ಸಿನಿಮಾ

ಯು-ಟರ್ನ್ ಸಿನಿಮಾ ತಂಡದ ಜೊತೆ ಸೇರ್ಕೊಂಡ ನಟಿ ಭೂಮಿಕಾ

‘ಯು ಟರ್ನ್’ ಸಿನಿಮಾ ಸ್ಯಾಂಡಲ್ವುಡ್ ನಲ್ಲಿ ಹಿಟ್ ಆದ ನಂತರ ನಿರ್ದೇಶಕ ಪವನ್ ಕುಮಾರ್ ಆ ಚಿತ್ರವನ್ನು ತೆಲುಗು, ತಮಿಳಿಗೆ ಕೊಂಡೊಯ್ಯುವ ಸಾಹಸ ಮಾಡಿದ್ದಾರೆ. ಈಗಾಗಲೇ ಒಂದು ಹಂತದ ಚಿತ್ರೀಕರಣ ಕೂಡ ಮುಗಿದಿದೆ. ಮೂಲ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ಮಾಡಿದ್ದ ಪಾತ್ರವನ್ನು ರಿಮೇಕ್​ನಲ್ಲಿ ಸಮಂತಾ ಅಕ್ಕಿನೇನಿ ಅಭಿನಯ ಮಾಡುತ್ತಿದ್ದಾರೆ. ಆದರೆ ರಾಧಿಕಾ ಚೇತನ್ ಮಾಡಿದ್ದ ಪಾತ್ರಕ್ಕೆ ಯಾರು ಎಂಬ ಪ್ರಶ್ನೆ ಮೂಡಿತ್ತು. ಈಗ ಅದಕ್ಕೆ ಉತ್ತರ ದೊರೆತಿದ್ದು, ನಟಿ ಭೂಮಿಕಾ ಚಾವ್ಲಾ ಅವರು ಚಿತ್ರತಂಡ ಸೇರಿಕೊಂಡಿದ್ದಾರೆ.

 

 

ಈ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ಅಭಿನಯ ಮಾಡುತ್ತಿದ್ದಾರೆ, ಸಮಂತಾಗೆ ಆದಿ ಪಿನಿಸೆಟ್ಟಿ ನಾಯಕನಾಗಿ ನಟಿಸಿದ್ದಾರೆ. ಇವರೊಂದಿಗೆ ರಾಹುಲ್ ರವೀಂದ್ರನ್ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ. ನಟಿ ಭೂಮಿಕಾ ಕೂಡಾ ಚಿತ್ರದ ಭಾಗವಾಗಿದ್ದು, ಶೀಘ್ರವೇ ಅವರು ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎಂದು ಚಿತ್ರತಂಡ ಹೇಳಿದೆ.

 

 

ಕೆಲವು ದಿನಗಳ ಹಿಂದೆ ‘ಯು ಟರ್ನ್’ ಚಿತ್ರರಂದ ಜೊತೆಗೆ ತೆಗೆದುಕೊಂಡ ಸೆಲ್ಪಿಯನ್ನು ಪವನ್ ಶೇರ್ ಮಾಡಿದ್ದಾರೆ. ಪೋಟೋದಲ್ಲಿ ಸಮಂತಾ, ಆದಿ ಮೊದಲಾದ ಕಲಾವಿದರ ಜತೆ ಭೂಮಿಕಾ ಕೂಡ ಕಾಣಿಸಿಕೊಂಡಿದ್ದಾರೆ. ‘ಯು ಟರ್ನ್’ ರಿಮೇಕ್​ಗೆ ಭೂಮಿಕಾ ಸೇರ್ಪಡೆಯಾಗಲಿದ್ದಾರೆ ಎಂದು ಈ ಮೊದಲೇ ಚರ್ಚೆಯಾಗಿತ್ತು. ಇದೀಗ ಸ್ವತಃ ಪವನ್ ಆ ಸುದ್ದಿಯನ್ನು ಖಚಿತಪಡಿಸಿದಂತಾಗಿದೆ. ತೆಲುಗು, ತಮಿಳು ಸೇರಿ ಅನೇಕ ಭಾಷೆಗಳಲ್ಲಿ ಭೂಮಿಕಾ ನಟಿಸಿದ್ದಾರೆ. ಕನ್ನಡದ ‘ಗಾಡ್​ಫಾದರ್’, ‘ಲವ್ ಯು ಆಲಿಯಾ’ ಚಿತ್ರಗಳಲ್ಲಿ ಅವರು ನಟನೆ ಮಾಡಿದ್ದರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top