ಸಮಾಚಾರ

ಪುನೀತ್ “ನಟಸಾರ್ವಭೌಮ” ತಂಡದಿಂದ ಪ್ರತಿಭಾನ್ವಿತರಿಗೆ ಒಲಿದುಬಂತು ಸುವರ್ಣಾವಕಾಶ!

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಪ್ರೇಕ್ಷಕ ವಲಯದಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿರೋ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಮುಂದಿನ ಚಿತ್ರ ನಟಸಾರ್ವಭೌಮ ನಾನಾ ರೀತಿಯಲ್ಲಿ ಸುದ್ದಿಯಲ್ಲಿದೆ. ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಸಾಗುತ್ತಿದ್ದು ಚಿತ್ರ ತುಂಬಾ ರಿಚ್ ಆಗಿ ತೆರೆ ಮೇಲೆ ತರಲು ಚಿತ್ರತಂಡ ಶ್ರಮಿಸುತ್ತಿದೆ. ಈ ಮಧ್ಯೆ ಚಿತ್ರತಂಡದಿಂದ ಪ್ರತಿಭಾವಂತರಿಗೆ ಸುವರ್ಣಾವಕಾಶ ಒಲಿದುಬಂದಿದ್ದು ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆಯುವ ಅವಕಾಶವನ್ನು ನಿರ್ದೇಶಕ ಪವನ್ ಒಡೆಯರ್ ಮಾಡಿ ಕೊಟ್ಟಿದ್ದಾರೆ.

 

 

ಈ ಬಗ್ಗೆ ಖುದ್ದು ಪವನ್ ಒಡೆಯರ್ ಅವರೇ ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದು “ನನ್ನ ನಿರ್ದೇಶನದ ನಟಸಾರ್ವಭೌಮ ಚಿತ್ರಕ್ಕೆ ಹೊಸಬರಿಂದ ಹಾಡು ಬರೆಸುವ ಇರಾದೆ ಇದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಿನಿಮಾಗೆ ಹಾಡು ಬರೆಯುವ ಅದೃಷ್ಟ ಯಾರಿಗೆ ಬೇಕು? ನಾಳೆ ರಾತ್ರಿ 8ಕ್ಕೆ ನನ್ನ ಪೇಜ್ ನಲ್ಲಿ ಲೈವ್ ಬರಲಿದ್ದೇನೆ. ಇದರ ಬಗ್ಗೆ ಮತ್ತಷ್ಟು ಚರ್ಚಿಸೋಣ 👍🏻” ಎಂದು ತಿಳಿಸಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲು ನಿರ್ದೇಶಕ ಪವನ್ ಒಡೆಯರ್ ಅವರು ರಾತ್ರಿ ಎಂಟಕ್ಕೆ ಫೇಸ್ಬುಕ್ ಲೈವ್ ಬರಲಿದ್ದು ಸಿನಿಮಾಗೆ ಹಾಡನ್ನು ಬರೆಯುವಾ ಆಸಕ್ತಿ ಹೊಂದಿರುವವರು ಲೈವ್ ವಿಡಿಯೋವನ್ನು ವೀಕ್ಷಿಸಬಹುದು.

 

 

ಚಿತ್ರವನ್ನು ಶಾಸಕ ಮುನಿರತ್ನ ಅರ್ಪಿಸುತ್ತಿದ್ದು ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅಪ್ಪುಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯಾಗಿದ್ದು ಹಿರಿಯ ನಟಿ ಬಿ. ಸರೋಜಾದೇವಿ ಕೂಡ ವಿಶೇಷ ಪಾತ್ರವೊಂದನ್ನು ಮಾಡಿದ್ದಾರೆ, ಇವರ ಜೊತೆ ಚಿಕ್ಕಣ್ಣ, ರವಿಶಂಕರ್, ಅಚ್ಚುತ್ ಕುಮಾರ್ ಸೇರಿದಂತೆ ಸಾಕಷ್ಟು ಕಲಾವಿದರು ಬಣ್ಣ ಹಚ್ಚಲಿದ್ದಾರೆ. ಚಿತ್ರಕ್ಕೆ ಕೋಟಿಗೊಬ್ಬ ೨ ಖ್ಯಾತಿಯ ಡಿ.ಇಮಾನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top