ಸಮಾಚಾರ

ಹೋಟೆಲ್ ಕಾರ್ಮಿಕರೊಂದಿಗೆ ಕ್ರಿಕೆಟ್ ಆಡಿದ ಕ್ರಿಕೆಟ್ ದೇವರು: ವಿಡಿಯೋ ವೈರಲ್.

ಅಂತಾರಾಷ್ಟ್ರೀಯ ಕ್ರಿಕೆಟ್’ನ ಜೀವಂತ ದಂತಕತೆ, ಕ್ರಿಕೆಟ್ ದೇವರು ಎಂತಲೇ ಕರೆಸಿಕೊಳ್ಳುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಇತ್ತೀಚಿಗೆ ಹೋಟೆಲ್ ಕಾರ್ಮಿಕರ ಜೊತೆಯಲ್ಲಿ ರಸ್ತೆಬದಿಯಲ್ಲಿ ಗಲ್ಲಿ ಕ್ರಿಕೆಟ್ ಆಡಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

ಮುಂಬೈನಲ್ಲಿನ ಹೋಟೆಲ್ ವೊಂದರ ಕೆಲಸಗಾರರ ಜೊತೆ ಬ್ಯಾಟ್ ಹಿಡಿದು ಕ್ರಿಕೆಟ್ ಆಡಿರುವ ಸಚಿನ್ ಬಹಳ ಖುಷಿಯಿಂದಲೇ ಅವರ ಜೊತೆ ಆಟವಾಡಿದ್ದಾರೆ. ತಾನೊಬ್ಬ ಅಂತಾರಾಷ್ಟ್ರೀಯ ಮಟ್ಟದ ಅಗ್ರಮಾನ್ಯ ಕ್ರಿಕೆಟ್ ಪ್ಲೇಯರ್ ಎಂಬ ಹಮ್ಮು ಇಲ್ಲದೆ ರಸ್ತೆಯಲ್ಲಿ ಬ್ಯಾರಿಕೇಡ್ ಆನ್ ವಿಕೆಟ್ ಮಾಡಿಕೊಂಡು ಅಲ್ಲಿನ ಹುಡಗರ ಹತ್ತಿರವಿದ್ದ ಬ್ಯಾಟನ್ನೇ ಹಿಡಿದು ಸಚಿನ್ ಕ್ರಿಕೆಟ್ ಆಡಿರುವುದು ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

 

 

ಹೋಟೆಲ್ ಹುಡುಗರ ಜೊತೆ ಕ್ರಿಕೆಟ್ ಆಡುತ್ತಾ ಖುಷಿ ಪಡುತ್ತಿರುವ ಸಚಿನ್ ವಿಡಿಯೋವನ್ನು ಅವರ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದು “ಬಾಲ್ಯದ ದಿನಗಳಂತೆ ನೀನು ಮತ್ತೆ ಎಂಜಾಯ್ ಮಾಡುತ್ತಿರುವುದನ್ನು ನೋಡಲು ಖುಷಿಯಾಗುತ್ತದೆ”. ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಅಪ್ಲೋಡ್ ಆದ ಕೆಲವೇ ಗಳಿಗೆಯಲ್ಲಿ ಲಕ್ಷಾಂತರ ಅಭಿಮಾನಿಗಳು ವೀಕ್ಷಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top