್ಲಿ ಸಾಹಸ ಮಾಡುವ ಪ್ರವೃತ್ತಿ ವೃದ್ಧಿಯಾಗುವುದು. ನೀವು ಯಾವುದೇ ಸವಾಲುಗಳನ್ನು ಆದರೂ ಸಹ ಧೈರ್ಯದಿಂದ ಸ್ವೀಕರಿಸುತ್ತೀರಾ. ಅದರಿಂದ ಹಿಂದೆ ಸರಿಯುವುದಿಲ್ಲ . ನಿಮ್ಮ ವಿರೋಧಿಗಳು ಮತ್ತು ಶತ್ರುಗಳನ್ನು ಸರಳತೆಯಿಂದ ಪರಾಜಯ ಗೊಳಿಸುತ್ತೀರಿ. ಕಾರ್ಯ ಕ್ಷೇತ್ರದಲ್ಲಿ ಶುಭ ಸಮಾಚಾರ ಕೇಳಿ ಬರುವ ಸೂಚನೆ ಇದೆ. ವರಿಷ್ಠರು ನಿಮಗೆ ಸಹಾಯಕ್ಕೆ ಬರಲಿದ್ದಾರೆ. ನಿಮ್ಮ ಖರ್ಚು ಹೆಚ್ಚಾಗುವ ಸಂಭವ ಇದೆ .ಕೋರ್ಟ್ ಕಚೇರಿಗಳ ವಿಷಯಗಳಲ್ಲಿ ತೀರ್ಪು ನಿಮ್ಮ ಪಕ್ಷಕ್ಕೆ ಬರುವ ಸಂಭವವಿದೆ.

ಪರಿಹಾರ – ಸೂರ್ಯ ದೇವರಿಗೆ ಪ್ರತಿನಿತ್ಯ  ಜಲವನ್ನು ಅರ್ಪಿಸಿ.

 

ಧನು ರಾಶಿ (Dhanu)

 

ಸೂರ್ಯನು ನಿಮ್ಮ ರಾಶಿಯಿಂದ ಐದನೇ ಭಾಗದಲ್ಲಿ ಗೋಚರವಾಗಲಿದ್ದಾನೆ. ಇದರಿಂದ ನಿಮ್ಮ ಆದಾಯದ ಮೇಲೆ ಸಕಾರಾತ್ಮಕ ದೃಷ್ಟಿ ಮತ್ತು ಪರಿಣಾಮ ಬೀರಲಿದೆ. ಮಕ್ಕಳು ಈ ಸಮಯದಲ್ಲಿ ಉತ್ತಮವಾಗಿ ತಮ್ಮನ್ನು ತಾವು ಎಲ್ಲ ಕ್ಷೇತ್ರಗಳಲ್ಲಿಯೂ ಪ್ರದರ್ಶನ ಮಾಡಿಕೊಳ್ಳುತ್ತಾರೆ. ಪ್ರೇಮಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಸ್ವಲ್ಪ ಎಚ್ಚರವಾಗಿರುವುದು ಉತ್ತಮ. ಯಾಕೆಂದರೆ ಸಂಬಂಧಗಳ ಮಧ್ಯೆ ನಿಮ್ಮ ಅಹಂಕಾರ ಅಡ್ಡಿಯುಂಟು ಮಾಡಲಿದೆ. ಇದು ಇಬ್ಬರ ಮಧ್ಯೆ ಜಗಳಗಳನ್ನು ತಂದೊಡ್ಡುತ್ತದೆ. ನೌಕರಿಯನ್ನು ಬದಲಾಯಿಸುವ ಯೋಚನೆ ಮಾಡಲಿದ್ದೀರಿ, ಸಹೋದರ ಸಹೋದರಿಯರಿಂದ ಧನಲಾಭದ ಸಂಕೇತವು ನಿಮಗೆ ಲಭಿಸುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಈ ಗೋಚರ ತುಂಬಾ ಚೆನ್ನಾಗಿದೆ.

ಪರಿಹಾರ -ಭಗವಂತನಾದ ಶಿವನ ಪೂಜೆ ಮತ್ತು ಪ್ರಾರ್ಥನೆಯನ್ನು ಮಾಡಿ.

 

ಮಕರ (Makara)

 

ಸೂರ್ಯನು ನಿಮ್ಮ ರಾಶಿಯಿಂದ ನಾಲ್ಕನೇ ಭಾಗದಲ್ಲಿ ಗೋಚರಿಸಲಿದ್ದಾನೆ. ನೀವು ನಿಮ್ಮ ಪರಿವಾರದ ಜನರ ಮೇಲೆ ಕೋಪಗೊಳ್ಳುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಪರಿವಾರದ ವಾತಾವರಣವೂ ಹದಗೆಡಲಿದೆ. ನಿಮ್ಮ ತಾಯಿಯ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ. ಆದ್ದರಿಂದ ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಪ್ರದರ್ಶನವನ್ನು  ನೋಡಿ ಎಲ್ಲರೂ ಹೊಗಳುವರು. ನಿಮಗೆ  ಒಂದು ಸಂತೋಷದ ಸುದ್ದಿ ಕೇಳುವ ಸಂಭವ ಇದೆ.

