ಸಮಾಚಾರ

ಇಂಗ್ಲೆಂಡಿನಿಂದ ಬಂದು ಟಗರು ಚಿತ್ರವನ್ನು ವೀಕ್ಷಿಸಿದ ಸ್ಟಾರ್ ಕ್ರಿಕೆಟ್ ಆಟಗಾರ!

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸೂರಿ ನಿರ್ದೇಶನದ ಟಗರು ಚಿತ್ರ ಭರಪೂರ ಗೆಲುವನ್ನು ತನ್ನದಾಗಿಸಿಕೊಂಡಿದೆ. ನಮ್ಮ ನಡುವಿನವೆ ಅನ್ನಿಸುವಂಥಾ ಪಾತ್ರಗಳು, ಭಿನ್ನವದ ನಿರೂಪಣಾ ಶೈಲಿ, ಅಚ್ಚರಿಯಾಗುವಂಥಾ ಪಾತ್ರಗಳಿಂದ ಕನ್ನಡದ ಗಡಿಯಾಚೆಗೂ ಟಗರಿನ ಖದರ್ ಹರಡಿಕೊಂಡಿದೆ. ಶಿವಣ್ಣನ ಎನರ್ಜಿಟಿಕ್ ನಟನೆ, ಮಾನ್ವಿತಾ, ಧನಂಜಯ್, ವಸಿಷ್ಠರಂತಹ ಮನೋಜ್ಞ ಅಭಿನಯ, ಸೂರಿಯ ಪಾತ್ರಕಟ್ಟುವ ಕುಸುರಿಗೆ ಪ್ರೇಕ್ಷಕರು ಮನಸೋತಿದ್ದಾರೆ. ಅಭಿಮಾನದಾಚೆಗೆ ನೋಡಿಸಿಕೊಳ್ಳುತ್ತಿರುವ ಟಗರು ಇದೀಗ ಯಶಸ್ವಿ 50 ದಿನಗಳನ್ನು ಕಂಪ್ಲೀಟ್ ಮಾಡಿ ನೂರನೇ ದಿನದತ್ತ ದಾಪುಗಾಲಿಡುತ್ತಿದೆ.

 

 

ಇಂಥಾದ್ದೊಂದು ಪುಷ್ಕಳ ಗೆಲುವನ್ನು ಕಂಡಿರುವ ಟಗರು ಚಿತ್ರವನ್ನು ನೋಡಲು ಕೇವಲ ಕನ್ನಡದ ಸಿನಿಪ್ರೇಮಿಗಳು ಮಾತ್ರವಲ್ಲದೆ ಪರಭಾಷಾ ಚಿತ್ರರಸಿಕರು ಕೂಡ ಟಗರನ್ನು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಆದರೆ ಇದೀಗ ಟಗರು ಚಿತ್ರವನ್ನು ನೋಡಲು ಇಂಗ್ಲೆಂಡಿನ ಸ್ಟಾರ್ ಕ್ರಿಕೆಟ್ ಆಟಗಾರನೇ ಬಂದಿರುವುದು ನಿಜಕ್ಕೊ ಅಚ್ಚರಿ ಮೂಡಿಸಿದೆ.. ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಒವೈಸ್ ಷಾ ಬೆಂಗಳೂರಿಗೆ ಬಂದಿದ್ದು ಚಿತ್ರವನ್ನು ನೋಡಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರಂತೆ. ನಗರದ ಮಾಗಡಿ ರಸ್ತೆಯಲ್ಲಿರುವ GT ಮಾಲಿನಲ್ಲಿ ಷಾ ಪ್ರೇಕ್ಷಕರೊಂದಿಗೆ ನೆನ್ನೆ ಮದ್ಯಾಹ್ನ ಚಿತ್ರವನ್ನು ವೀಕ್ಷಿಸಿದ್ದಾರೆ. ಇದಕ್ಕೂ ಮುಂಚೆ ಐದಾರು ತಿಂಗಳುಗಳ ಹಿಂದೆ ಒವೈಸ್ ಷಾ ಅವರು ಕಿಚ್ಚ ಸುದೀಪ್ ಅವರನ್ನು ಬೆಂಗಳೂರಿಗೆ ಬಂದು ಭೇಟಿ ಮಾಡಿ ಹೋಗಿದ್ದರು.

 

 

ಒವೈಸ್ ಷಾ ಅವರು ಟಗರು ಚಿತ್ರವನ್ನು ನೋಡಿರುವುದರ ಕುರಿತು ಖುದ್ದು ಚಿತ್ರದ ನಿರ್ಮಾಪಕ ಕೆ ಪಿ ಶ್ರೀಕಾಂತ್ ಅವರೇ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಟ್ವೀಟ್ ಮಾಡಿದ್ದು “ಟಗರು ಚಿತ್ರವನ್ನು ನೋಡಲು ಇಂಗ್ಲೆಂಡಿನಿಂದ ಬೆಂಗಳೂರಿಗೆ ಬಂದಿದ್ದಕ್ಕೆ ಒವೈಸ್ ಷಾ ಅವರಿಗೆ ಧನ್ಯವಾದಗಳು. ಅವರು ಟಗರು ಚಿತ್ರವನ್ನು ಪ್ರೇಕ್ಷಕರ ಜೊತೆ ನೋಡಿ ಸಕತ್ ಎಂಜಾಯ್ ಮಾಡಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top