ಹೆಚ್ಚಿನ

ಮಕ್ಕಳನ್ನು ತುಂಬಾ ಮುದ್ದುಮಾಡುವ ಪೋಷಕರು ತಪ್ಪದೆ ಇದನ್ನೊಮ್ಮೆ ಓದಿ…!

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಮಕ್ಕಳನ್ನು ತುಂಬಾ ಮುದ್ದುಮಾಡುವವರು ಈ ಕತೆಯನ್ನೊಮ್ಮೆ ಓದಿ…!

ಒಂದಾನೊಂದು ಕಾಲದಲ್ಲಿ, ಇಬ್ಬರು ನೆರೆಹೊರೆಯವರು ಪರಸ್ಪರ ಪಕ್ಕದಲ್ಲಿ ವಾಸಿಸುತ್ತಿದ್ದರು. ಅವರಲ್ಲಿ ಒಬ್ಬರು ನಿವೃತ್ತ ಶಿಕ್ಷಕರಾಗಿದ್ದರು ಮತ್ತು ಇನ್ನೊಬ್ಬರು ತಂತ್ರಜ್ಞಾನದಲ್ಲಿ ಸಾಕಷ್ಟು ಆಸಕ್ತಿಯನ್ನು ಹೊಂದಿದ್ದ ವಿಮಾ ಏಜೆಂಟ್ ಆಗಿದ್ದರು.ಇಬ್ಬರೂ ತಮ್ಮ ಮನೆಯ ಅಂಗಳದಲ್ಲಿ ವಿವಿಧ ರೀತಿಯ ಸಸ್ಯಗಳನ್ನು ಹಾಕಿದ್ದರು.ನಿವೃತ್ತ ಶಿಕ್ಷಕ ತನ್ನ ಸಸ್ಯಗಳಿಗೆ ಸಣ್ಣ ಪ್ರಮಾಣದಲ್ಲಿ ನೀರನ್ನು ಹಾಕುತ್ತಿದನು ಮತ್ತು ಯಾವಾಗಲೂ ಸಸ್ಯಗಳಿಗೆ ಸಂಪೂರ್ಣ ಗಮನ ಕೊಡುತ್ತಿರಲಿಲ್ಲ, ಆದರೆ ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿದ್ದನು ತನ್ನ ಸಸ್ಯಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹಾಕುತ್ತಿದ್ದನು. ಮತ್ತು ಅವುಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು.
ನಿವೃತ್ತ ಶಿಕ್ಷಕನ ಸಸ್ಯಗಳು ಸರಳವಾಗಿದ್ದರು ಉತ್ತಮವಾಗಿ ಕಾಣುತ್ತಿದ್ದವು. ಆದರೆ ವಿಮಾ ಏಜೆಂಟನ ಸಸ್ಯಗಳು ತುಂಬಾ ಚನ್ನಾಗಿ ಬೆಳೆದಿದ್ದವು ಮತ್ತು ಹೆಚ್ಚು ಹಸಿರು ಬಣ್ಣದಿಂದ ಕೂಡಿದ್ದವು.ಒಂದು ದಿನ ರಾತ್ರಿಯಲ್ಲಿ ಒಂದು ಸಣ್ಣ ಚಂಡಮಾರುತದ ಕಾರಣ ಭಾರಿ ಮಳೆ ಮತ್ತು ಗಾಳಿ ಬಂದಿತ್ತು.ಮರುದಿನ ಬೆಳಿಗ್ಗೆ, ನೆರೆಹೊರೆ ಇಬ್ಬರೂ ತಮ್ಮ ಮನೆಯಂಗಳಕ್ಕೆ ಗಿಡಗಳನ್ನು ಪರೀಕ್ಷಿಸಲು ಹೊರಬಂದರು.ವಿಮಾ ಏಜೆಂಟ್ನ ಸಸ್ಯಗಳು ಬೇರುಗಳಿಂದ ಸಂಪೂರ್ಣವಾಗಿ ಹೊರಬಂದು ನಾಶಗೊಂಡಿದ್ದವು.ಆದರೆ, ನಿವೃತ್ತ ಶಿಕ್ಷಕನ ಸಸ್ಯಗಳೆಲ್ಲವೂ ಹಾನಿಗೊಳಗಾಗಲಿಲ್ಲ ಮತ್ತು ದೃಢವಾಗಿ ನಿಂತಿದ್ದವು.