ಪರಿಹಾರ – ಶನಿ ದೇವರಿಗೆ ಸಾಸಿವೆ ಎಣ್ಣೆಯನ್ನು .

 

ಕುಂಭರಾಶಿ (Kumbha)

 

ಕುಂಭ ರಾಶಿಯಿಂದ ಮೂರನೇ ಭಾವದಲ್ಲಿ ಸೂರ್ಯನು ಗೋಚರವಾಗಲಿದೆ. ಈ ಗೋಚರವು ನಿಮ್ಮ ಮನಸ್ಸಿನ ಒಳಗೆ ಶಕ್ತಿ ಮತ್ತು ಹುಮ್ಮಸ್ಸನ್ನು ತುಂಬುತ್ತದೆ . ನೀವು ಮಾತನಾಡುವ ಶೈಲಿಯಲ್ಲಿ ದೊಡ್ಡ ಬದಲಾವಣೆ ಕಾಣಲಿದೆ. ಬೇರೆಯವರ ಮುಂದೆ ನೀವು ಉತ್ತಮವಾದ ಶೌರ್ಯ ಮತ್ತು ಸಾಹಸವನ್ನು ಪ್ರದರ್ಶಿಸಲಿದ್ದೀರಿ. ನೀವು ಯಾವುದೋ ಒಂದು ಸಣ್ಣ ಯಾತ್ರೆಗೆ ಹೋಗಲಿದ್ದೀರಿ. ನಿಮ್ಮ ತಂದೆಯ ಆರೋಗ್ಯದ ಕಡೆಗೆ ಗಮನಹರಿಸಿ.

ಪರಿಹಾರ – ಅರಳಿ ಮರಕ್ಕೆ ನೀರನ್ನು ಅರ್ಪಿಸಿ.

 

ಮೀನರಾಶಿ (Meena)

 

ಸೂರ್ಯನು ನಿಮ್ಮ ರಾಶಿಯಿಂದ ಎರಡನೇ ಭಾವದಲ್ಲಿ ಗೋಚರವಾಗಲಿದೆ. ನಿಮ್ಮ ಮಾತನ್ನು  ಹಿಡಿತದಲ್ಲಿ ಇಟ್ಟುಕೊಳ್ಳಿ. ಯಾಕೆಂದರೆ ನಿಮ್ಮ ಮಾತು ಕಹಿ ಅನುಭವವನ್ನು   ಉಂಟಾಗಬಹುದು. ಈ ಕಾರಣದಿಂದ ಕೆಲವು ಜನರು ನಿಮ್ಮಿಂದ ಬೇಸರಗೊಳ್ಳುತ್ತಾರೆ ಮತ್ತು ದುಃಖಿತರಾಗುತ್ತಾರೆ. ಸಂಬಂಧಗಳಲ್ಲಿ ನಿಮ್ಮ ಮಾತಿನ ಪ್ರಭಾವ ಬೀರಲಿದೆ. ಆರೋಗ್ಯಕ್ಕೆ ಸಂಬಂಧಪಟ್ಟಂತೆ ಈ ಗೋಚರವು ಅಷ್ಟಾಗಿ ಒಳ್ಳೆಯದಲ್ಲ. ನೀವು ತುಂಬಾ ಸುಸ್ತಾಗಿ  ಹೋಗುವ ಸಂಭವವೂ ಇರುತ್ತದೆ. ಸರಕಾರಿ ಕೆಲಸಗಳಲ್ಲಿ ಅಥವಾ ಸರ್ಕಾರದ ವತಿಯಿಂದ ನಿಮಗೆ ಲಾಭವಾಗಬಹುದು. ಈ ಸಮಯದಲ್ಲಿ ಹಣವನ್ನು ಬೇರೆಯವರಿಂದ ಪಡೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು. ಸಂಬಂಧಗಳಲ್ಲಿ ಸ್ವಲ್ಪ ಬಿರುಕು ಉಂಟಾಗುವ ಸಂಭವ ಇದೆ.

ಪರಿಹಾರ-  ಅರಳಿ ವೃಕ್ಷಕ್ಕೆ ಪೂಜೆಯನ್ನು ಮತ್ತು ಪ್ರಾರ್ಥನೆಯನ್ನು ಸಲ್ಲಿಸಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top