ಸಮಾಚಾರ

ಆಸಿಫಾ ಅತ್ಯಾಚಾರ: ಸನ್ನಿ ಶೇರ್ ಮಾಡಿರುವ ಈ ಫೋಟೋ ನೋಡಿದರೆ ಕಣ್ಣಂಚಲ್ಲಿ ನೀರು ಬರದೇ ಇರೋದಿಲ್ಲ!

ಜಮ್ಮು ಕಾಶ್ಮೀರದಲ್ಲಿ ದೇವಸ್ಥಾನದೊಳಗೇ ಏಳು ವರ್ಷದ ಪುಟ್ಟ ಹೆಣ್ಣು ಮಗುವಿನ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಿದ ಘಟನೆ ಪ್ರಪಂಚದ ಮುಂದೆ ಭಾರತ ದೇಶ ತಲೆ ತಗ್ಗಿಸಿ ನಿಲ್ಲುವಂತೆ ಮಾಡಿದೆ. ಮಕ್ಕಳನ್ನು ದೇವರೆನ್ನುತ್ತಾರಲ್ಲಾ? ಅದೇ ದೇವರನ್ನು ದೇವಸ್ಥಾನದೊಳಗೇ ಕೂಡಿ ಹಾಕಿ ಚಿತ್ರ ಹಿಂಸೆ ನೀಡಿ, ಗ್ಯಾಂಗ್ ರೇಪ್ ಮಾಡಿ ಕೊಂದ ದುಷ್ಟತನ ಮನುಷ್ಯತ್ವ ಇರುವ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ನಂಬಿಕೆ ಮತ್ತು ಶ್ರದ್ಧಾ ಭಕ್ತಿಯ ಕೇಂದ್ರವಾದ ದೇವಸ್ಥಾನದೊಳಗೆ ಇಂಥಾದ್ದೊಂದು ಭೀಭತ್ಸ ಘಟನೆ ನಡೆದಿರೋದು ಆಘಾತಕಾರಿ ವಿಚಾರ.

 

 

ಈಗತಾನೇ ಕಣ್ಣರಳಿಸಿ ಜಗತ್ತನ್ನು ನೋಡಬೇಕಿದ್ದ ಆಸಿಫಾ ಎಂಬ ಏಳು ವರ್ಷದ ಪುಟ್ಟ ಹುಡುಗಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ಕಲ್ಲಿನಿಂದ ತಲೆ ಜಜ್ಜಿ ಕೊಂದ ಪಾಪಿಗಳಿಗೆ ನಿಜಕ್ಕೂ ಅತಿಘೋರ ಶಿಕ್ಷೆಯಾಗಬೇಕಿದೆ. ದೇವರು ಧರ್ಮಗಳ ಹೆಸರಲ್ಲಿ ಇಂಥಾ ಪಾತಕ ಕೆಲಸ ಮಾಡುವವರು ಅದ್ಯಾವ ಧರ್ಮಕ್ಕೆ ಸೇರಿದವರೇ ಆಗಿದ್ದರೂ ಸಾರ್ವಜನಿಕವಾಗಿಯೇ ಭೀಕರವಾಗಿ ಕೊಲ್ಲುವಂಥಾ ಶಿಕ್ಷೆ ವಿಧಿಸಬೇಕು ಎಂಬ ಕೂಗು ಇಡೀ ದೇಶದ್ಯಾಂತ ಕೇಳಿಬರುತ್ತಿದೆ. ವಿವಿಧ ಚಿತ್ರರಂಗಗಳ ನಟ, ನಟಿಯರು ಕೂಡ ಈ ಮಗುವಿನ ಸಾವಿಗೆ ಕಾರಣರಾದವರಿಗೆ ಸೂಕ್ತ ಶಿಕ್ಷೆ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಆದರೆ ಬಾಲಿವುಡ್ ನಟಿ ಸನ್ನಿ ಲಿಯೊನಿ ಮಾತ್ರ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ತಮ್ಮ ಮಗಳ ಫೋಟೋ ಎಲ್ಲರ ಕಣ್ಣಂಚನ್ನು ಒದ್ದೆಮಾಡುತ್ತಿದೆ.