ವಿಮಾ ಏಜೆಂಟ್ ಅದನ್ನು ನೋಡಲು ಆಶ್ಚರ್ಯಗೊಂಡು, ನಿವೃತ್ತ ಶಿಕ್ಷಕನ ಬಳಿ ಹೋಗಿ “ನಾವಿಬ್ಬರೂ ಒಂದೇ ರೀತಿಯ ಸಸ್ಯಗಳನ್ನು ಒಟ್ಟಿಗೆ ಬೆಳೆಯುತ್ತಿದ್ದೆವು, ನಾನು ನಿಜವಾಗಿಯು ನಿಮ್ಮ ಗಿಡಕ್ಕಿಂತ ಉತ್ತಮವಾದ ಸಸ್ಯಗಳನ್ನು ಬೆಳೆದಿದ್ದೇನು ಮತ್ತು ಅವುಗಳಿಗೆ ನಿಮ್ಮ ಸಸ್ಯಗಳಿಗಿಂತ ಹೆಚ್ಚು ನೀರು ಹಾಕಿದ್ದೇನು ಆದರೂ ನನ್ನ ಸಸ್ಯಗಳು ಬೇರುಗಳ ಸಮೇತ ಹೊರಗೆ ಕಿತ್ತುಕೊಂಡು ಬಂದಿವೆ. ಆದರೆ ನಿಮ್ಮ ಇನ್ನು ಸಹ ಚನ್ನಾಗಿಯೇ ಇವೆಯಲ್ಲ ಇದು ಹೇಗೆ ಸಾಧ್ಯ?” ಎಂದು ಕೇಳಿದನು.
ಆಗ ಆ ನಿವೃತ್ತ ಶಿಕ್ಷಕನು ಮುಂದೆ ಬಂದು ನಗುತ್ತ “ನೀವು ನಿಮ್ಮ ಸಸ್ಯಗಳಿಗೆ ಸಾಕಾಗುವಷ್ಟು ನೀರನ್ನು ಹಾಕಿದ್ದೀರಿ ಮತ್ತು ಅವುಗಳನ್ನು ತುಂಬಾ ಚನ್ನಾಗಿ ನೋಡಿಕೊಂಡಿರಿ. ಇದು ಅದರ ಬೇರುಗಳು ಕೆಲಸ ಮಾಡದಂತೆ ಮಾಡಿತ್ತು. ನಾನು ನನ್ನ ಗಿಡಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ನೀರನ್ನು ಹಾಕುತ್ತಿದ್ದರಿಂದ ಅದರ ಬೇರುಗಳಿಗೆ ನೀರಿನ ಅಂಶವು ಸಾಕಾಗದೆ ಇನ್ನು ಆಳಕ್ಕೆ ಇಳಿದು ನೀರಿನ ಅಂಶವನ್ನು ಹೀರಿಕೊಂಡು ಗಟ್ಟಿಯಾಗಿ ಬೇರು ಬಿಟ್ಟಿದ್ದವು. ಹಾಗಾಗಿ ನನ್ನ ಸಸ್ಯೆಗಳು ಇನ್ನು ಚನ್ನಾಗಿವೆ” ಎಂದು ಹೇಳಿದರು

ನೀತಿ: ಇಲ್ಲಿ ಸಸ್ಯಗಳನ್ನು ಮಕ್ಕಳಿಗೆ ಹೋಲಿಕೆ ಮಾಡಬೇಕು.ಮಕ್ಕಳನ್ನು ತುಂಬಾ ಮುದ್ದು ಮಾಡಿ ಎಲ್ಲಾ ಸೌಲಭ್ಯವನ್ನು ಅವರಿಗೆ ನೀಡಿದರೆ, ಅವರಿಗೆ ಕೆಲವು ವಸ್ತುಗಳನ್ನು ಹೇಗೆ ಸಂಪಾದಿಸಬೇಕು ಅದರ ಹಿಂದೆ ಎಷ್ಟು ಕಷ್ಟ ಇರುತ್ತೆ ಎಂದು ಅವರಿಗೆ ಗೊತ್ತಾಗೋದಿಲ್ಲ.ಅವರು ತಮ್ಮನ್ನು ತಾವು ತೊಡಗಿಸಿಕೊಳ್ಳಲು ಮತ್ತು ಗೌರವಿಸಲು ಕಲಿಯುವುದಿಲ್ಲ.ಕೆಲವೊಮ್ಮೆ ಅವುಗಳನ್ನು ನೀಡುವ ಬದಲು ಮಾರ್ಗದರ್ಶನ ಮಾಡುವುದು ಉತ್ತಮವಾಗಿದೆ. ನಡೆಯುವುದು ಹೇಗೆ ಎಂದು ಅವರಿಗೆ ಕಳಿಸಿ ಸಾಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top