fbpx
ರಾಜಕೀಯ

ಉಪೇಂದ್ರ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ , ಸ್ಪಷ್ಟನೆ ನೀಡಿದ ಉಪ್ಪಿ ತಾಯಿ

ರಿಯಲ್ ಸ್ಟಾರ್ ಉಪೇಂದ್ರ ಈಗಾಗಲೇ ರಾಜಕೀಯಕ್ಕೆ ಧುಮುಕಿದ್ದು, ಮೊದಲು ಕೆಪಿಜೆಪಿ ಪಕ್ಷದ ಕಹಿ ಅನುಭವಿಸಿದ ನಂತರ ತಮ್ಮದೇ ಪಕ್ಷ ಸ್ಥಾಪಿಸುವುದಾಗಿ ಘೋಷಣೆ ಮಾಡಿ ಅನೇಕ ದಿನಗಳೇ ಕಳೆದರೂ ಅದರ ಬಗ್ಗೆ ಸುದ್ದಿಯೇ ಇಲ್ಲ. ಇನ್ನು ಉಪೇಂದ್ರ ಈ ಚುನಾವಣೆಯಲ್ಲಿ ಸ್ಪರ್ಧೆ ಮದಲ್ಲಿದ್ದಾರೆಯೇ ಎಂಬ ಪ್ರಶೆಗೆ ಈಗ ಉಪೇಂದ್ರ ತಾಯಿ ಅನುಸೂಯ ಪ್ರತಿಕ್ರಿಯೆ ನೀಡಿದ್ದಾರೆ.

 

 

ಈ ಬಾರಿ ಉಪೇಂದ್ರ ಚುನಾವಣೆಗೆ ಬರೋದು ಅನುಮಾನ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಡೌಟ್ ಇದೆ. ಆದ್ರೆ ಇನ್ನೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

 

 

ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಉಪೇಂದ್ರ ಮತ್ತು ಅವರ ಪ್ರಜಾಕೀಯ ಪಕ್ಷದ ಯಾರೂ ಸ್ಪರ್ಧೆ ಮಾಡುವುದಿಲ್ಲ ಎನ್ನುವ ಸುದ್ದಿ ಮೂಲಗಳಿಂದ ತಿಳಿದುಬಂದಿದೆ.

 

 

ಮೇ ತಿಂಗಳಿನಿಂದ ಪಕ್ಷ ಸ್ಥಾಪನೆ, ಸಂಘಟನೆ ಬಗ್ಗೆ ಯೋಜನೆ ತಯಾರಿಸಲಿದ್ದೇನೆ. ಮುಂದಿನ ವರ್ಷದ ಚುನಾವಣೆಗೆ ತಯಾರಿ ನಡೆಸಲಿದ್ದೇನೆ ಎಂದು ಉಪೇಂದ್ರ ತಿಳಿಸಿದ್ದಾರೆ. ಆ ಮೂಲಕ ನೇರವಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಸುಳಿವು ನೀಡಿದ್ದಾರೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top