ಅರೋಗ್ಯ

ಬಿಳಿ ತೊನ್ನು , ಬಿಳಿ ಮಚ್ಚೆ ಸಮಸ್ಯೆಗೆ 8 ನೈಸರ್ಗಿಕವಾದ ಮನೆಮದ್ದುಗಳು

ಬಿಳಿ ತೊನ್ನು , ಬಿಳಿ ಮಚ್ಚೆ ಅಥವಾ ಲ್ಯೂಕೋಡರ್ಮಾ ಸಮಸ್ಯೆಗೆ 8 ನೈಸರ್ಗಿಕವಾದ ಮನೆಮದ್ದುಗಳು ..

 

 

ತ್ವಚೆಯಲ್ಲಿರುವ ಪಿಗ್‌ಮೆಂಟೇಶನ್ (ವರ್ಣದ್ರವ್ಯ) ಕೋಶಗಳ ನಾಶವಾಗುವಿಕೆಯಿಂದ ಕಾಣಿಸಿಕೊಳ್ಳುತ್ತದೆ.

ಕೆಲವರಿಗೆ ಇದು ರೋಗ ನಿರೋಧಕ ಶಕ್ತಿಯಿಂದಲೇ ರೋಗ ಬರುವ ಸ್ಥಿತಿಯಿಂದ ಉಂಟಾದರೆ ಇನ್ನು ಕೆಲವರಿಗೆ ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬರುತ್ತದೆ ,
ಕಲುಷಿತ ವಾತಾವರಣ , ಸೋಂಕುಗಳು , ಇತರ ಚರ್ಮ ರೋಗಗಳು ಹೆಚ್ಚಾಗಿಯೂ ಸಹ ಈ ಪರಿಸ್ಥಿತಿ ಉಂಟಾಗಬಹುದು .
ಆದ್ದರಿಂದ ಹೆಚ್ಚು ಕಾಲ ಬಿಸಿಲಿಗೆ ಮೈ ಒಡ್ಡಿದರೆ ಚರ್ಮ ಉರಿಯಾಗುತ್ತದೆ .

 

1. ವೀಳ್ಯದ ಎಲೆ :

 

ನಿಮ್ಮ ಚರ್ಮದ ಮೇಲೆ ಬಿಳಿ ಮಚ್ಚೆಗಳನ್ನೂ ತಡೆಯಲು ದಿನಕ್ಕೆ ಮೂರು ಬಾರಿ ಮೂರು ವೀಳ್ಯದ ಎಲೆ ಜೊತೆ ಸೌತೆಕಾಯಿ ತೆಗೆದುಕೊಳ್ಳಬೇಕು.

 

2. ಕೆಮ್ಮಣ್ಣು:

 

ಕೆಮ್ಮಣ್ಣನ್ನು ಶುಂಠಿಯ ರಸದ ಜೊತೆಗೆ ಮಿಶ್ರಣ ಮಾಡಿ ಹಾನಿಯಾದ ಜಾಗಕ್ಕೆ ಹಚ್ಚಿಕೊಂಡು ನಂತರ 30 ನಿಮಿಷ ಬಿಟ್ಟು ಸ್ನಾನ ಮಾಡುವುದು .

 

3. ಅರಿಶಿನ ಮತ್ತು ಸಾಸಿವೆ ತೈಲ

 

250 ಮಿಲೀ ಶುದ್ಧ ಸಾಸಿವೆ ಎಣ್ಣೆಗೆ, ಅರಿಶಿನ ಐದು ಟೀ ಚಮಚ ಸೇರಿಸಿ. ಹಾನಿಯಾದ ಜಾಗಕ್ಕೆ ಆರು ತಿಂಗಳ ಇಂದ ಒಂದು ವರ್ಷದ ವರೆಗೆ ಹಚ್ಚಿ .

