ಸಮಾಚಾರ

ಮತ್ತೊಮ್ಮೆ ಸಂಚಲನ ಮೂಡಿಸಿದ ವೈರಲ್ ಹುಡುಗಿ ಪ್ರಿಯಾ ವಾರಿಯರ್:ಆದ್ರೆ ಇದು ಹಾಡಲ್ಲ..!

ಹುಬ್ಬು ಹಾರಿಸೋ ವೀಡಿಯೋ ಮೂಲಕ ದೇಶಾದಂತ ಪಡ್ಡೆಗಳನ್ನು ಬಿಸಿಯೇರಿಸುತ್ತಲೇ ಏಕಾ ಏಕಿ ಸ್ಟಾರ್ ಆದವಳು ಪ್ರಿಯಾ ವಾರಿಯರ್. ಒಂದೇ ದಿನದಲ್ಲಿ ಭಾರೀ ಪ್ರಚಾರ ಪಡೆದು ನ್ಯಾಷನಲ್ ಕ್ರಶ್ ಅಂತ ಬಿಂಬಿತಳಾಗಿರೋ ಈ ಹುಡುಗಿಯೀಗ ಬೇರೆ ಬೇರೆ ಭಾಷೆಗಳಲ್ಲಿ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾಳೆ ಎನ್ನುವ ಸುದ್ದಿಗಳು ಕೇಳುತ್ತಿದ್ದರೂ ಯಾವ ಸುದ್ದಿಯೂ ವಾಸ್ತವಕ್ಕೆ ಬಂದಿಲ್ಲ..

 

 

ಈಗತಾನೇ ಒಂದು ಚಿತ್ರದ ಮಲೆಯಾಳಂ ಚಿತ್ರರಂಗಕ್ಕೆ ಅಡಿಯಿರಿಸಿರುವ ಪ್ರಿಯಾ ವಾರಿಯರ್ ಎಂಬ ಹುಡುಗಿ ಇಪ್ಪತೈದು ಚಿತ್ರಗಳಲ್ಲಿ ನಟಿಸಿದರೂ ಸಿಗಲಾರದ ಪ್ರಚಾರವನ್ನು ಇಪ್ಪತ್ತು ಸೆಕೆಂಡುಗಳ ವೀಡಿಯೋ ಮೂಲಕವೇ ಪಡೆದುಕೊಂಡಿದ್ದಾಳೆ. ಒಂದು ಹಗಲು ಮತ್ತು ರಾತ್ರಿ ಸರಿಯುವಷ್ಟರಲ್ಲೇ ಈ ಹುಡುಗಿ ಪಡೆದ ಪಬ್ಲಿಸಿಟಿ ಕಂಡು ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರೆಟಿಗಳೆಲ್ಲರೂ ದಂಗೆದ್ದು ಹೋಗಿರೋದಂತೂ ಸತ್ಯ! ಆದರೆ ವಿಷಯ ಅದಲ್ಲ, ಪ್ರಿಯಾ ಸ್ಟೈಲ್ ಅನುಸರಿಸಿ ವಿಡಿಯೋಗಳನ್ನು ಮಾಡುತ್ತಿರುವವರ ಸಂಖ್ಯೆ ಈಗಲೂ ಕಡಿಮೆಯಾಗಿಲ್ಲ ಎನ್ನುವುದೇ ಸೋಜಿಗ.

 

 

ಇಂತಿಪ್ಪ ಪ್ರಿಯಾ ಪ್ರಕಾಶ್ ಇದೀಗ ಮತ್ತೊಮ್ಮೆ ಎಲ್ಲರ ಗಮನ ಸೆಳೆಯುತ್ತಿದ್ದು ಆಕೆ ನಟಿಸಿರುವ ಹೊಸ ಟಿವಿ ಜಾಹಿರಾತಿನ ಮೂಲಕ ಮತ್ತೊಮ್ಮೆ ಟ್ರೋಲ್ ಪ್ರಿಯರ ಬಾಯಿಗೆ ಆಹಾರವಾಗುತ್ತಿದ್ದಾರೆ. ಮಂಚ್ ಜಾಹಿರಾತಿನಲ್ಲಿ ಸೂಪರ್ ಎಕ್ಸ್’ಪ್ರೆಶನ್ ನೀಡುವ ಮೂಲಕ ಪ್ರಿಯಾ ಪ್ರಕಾಶ್ ಮತ್ತೊಮ್ಮೆ ಇಂಟರ್ ನೆಟ್ ನಲ್ಲಿ ವೈರಲ್ ಆಗಿದ್ದು ಈ ಜಾಹಿರಾತಿನ ವಿಡಿಯೋದೊಂದಿಗೆ ಸಿನಿಮಾ ವಿಡಿಯೋಗಳನ್ನು ಜೋಡಿಸಿ ಟ್ರೋಲ್ ಮಾಡಿರುವ ಸ್ಪೂಫ್ ವಿಡಿಯೋಗಳು ಈಗ ಎಲ್ಲೆಡೆ ಹರಿದಾಡುತ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top