 

 

ಸನ್ನಿ ಲಿಯೋನ್ ಅಂದಾಕ್ಷಣ ರೋಮ ರೋಮವೂ ರೋಮಾಂಚವಾದಂತಾಗಿ ಕುಣಿದಾಡುವ ಪಡ್ಡೆಗಳು, ಒಳಗೊಳಗೇ ಸಂಭ್ರಮಿಸುವ ಮಡಿವಂತರಿಗೇನೂ ಇಲ್ಲಿ ಕೊರತೆ ಇಲ್ಲ. ಆದರೆ ಇದೆಲ್ಲದರಾಚೆಗೆ ಸನ್ನಿ ಲಿಯೋನ್‌ಗೊಂದು ಮಾನವೀಯ ಮುಖವಿದೆ. ಯಾರದೋ ಸಂಕಟವನ್ನು ತನ್ನದೆಂದುಕೊಳ್ಳುವ, ಮತ್ಯಾರದೋ ಕೂಸನ್ನು ಎದೆಗವುಚಿಕೊಂಡು ಸಂಭ್ರಮಿಸುವ ಅಮ್ಮನಿದ್ದಾಳೆ ಎಂಬುವುದು ಆಕೆ ಶೇರ್ ಮಾಡಿರುವ ವಿಚಾರದಿಂದಲೂ ಸಾಬೀತಾಗಿದೆ.

 

 

ಮಗಳು ನಿಶಾಳನ್ನು ತಮ್ಮ ಎರಡು ಕೈಗಳಿಂದ ತನ್ನ ಎದೆಯಲ್ಲಿ ಅವುಚಿ ತೆಗೆಸಿಕೊಂಡಿರುವ ಈ ಫೋಟೋವನ್ನು ಸನ್ನಿ ಲಿಯೋನ್ ಶೇರ್ ಮಾಡಿದ್ದು “‘ಮಗಳೇ, ನಾನು ನಿನ್ನನ್ನು ಎಲ್ಲಾನೀಚ ಶಕ್ತಿಗಳಿಂದ ಕಾಪಾಡುತ್ತೇನೆಂದು ನನ್ನ ಆತ್ಮಸಾಕ್ಷಿಯಾಗಿ ನಿನಗೆ ಪ್ರಮಾಣ ನೀಡುತ್ತೆನೆ. ಮಗಳೇ, ನಿನ್ನನ್ನು ರಕ್ಷಿಸುವುದಕ್ಕೋಸ್ಕರ ನನ್ನ ಪ್ರಾಣವನ್ನೇ ಬಿಡಲೂ ಸಿದ್ಧ. ಸಮಾಜದಲ್ಲಿರುವ ಘಾತುಕ ಶಕ್ತಿಗಳಿಂದ ಪ್ರತಿಯೊಬ್ಬರು ತಮ್ಮ ಪುಟ್ಟ ಕಂದಮ್ಮಗಳನ್ನು ರಕ್ಷಿಸಬೇಕಾಗಿದೆ. ನಮ್ಮ ನಮ್ಮ ಮಕ್ಕಳನ್ನು ಇನ್ನಷ್ಟು ಹತ್ತಿರದಲ್ಲಿಟ್ಟುಕೊಂಡು ಕಾಪಾಡಿಕೊಳ್ಳೋಣ.” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

 

 

ಸನ್ನಿ ಲಿಯೋನ್ ಮತ್ತು ಡ್ಯಾನಿಯಲ್ ದಂಪತಿ ಈ ಹಿಂದೆ ಮಹಾರಾಷ್ಟ್ರದ ಲಾಟೂರಿನಿಂದ ನಿಶಾ ಎಂಬಇಪ್ಪತ್ತೊಂದು ತಿಂಗಳ ಕೂಸನ್ನು ದತ್ತು ತೆಗೆದುಕೊಂಡಿದ್ದರು. ಆ ಮಗುವನ್ನು ಚೆಂದಗೆ ನೋಡಿಕೊಂಡಿರುವ ಸನ್ನಿ ಲಿಯೋನ್ ಇದೀಗ ಮತ್ತೆರಡು ಬಡ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾಳೆ! ಈ ನಿಟ್ಟಿನಲ್ಲಿ ಸನ್ನಿ ಇತರೇ ನಟಿಯರಿಗಿಂತಲೂ ಭಿನ್ನವಾಗಿ ಕಾಣಿಸುತ್ತಾಳೆ. ಆಕೆಯೊಳಗಿನ ಮಾತೃತ್ವ ನಿಜಕ್ಕೂ ಮನ ಸೆಳೆಯುತ್ತದೆ. ಆಕೆ ನೀಲಿ ಸಿನಿಮಾ ನಟಿಯಾಗಿದ್ದರೂ, ಏನೇ ಆಗಿದ್ದರೂ ಆಕೆಯೊಳಗಿನ ಅಮ್ಮ ಮಾನವೀಯ ಮನಸುಗಳನ್ನೆಲ್ಲ ತಾಕುತ್ತಾಳೆ. ಅಂದಹಾಗೆ ವೈರಲ್ ಆಗಬೇಕಿರೋದು ಅದ್ಯಾರೋ ಕಣ್ಣು ಹೊಡೆದ ವೀಡಿಯೋ ಅಲ್ಲ; ಇಂಥಾ ಮನುಷ್ಯತ್ವದ ವಿಚಾರಗಳು ವೈರಲ್ ಆಗಬೇಕಿದೆ!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top