 

4. ತುಳಸಿ ಎಲೆಗಳು ಮತ್ತು ನಿಂಬೆರಸ:

 

ತುಳಸಿ ಎಲೆ ಮತ್ತು ನಿಂಬೆರಸದ ಪೇಸ್ಟ್ ಅನ್ನು ತ್ವಚೆಯ ಮೇಲೆ ಹಚ್ಚಿ ಇದು ಪಿಗ್ ಮೆಂಟೇಷನ್ ಹೆಚ್ಚಿಸುತ್ತದೆ . ಉತ್ತಮ ಫಲಿತಾಂಶಕ್ಕಾಗಿ ಈ ಪೇಸ್ಟ್ ಅನ್ನು ದಿನಕ್ಕೆ ಮೂರು ಬಾರಿ ಲೇಪಿಸಿ.
ಮೆಲನಿನ್ ಉತ್ಪಾದನೆಯನ್ನು ಉತ್ತೇಜಿಸುತ್ತವೆ , ದಿನಕ್ಕೆ ಮೂರು ಬಾರಿ 6 ತಿಂಗಳವರೆಗೆ ಉತ್ತಮ ಫಲಿತಾಂಶಗಳಿಗಾಗಿ ಅನ್ವಯಿಸಬೇಕು.

 

5. ತಾಮ್ರದ ತಟ್ಟೆ ,ಲೋಟ :

 

ಹೌದು ತಾಮ್ರದ ತಟ್ಟೆ ಮತ್ತು ಲೋಟಗಳನ್ನು ದಿನನಿತ್ಯದಲ್ಲಿ ಬಳಸಿ , ತಾಮ್ರದಲ್ಲಿ ಶೇಖರಿಸಿಟ್ಟ ನೀರನ್ನು ಕುಡಿಯಿರಿ .

 

6. ಮೂಲಂಗಿ ಬೀಜಗಳು:

 

ಒಂದು ಚಮಚ ಮೂಲಂಗಿ ಬೀಜಕ್ಕೆ ಎರಡು ಚಮಚ ವಿನೀಗರ್ ಬೆರೆಸಿ ಪೇಸ್ಟ್ ಮಾಡಿಕೊಳ್ಳಿ , ಹಾನಿಯಾದ ಜಾಗಕ್ಕೆ ಆರು ತಿಂಗಳ ಇಂದ ಒಂದು ವರ್ಷದ ವರೆಗೆ ಹಚ್ಚಿ .

 

7. ಸೊರಲಿಯಾ ಮತ್ತು ಹುಣಸೆ ಬೀಜ:

 

ಸೊರಲಿಯಾ ಮತ್ತು ಹುಣಸೆ ಬೀಜವನ್ನು ಸಮ ಪ್ರಮಾಣದಲ್ಲಿ ತಗೆದುಕೊಂಡು ನೀರಿನಲ್ಲಿ 2-3 ದಿನ ನೆನಹಾಕಿ , ನಂತರ ಚೆನ್ನಾಗಿ ಪೇಸ್ಟ್ ರೀತಿ ರುಬ್ಬಿಕೊಂಡು ,
ಹಾನಿಯಾದ ಜಾಗಕ್ಕೆ ಹಚ್ಚಬೇಕು , ಇದು ಬೆಲೆ ಮಚ್ಚೆ ಒಂದೇ ಅಲ್ಲ ದೇಹದ ಇನ್ನಾವುದೇ ಚರ್ಮದ ರೋಗಕ್ಕೆ ಉತ್ತಮ ಮದ್ದು .

 

8. ಬೇವಿನ ಎಲೆಗಳು :

 

5-6 ಸಂಪಿಗೆ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಪೇಸ್ಟ್ ಮಾಡಿಕೊಂಡು , ಇದರಲ್ಲಿ ಎರಡು ಚಮಚ ರಸವನ್ನು ಪ್ರತ್ಯೇಕವಾಗಿ ತೆಗೆದುಕೊಂಡು ಈ ಮಿಶ್ರಣಕ್ಕೆ 1 ಟೀಚಮಚ ಶುದ್ಧ ಜೇನುತುಪ್ಪವನ್ನು ಮಿಶ್ರಣ ಮಾಡಿ. ಬಿಳಿ ಮಚ್ಚೆ ಇರುವ ಪ್ರದೇಶಕ್ಕೆ ಹಚ್ಚಿ , ಇದು ಚರ್ಮದ ಮೇಲೆ ಪುನಃ ವರ್ಣದ್ರವ್ಯವನ್ನು ಹೆಚ್ಚಿಸಿ ಬಿಳಿ ತೇಪೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ .

ಇದರ ಜೊತೆ ವೈದ್ಯರನ್ನು ಸಂಪರ್ಕಿಸಿ ಅವರ ಮಾರ್ಗದರ್ಶನವನ್ನು ಸಹ ಪಡೆಯಿರಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top